ತಪ್ಪೊಪ್ಪಿಗೆ

 -ಶ್ರೀ"ಖಾರ"

ಘಟನೆ ೧ - ನಾವು ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುತ್ತೇವೆ. ದಾರಿಯಲ್ಲಿ ಒಂದು ನಾಲ್ಕು ಚಕ್ರದ ವಾಹನ ಜೊತೆ ನಮಗೆ ಅಪಘಾತ ಆಗುತ್ತದೆ, ತಪ್ಪು ಯಾರದೆಂದು ವಿಮರ್ಶೆ ಮಾಡುವ ಮೊದಲು ನಾವು "ನಿರ್ಧಾರ" ಕ್ಕೆ ಬಂದಿರುತ್ತೇವೆ. "ಏನು ದೊಡ್ಡ ಗಾಡಿ ಯಲ್ಲಿ ಬಂದರೆ ಧಿಮಾಕ? ಚಿಕ್ಕ ಗಾಡಿಯವರು ಕಾಣಲ್ವ" ಅಂತ ಅರ್ಭಟಿಸಿರುತ್ತೇವೆ .

ಮನಸ್ಸಿದ್ದರೆ ಮಾರ್ಗ

-ಅಕ್ಷಯರಾಮ ಕಾವಿನಮೂಲೆ

"ಛೇ, ಯಾವಾಗಲೂ ಇದೇ ಗೋಳು, ಎಲ್ಲರಲ್ಲೂ 'ದಂಡಪಿಂಡ' ಎಂದು ಬೈಸಿಕೊಂಡಾಯ್ತು. ನನ್ನ ಹಣೆಬರಹವೇ ಇಷ್ಟು!" ಗೊಣಗಿಕೊಂಡು ಹೆಜ್ಜೆ ಹಾಕಿದ ಸುರೇಶ. ಪಿ.ಯು.ಸಿ. ಪಾಸಾಗದಿದ್ದರೂ ಸುರೇಶ ದಡ್ಡನೇನೂ ಅಲ್ಲ. ಅವನಿಗೆ ಅತನದೇ ಹತ್ತು ಹಲವು ಕಲ್ಪನೆ, ಭಾವನೆಗಳಿದ್ದವು. ವಿದ್ಯೆ ನೈವೇದ್ಯವಾದರೂ ಪ್ರಕೃತಿ ಪ್ರಿಯ. ಚಾರಣ, ಈಜು, ಅಲೆದಾಟಗಳೇ ಅಚ್ಚುಮೆಚ್ಚು ! ನೆರೆಹೊರೆಯವರ, ನೆಂಟರಿಷ್ಟರ ಬಾಯಿಗೆ ಸುರೇಶ ಅನವರತ ಆಹಾರವಾಗಿದ್ದ. ಆತನ ಬಗ್ಗೆ ನಾಲ್ಕು ಚುಚ್ಚುಮಾತು ಆಡದೇ ಇದ್ದರೆ ಅವರ ಕಣ್ಣಿಗೆ ನಿದ್ರೆ ಹತ್ತದು.

ಬೈಹುಲ್ಲು ಖಾದ್ರಿ

-ಅಕ್ಷಯರಾಮ ಕಾವಿನಮೂಲೆ

ಇತ್ತೀಚೆಗೆ ಕೊಂಡ ಶ್ರೀ ನರೇಂದ್ರ ರೈ ದೇರ್ಲ ಅವರ 'ಹಸಿರು ಕೃಷಿಯ ನಿಟ್ಟುಸಿರುಗಳು' ಪುಸ್ತಕದ ಪುಟಗಳನ್ನು ತಿರುವುತ್ತಿದ್ದಾಗ ಮಾಡಾವು ಉಸ್ಮಾನ್ ಬ್ಯಾರಿಯ ಲಾರಿ ಬಗ್ಗೆ ಒಂದು ಲೇಖನ ಕಂಡಿತು. "ಅರೇ, ನಾವು ಸಣ್ಣದಿದ್ದಾಗ ಮನೆಗೆ ಬೈಹುಲ್ಲು ತರುತ್ತಿದ್ದ ಜನ ಅಲ್ವಾ ?" ಎಂದು ಅಪ್ಪನ ಹತ್ತಿರ ಹೇಳಿದಾಗ "ಹೌದು, ಆದರೆ ಉಸ್ಮಾನಿನ ಅಪ್ಪ ಖಾದ್ರಿಯ ಬಗ್ಗೆಯೂ ಬರೆಯಬೇಕಿತ್ತು, ಒಳ್ಳೆಯ ಮನುಷ್ಯ" ಎನ್ನುವ ಉದ್ಗಾರ ಬಂತು.

ದ್ವೀಪ ಸಮೂಹದ ಕಥೆ

-ಅಕ್ಷಯರಾಮ ಕಾವಿನಮೂಲೆ

ಲೇ: ಜಿ.ಎನ್. ಅಶೋಕವರ್ಧನ 
ಬೆಲೆ: 75 ರೂಪಾಯಿಗಳು

ಅಂಡಮಾನ್ ದ್ವೀಪಗಳು ನಿಜಕ್ಕೂ ಅದ್ಭುತವಾದ ಪ್ರಾಕೃತಿಕ ಸೌಂದರ್ಯದ ಖನಿಗಳು. ವರ್ಷಕ್ಕೆ ಅದೆಷ್ಟೋ ಲಕ್ಷ ಮಂದಿ ಪ್ರವಾಸಿಗರು ಅಂಡಮಾನಿನ ಪರಿಸರದ ಸವಿಯುಂಡು ಬರುತ್ತಾರೆ ಆದರೆ ಆ ರಮ್ಯಾದ್ಭುತ ಅನುಭವವನ್ನು ಅಕ್ಷರಕ್ಕಿಳಿಸುವ ಸತ್ಕಾರ್ಯ ಮಾಡಿದವರು ಬಹಳ ವಿರಳ ! ತೇಜಸ್ವಿಯವರ 'ಅಲೆಮಾರಿಯ ಅಂಡಮಾನ್' ಓದಿ, ಈ ದ್ವೀಪರಾಶಿಯ ಬಗ್ಗೆ ಆಸಕ್ತರಾಗದವರಿಲ್ಲ. 

ಹಾಗೇ ಸುಮ್ಮನೇ....!!

- ನಾಮದೇವ್ ರೇಣಕೆ

ನಮಸ್ಕಾರ ಓದುಗರೇ...! ಓದುಗರು ಎಂದಾಕ್ಷಣ ಥಟ್ ಅಂತ ನೆನಪಾಗೋದು ಬರಹಗಾರರೂ, ಕವಿಗಳೂ ಕೂಡ. ಓದುಗಾರರಿಗೆ ಮುದ ನೀಡುವ, ತಮ್ಮ ಅನಿಸಿಕೆಗಳಿಗೆ ಅಕ್ಷರಗಳಿಂದ ಜೀವ ತುಂಬುವ ಆ ಬರಹಗಾರರಿಗೆ ನನ್ನದೊಂದು ಸಲಾಮ್..!! ಹೌದು ನನ್ನ ಈ ಬರಹ, ನನ್ನೀ ಪ್ರಯತ್ನ, ನನ್ನೀ ಅನಿಸಿಕೆ ಬರಹಗಾರರ ಕುರಿತು, ಬರಹಗಾರರಾಗಬಯಸುವವರಿಗಾಗಿ..

ಸ್ವಗತ

-ರವಿಶಂಕರ್ ಶಾಸ್ತ್ರಿ
ನಾನು ಪುಟ್ಟ ಮಗುವು ಈಗ
ಜಗವು ಸುಂದರ.
ಅಲ್ಲಿ ನೋಡು ನಗುತಲಿರುವ 
ಮುದ್ದು ಚಂದಿರ.

ಕಾರ್ಮಿಕ ನೀತಿ

-ಧನುಷ್ ಗೌಡ (ಆದರ್ಶ ಮಹದೇವ)

ನನ್ನ ವಿದೇಶ ಪ್ರವಾಸದ ನಂತರ ವಿದೇಶಿಗನ ಒಂದು ಪ್ರಶ್ನೆ ನನ್ನ ಮನಸ್ಸನ್ನು ತುಂಬ ಕಾಡತೊಡಗಿತು. ಆ ಪ್ರಶ್ನೆ ಈ ರೀತಿಯಿತ್ತು, ‘ನಿಮ್ಮ ದೇಶದಲ್ಲಿ ನಿಮಗಾಗಿ ಕಾರ್ಮಿಕ ನೀತಿಯಿಲ್ಲವೆ’ ತಕ್ಷಣ ನನ್ನಲ್ಲಿ ಉತ್ತರವಿರಲಿಲ್ಲ. ಹೌದು ನನಗೆಗೊತ್ತು ನಿಮ್ಮಲ್ಲಿ ಉತ್ತರವಿಲ್ಲವೆಂದು. ಅದರ ಬಗ್ಗೆ ಮುಂದುವರಿಯುವುದರ ಮೊದಲು ಸ್ವಲ್ಪ ಇದರ ಹಿನ್ನೆಲೆಯನ್ನರಿಯೋಣ.

ಜೇನು

-ಮೋಹನ್ ಮೂರ್ತಿ ಮಾಕೆಂ

ಹಲವಾರು ವರ್ಷಗಳ ಕೆಳಗೆ ’ಮಯೂರ’ದಲ್ಲಿ ಜೇನ್ನೊಣಗಳ ಹಿನ್ನೆಲೆಯನ್ನೊಳಗೊಂಡ ಕಥೆಯೊಂದು ಬಂದಿತ್ತು. ಆ ಕಥೆಯಲ್ಲಿ ಬಂದಂತಹ ಜೇನ್ನೊಣಗಳು ಮಧುವನ್ನು ಹೀರಿಕೊಂಡು ತಮ್ಮ ಗೂಡಿಗೆ ಮರಳುವಾಗ ನೃತ್ಯದ ಮೂಲಕ ಇತರೆ ಜೇನ್ನೊಣಗಳಿಗೆ ತಾವು ಮಧುವನ್ನು ಹೀರಿಕೊಡು ಬಂದ ಹೂವಿರುವ ಸ್ಥಳವನ್ನು ಸೂಚಿಸುತ್ತವೆ ಎಂಬ ಅಂಶ ನನ್ನಲ್ಲಿ ಸಾಕಷ್ಟು ಕುತೂಹಲವನ್ನು ಕೆರಳಿಸಿತ್ತು. ಇಂತಹ ಕುತೂಹಲವನ್ನು ತಣಿಸಿಕೊಳ್ಳುವ ಅವಕಾಶ ೨೦೦೫ರಲ್ಲಿ ನಾನು ಸ್ನಾತಕೋತ್ತರ ವ್ಯಾಸಂಗಕ್ಕಾಗಿ ವಿದ್ಯಾರ್ಥಿನಿಲಯದಲ್ಲಿದ್ದಾಗ ಒದಗಿ ಬಂತು.