ದೇಶ ಸುತ್ತು: ಉತ್ತರ ಭಾರತ ಪ್ರವಾಸ - ಭಾಗ ೭


- ಅಕ್ಷಯರಾಮ ಕಾವಿನಮೂಲೆ


ನಮ್ಮ ಟ್ಯಾಕ್ಸಿ ಡ್ರೈವರ್ ಪ್ರಾಯಸ್ಥ. ಬಹಳ ಸಮಾಧಾನದಿಂದ ಕಾರು ಓಡಿಸುತ್ತಾ ಮೊದಲಿಗೆ ನಮ್ಮನ್ನು 'ನಹಾರ್ ಗಢ' ಕೋಟೆಗೆ ಕರೆದೊಯ್ದ. ಜೈಪುರ ಪಟ್ಟಣದಿಂದ ಹೊರಬಂದ ಹಾಗೆಯೇ ಕುರುಚಲು ಕಾಡುಗಳಿಂದ ಆವೃತ್ತವಾದ ಗುಡ್ಡಗಳ ಸಾಲು. ತಿರುವುಮುರುವುಗಳಿಂದ ಕೂಡಿದ ಚಿಕ್ಕ ರಸ್ತೆಯಲ್ಲಿ ಮೇಲೇರುತ್ತಾ ಸಾಗಿದೆವು. ಗುಡ್ಡವೊಂದರ ತುದಿಯಲ್ಲಿತ್ತು ನಹಾರ್ ಗಢ. ಟಿಕೆಟ್ ಕೊಂಡು ಕೋಟೆಯ ದ್ವಾರದೊಳಗೆ ಪ್ರವೇಶಿಸಿದೆವು. ಮಾಧವೇಂದ್ರ ಅರಮನೆಯೇ ಕೋಟೆಯೊಳಗಿನ ಪ್ರಧಾನ ಆಕರ್ಷಣೆ. ಟಿಕೆಟ್ ಪರಿಶೀಲಿಸುವ ಸಿಬ್ಬಂದಿಯೋರ್ವ ಇನ್ನೊಂದಿಷ್ಟು ಕಾಸು ಸಂಪಾದಿಸಲು ಗೈಡ್ ಪಾತ್ರವನ್ನೂ ಮಾಡಿದ.

ಕೋಶ ಓದು : ೫ ಪೈಸೆ ವರದಕ್ಷಿಣೆ

- ರವಿಶಂಕರ್ ಶಾಸ್ತ್ರಿ

ವಸುಧೇಂದ್ರರವರ ೨೪ ಪ್ರಬಂಧಗಳ ಸಂಕಲನ ಇದಾಗಿದೆ. ದಿನನಿತ್ಯದ ಸರಳ ವಿಷಯಗಳನ್ನು ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಿಸಿದ್ದಾರೆ ಲೇಖಕರು. ಎಂದಿನಂತೆ ವಸುಧೇಂದ್ರರ ಪುಸ್ತಕಗಳು ಒಮ್ಮೆ ರುಚಿ ಸಿಕ್ಕಿದರೆ ಮತ್ತೆ ಕೊನೆಯ ಪುಟದವರೆಗೆ ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ, ಮಧ್ಯೆ ನಿಲ್ಲಿಸುವುದು ಬಲು ಕಷ್ಟ! ಅನೇಕ ವರ್ಷಗಳ ಕಾಲ ಮಾಹಿತಿ ತಂತ್ರಜ್ಞಾನ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿದರೂ ಅವರು ಬರೆಯುವ ವಿಷಯಗಳು ವೈವಿಧ್ಯಮಯವಾಗಿರುತ್ತದೆ. 

ಕೋಶ ಓದು : ಚಿನ್ನದ ಮೀನು

 - ರವಿಶಂಕರ್ ಶಾಸ್ತ್ರಿ

ಲೇಖಕರು: ರೋಹಿತ್ ಚಕ್ರತೀರ್ಥ

ವಿಜ್ಞಾನಕ್ಕೆ ಸಂಬಂಧಿಸಿದ ಕಠಿಣ ವಿಷಯಗಳನ್ನು ಸಾಮಾನ್ಯ ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಬರೆಯಬಲ್ಲವರು ರೋಹಿತ್ ಚಕ್ರತೀರ್ಥ. ನಾಡಿನ ಹಲವಾರು ದಿನಪತ್ರಿಕೆ-ವಾರಪತ್ರಿಕೆ ಇತ್ಯಾದಿಗಳಲ್ಲಿ ಹಲವಾರು ಲೇಖನಗಳನ್ನು ಬರೆದು ಪ್ರಸಿದ್ಧರಾಗಿದ್ದಾರೆ.

ನೋವು

- ರವಿಶಂಕರ್ ಶಾಸ್ತ್ರಿ
ಒದ್ದೆಯಾದ ಕಣ್ಣಿಂದ
ಅವಳ ಇಣುಕಿ ನೋಡಿದೆ
ಹೊಂಚು ಹಾಕಿ ಕುಳಿತ ಮನವು
ಮುದ್ದೆಯಾಗಿ ಹೋಗಿದೆ.

ಮಾನದಂಡ

- ಮೋಹನ್ ಮೂರ್ತಿ ಮಾ ಕೆಂ

(ತಂದೆ ತಾಯಿ ಟಿವಿಯಲ್ಲಿ ಜನಪ್ರಿಯ ರಿಯಾಲಿಟಿ ಕಾರ್ಯಕ್ರಮ ನೋಡುತ್ತಾ ಕುಳಿತಿರುವರು. ರೂಂನಲ್ಲಿ ಮಲಗಿದ್ದ ಮಗನ ಆಗಮನ.)

ಮಗ - ಏನ್ರಪಾ ಈ ಕಾರ್ಯಕ್ರಮ ನೋಡ್ತಾ ಇದಿರಲ್ಲಾ.
ತಂದೆ - ಏನೋ ಟೈಂ ಪಾಸ್ ಆಗ್ಬೇಕಲ್ಲ.
ಮಗ - ಟೈಂ ಪಾಸ್ ಆಗೋಕೆ ಟಿವಿನೇ ನೋಡ್ಬೇಕಾ, ಯಾವುದಾದರೂ ಬುಕ್ ಓದ್ಬೋದಲ್ವಾ?
ತಂದೆ - ಏನೋ ಈಗೀಗ ಬುಕ್ ಓದೋಕೆ ಆಸಕ್ತೀನೇ ಬರ್ತಾ ಇಲ್ಲ.
ಮಗ - ಹೋಗ್ಲಿ, ಈ ರಿಯಾಲಿಟಿ ಕಾರ್ಯಕ್ರಮದಲ್ಲಿ ಯಾರು ಗೆಲ್ಲಬಹುದು.

ಬಹುರೂಪಿ

- ಮೋಹನ್ ಮೂರ್ತಿ ಮಾ ಕೆಂ

ನನ್ನೊಂದು ವರ್ಷದ ಮಗಳು
ಪಕ್ಕಾ ಸಮಾಜವಾದಿ.
ಸರ್ವರಿಗೂ ಸಮಪಾಲು, ಸಮಬಾಳೆಂಬ