ದೇಶ ಸುತ್ತು: ಉತ್ತರ ಭಾರತ ಪ್ರವಾಸ - ಭಾಗ ೫

- ಅಕ್ಷಯರಾಮ ಕಾವಿನಮೂಲೆ


ಕುಫ್ರಿಯ ತುದಿಯಲ್ಲಿ
ಕುಫ್ರಿಯ ತುದಿ ತಲುಪಿದಾಗ ಅದಾಗಲೇ ಸೂರ್ಯಾಸ್ತವಾಗಿತ್ತು. ಹಿಮಾಚಲದ ಗಿರಿಶೃಂಗಗಳು ಓಕುಳಿಯಾಡಿ ಕೆಂಪೇರಿದ್ದವು. ಅಲ್ಲೊಂದು ಪುಟ್ಟ ದೇವಸ್ಥಾನ. ಸುತ್ತಮುತ್ತಲಿನ ಅಂಗಡಿಗಳು ಅದಾಗಲೇ ಮುಚ್ಚತೊಡಗಿದ್ದವು. ವಿರಳವಾಗಿದ್ದ ಜನಸಂದಣಿಯಿಂದಾಗಿ ತುಸು ಹೊತ್ತು ಪ್ರಶಾಂತವಾಗಿ ಸೂರ್ಯಾಸ್ತದ ಚೆಲುವನ್ನು ಅಸ್ವಾದಿಸಲು ಸಾಧ್ಯವಾಯಿತು. ಮಂಜಿನ ಸಿಂಚನದ ಜೊತೆ ಜೋರಾಗಿ ಬೀಸುತ್ತಿದ್ದ ಕುಳಿರ್ಗಾಳಿ ನಮ್ಮನ್ನು ಹೆಚ್ಚು ಹೊತ್ತು ಅಲ್ಲಿರಲು ಬಿಡಲಿಲ್ಲ. ನಡುಗುತ್ತಾ ಕುದುರೆಯೇರಿ ಮುಖ್ಯ ರಸ್ತೆಯತ್ತ ಹೊರಟೆವು.

ಕೋಶ ಓದು: ಇಲ್ಲಿಯವರೆಗಿನ ನೇಮಿಚಂದ್ರರ ಕತೆಗಳು

-  ರವಿಶಂಕರ್ ಶಾಸ್ತ್ರಿ

ಲೇಖಕಿ: ನೇಮಿಚಂದ್ರ 

ನೇಮಿಚಂದ್ರ ವೃತ್ತಿಯಿಂದ ಇಂಜಿನಿಯರ್ ಆದ ಲೇಖಕಿ, ಎಚ್.ಎ.ಎಲ್ ನಲ್ಲಿ ಹಿರಿಯ ಹುದ್ದೆಯಲ್ಲಿದ್ದಾರೆ. ಈ ಪುಸ್ತಕದಲ್ಲಿ ಒಟ್ಟು 26 ಕತೆಗಳಿವೆ. ತಮ್ಮ ಕೆಲಸದ ನಿಮಿತ್ತ ದೇಶ, ವಿದೇಶಗಳ ವಿವಿಧ ಭಾಗಗಳಿಗೆ ಪ್ರಯಾಣಿಸುವ ಅವರು, ಅಲ್ಲಿಯ ಜನ ಜೀವನ, ಸಂಸ್ಕೃತಿ ಹಾಗೂ ಜೀವನ ಶೈಲಿಗಳನ್ನು ಕತೆಗಳ ಮೂಲಕ ಪರಿಚಯಿಸುತ್ತಾರೆ.

ಅರಿವಿನ ಕಣ್ಣು ತೆರೆಸಿದ ಸ್ಕೇಟ್ ಬೋರ್ಡ್ - ಭಾಗ ೧

ಇಂಗ್ಲೀಷ್ ಮೂಲ – ಮೇರಿಯಂ ಗಾರಿಬನ್
ಕನ್ನಡಕ್ಕೆ – ಮೋಹನ್ ಮೂರ್ತಿ ಮಾ. ಕೆಂ.


(ಮೇರಿಯಂ ಗಾರಿಬನ್ ಇರಾನ್ ಮೂಲದ ಅಮೆರಿಕದ ಹವ್ಯಾಸೀ ಬರಹಗಾರ್ತಿ. ಅವರ ಪೋಷಕರು ದಶಕಗಳ ಹಿಂದೆಯೇ ಇರಾನ್ ತ್ಯಜಿಸಿ ಅಮೆರಿಕದಲ್ಲಿ ನೆಲೆಸಿದ್ದಾರೆ. ಪ್ರಸ್ತುತ ಮೇರಿಯಂ ಅಮೆರಿಕದ ಖಾಸಾಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಬಿಡುವಿನ ಸಮಯದಲ್ಲಿ ಸರ್ಕಾರೇತರ ಸಂಘ ಸಂಸ್ಥೆಗಳೊಂದಿಗೆ ಸೇರಿ ಏಡ್ಸ್ ಪೀಡಿತ ಹಾಗೂ ಬಡತನ ರೇಖೆಗಿಂತ ಕೆಳಗಿರುವ ಮಕ್ಕಳ ಆರೋಗ್ಯ ಹಾಗೂ ಶಿಕ್ಷಣಕ್ಕಾಗಿ ಕೆಲಸ ಮಾಡುತ್ತಾರೆ. ಆಗಾಗ್ಗೆ ತಮ್ಮ ಅನುಭವಗಳನ್ನು ಬರಹಗಳ ರೂಪದಲ್ಲಿ ದಾಖಲಿಸುವುದು ಅವರ ಹವ್ಯಾಸ. ಈ ಲೇಖನದಲ್ಲಿ ಅವರು ಸ್ಕೇಟ್ ಬೋರ್ಡ್ ಕಲಿಯಲು ಪ್ರಾರಂಭಿಸಿದಾಗಿನ ತಮ್ಮ ಅನುಭವಗಳನ್ನು ದಾಖಲಿಸಿದ್ದಾರೆ.)