ನಮ್ಮ ಚೆಲುವೇಗೌಡರು – ಭಾಗ ೨

-ಮೋಹನ್ ಮೂರ್ತಿ ಮಾ ಕೆಂ
[ಇದು ನಾನು ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾಗ ಕಾಲೇಜಿನ ಪ್ರಾಂಶುಪಾಲರಾಗಿದ್ದ ಚೆಲುವೇಗೌಡರ ಬಗ್ಗೆ ನಾನು ಎರಡು ಭಾಗಗಳಲ್ಲಿ ಬರೆಯುತ್ತಿರುವ ಲೇಖನದ ಎರಡನೇ ಮತ್ತು ಅಂತಿಮ ಭಾಗ. ಮೊದಲನೇ ಭಾಗ ಇಲ್ಲಿದೆ ನಮ್ಮ ಚೆಲುವೇಗೌಡರು - ಭಾಗ ೧. ಈ ಲೇಖನ ಮಾಲಿಕೆಯು ಸಂಪೂರ್ಣವಾಗಿ ಚೆಲುವೇಗೌಡರ ಬಗೆಗಿನ ವಿವರಗಳನ್ನು ಒಳಗೊಳ್ಳದೇ ಹೋದರೂ, ಅವರ ಜತೆಗೆ ಒಡನಾಡಿದ ಹಲವು ಘಟನೆಗಳ ಮೂಲಕ ಪ್ರಾಂಶುಪಾಲ ಚೆಲುವೇಗೌಡರನ್ನು ಸ್ವಲ್ಪ ಪ್ರಮಾಣದಲ್ಲಿ ಓದುಗರಿಗೆ ಪರಿಚಯಿಸುವುದು ನನ್ನ ಉದ್ದೇಶ.]

ದೇಶ ಸುತ್ತು: ಉತ್ತರ ಭಾರತ ಪ್ರವಾಸ - ಭಾಗ ೧

- ಅಕ್ಷಯರಾಮ ಕಾವಿನಮೂಲೆ

ಬಹುದಿನಗಳ ಕನಸೊಂದನ್ನು ನನಸು ಮಾಡುವ ದಿನ ಬಂತು. ಅದೊಂದು ಸಂಜೆ ಅಪ್ಪ, ಅಮ್ಮನ ಬಳಿ ಮನದಲ್ಲಿದ್ದದ್ದನ್ನು ಹೇಳಿಯೇಬಿಟ್ಟೆ. "ಒಂದಷ್ಟು ದಿನಗಳ ಕಾಲ ಪ್ರವಾಸ ಹೋಗಲೇ ?" ಅನುಮತಿಯೂ ಸಿಕ್ಕಿತು. ಕೇರಳ ಪ್ರವಾಸದ ಯೋಜನೆ ಫಲಪ್ರದವಾಗದೇ ಹಾಗೇ ಉಳಿದಿತ್ತು. ಆದರೆ ಉತ್ತರ ಭಾರತದತ್ತ ಮನ ಎಳೆದಿತ್ತು. ಐದು ವರ್ಷಗಳ ಮೊದಲು ದೆಹಲಿಯ ಆಸುಪಾಸು ಸ್ವಲ್ಪ ಸಮಯ ಕೆಲಸ ಮಾಡಿದ್ದರೂ ಅಲ್ಲಿನ ಪ್ರೇಕ್ಷಣೀಯ ಸ್ಥಳಗಳನ್ನು ಸುತ್ತುವ ಅವಕಾಶ ಸಿಕ್ಕಿರಲಿಲ್ಲ. ಮತ್ತೆ ಮದುವೆ, ಮಗು ಆದ ಬಳಿಕ ಆಲ್ಲಿಗೆ ಹೋಗಲಾಗಲಿಲ್ಲ. ಕೆಲಸದಲ್ಲಿ ಇರುವಾಗಲಂತೂ ಮೂರು ನಾಲ್ಕು ದಿನಗಳಿಗಿಂತ ಹೆಚ್ಚು ತಿರುಗಲು ಹೋಗುವುದು ಕನಸಿನ ಮಾತಾಗಿತ್ತು. ಈಗ ಆ ತಲೆನೋವಿಲ್ಲ. ಹದಿನೈದು ದಿನಗಳ ಕಾಲ ಉತ್ತರ ಭಾರತಕ್ಕೆ ಪಯಣ ಎಂದು ನಿರ್ಧರಿಸಿದೆ.

ಮಳೆ

-ರವಿಶಂಕರ್ ಶಾಸ್ತ್ರಿ
ಮಳೆ ಬಂದೇ ಬಂತು
ಎಡೆಬಿಡದೆ ಬಂತು
ಸಾಕು ಸಾಕೆಂದರೂ ಬಂತು
ಬಿಟ್ಟು ಬಿಡದೇ.

ಕೋಶ ಓದು: ನಿಮ್ಮಷ್ಟು ಸುಖಿ ಯಾರಿಲ್ಲ ನಿಮಗೇಕೆ ಅದು ಗೊತ್ತಿಲ್ಲ?

- "ಶ್ರೀ"ಖಾರ
ಲೇಖಕರು: ವಿಶ್ವೇಶ್ವರ ಭಟ್


ಬಸ್ಸಿನಲ್ಲಿ ಹೋಗುವ ಕೆಲವರು ಅದೇ ರಸ್ತೆಯಲ್ಲಿ ಕಾರಿನಲ್ಲಿ ಹೋಗುವ ಜನರನ್ನು ನೋಡಿ ನಮ್ಮ ಹತ್ತಿರ ಅ ರೀತಿ ಕಾರ್ ಇಲ್ಲವಲ್ಲ ಎಂದು ಯೋಚನೆ ಮಾಡುತ್ತಾರೆ. ಆದರೆ ಅದೇ ರಸ್ತೆಯಲ್ಲಿ ಕಾಲಿಲ್ಲದೆ ಕಷ್ಟ ಪಟ್ಟು ಕುಂಟುತ್ತಾ ಹೋಗುತ್ತಾ ಇರುವ ವ್ಯಕ್ತಿಯನ್ನ ನೋಡಿ ದೇವರೇ ನನ್ನ ಹತ್ತಿರ ಕಾರು ಇಲ್ಲದಿದ್ದರೂ ಪರವಾಗಿಲ್ಲ, ನಡೆದಾಡೋಕೆ ಕಾಲು ಕೊಟ್ಟಿದೆಯಲ್ಲ ಎಂದು ಸಮಾಧಾನ ಮಾಡಿಕೊಳ್ಳುವವರು ತುಂಬಾ ಕಡಿಮೆ.

ದೊಡ್ದವರೆಲ್ಲಾ ಜಾಣರಲ್ಲ

- "ಶ್ರೀ"ಖಾರ
ನನಗಾಗ ಸುಮಾರು ಎಂಟು ವರ್ಷ . ಬೇಸಗೆ ರಜೆ ಬಂದರೆ ಅಜ್ಜಿ ಮನೆಗೆ ಹೋಗೋದು ಅಲ್ಲಿ ಎಲ್ಲಾ ಮಕ್ಕಳೊಂದಿಗೆ ಆಡಿ ಕುಣಿಯೋದು ಮಾಡುತ್ತಿದ್ದೆ. ಒಂದು ದಿನ ಮನೆಗೆ ಮೀನು ಮಾರೋದಕ್ಕೆ ಒಬ್ಬ ವ್ಯಕ್ತಿ ಬಂದಿದ್ದ. ನನ್ನ ತಾತ ಅವನ ಹತ್ತಿರ ವ್ಯಾಪಾರ ಶುರು ಮಾಡಿದರು. ಸ್ವಲ್ಪ ಹೊತ್ತಿನ ನಂತರ ಏನಾಯ್ತೋ ಗೊತ್ತಿಲ್ಲ ಅ ವ್ಯಕ್ತಿ ಅಲ್ಲಿಂದ ವ್ಯವಹಾರ ಕುದುರದೆ ಹೊರಟು ಹೋದ. ಆಗ ಅಲ್ಲೇ ಗೋಲಿ ಆಡುತ್ತಿದ್ದ ನನ್ನನ್ನು ಕರೆದು ನಮ್ಮ ತಾತ ಹೇಳಿದ್ರು ಅಲ್ಲಿ "ಒಬ್ಬ ಬೆಸ್ತ ಹೋಗ್ತಾ ಇದ್ದಾನೆ ನೋಡು ಕೂಗು". ನಾನು ಅಲ್ಲಿಂದ ಓಡಿ ಹೋಗಿ ದೂರದಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಕುರಿತು  "ಏ ಬೆಸ್ತ, ನಮ್ಮ ತಾತ ಕೂಗ್ತಾ ಇದ್ದಾರೆ ನೋಡು" ಎಂದು ಕೂಗಿದ. ಹಾಗಂದಿದ್ದೇ ತಡ ಅ ವ್ಯಕ್ತಿ ಅಲ್ಲಿಂದಲೇ ಜೋರಾಗಿ ನನಗೆ ಹೊಡಿಯುವ ರೀತಿ ಓಡಿ ಬಂದ. ನಾನು ಓಡಿ ಹೋಗಿ ಮನೆ ಸೇರಿದೆ. 

ಸುಖ, ಸಂತೋಷ, ಖುಷಿ ಇತ್ಯಾದಿ

- ಚಿದಂಬರ

ಮೇಲ್ನೋಟಕ್ಕೆ ಸುಖ, ಸಂತೋಷ, ಖುಷಿ, ಆನಂದ, ಅತ್ಯಾನಂದ, ನಿತ್ಯಾನಂದ, ಪರಮಾನಂದ, ಪರಮಸುಖ ಎಲ್ಲವೂ ಒಂದೇ ಅರ್ಥ ಬರುವಂತೆ ಗೋಚರಿಸಿದರೂ ಅವುಗಳ ಮೂಲಾರ್ಥ ವಿಭಿನ್ನ. ಕೆಲವು ಇಂದ್ರಿಯಗಳಿಗೆ ಸೀಮಿತವಾದರೆ ಇನ್ನು ಕೆಲವು ಇಂದ್ರಿಯಾತೀತ ! ಕೆಲವು ಜಟೆ, ಕಾವಿ, ಭಂಗಿ, ಸುರೆ ಇತ್ಯಾದಿಗಳಿಂದ ಆಮದಾಗಿರುವ ಅಮಲುಗಳಾದರೆ. ಇನ್ನೂ ಕೆಲವು ಭಾವನೆ, ಎಮೋಷನ್ಸ್ ಗಳಿಗೆ ಸೀಮಿತ ! ಕೆಲವು ಧ್ಯಾನಿಗಳಿಗೆ, ಮೌನಿಗಳಿಗೆ, ಸಾಧು ಸಂತರ ವ್ಯಾಪ್ತಿ ಪ್ರದೇಶದಲ್ಲಿದ್ದರೆ ಇನ್ನೂ ಕೆಲವು ಪ್ರೀತಿ, ಪ್ರೇಮ, ಪ್ರಣಯ, ಕಾಮಗಳ ಚಕ್ರದಲ್ಲಡಗಿರುವಂಥವು. ಸನ್ಯಾಸಿ ಮೂಲ, ಸ್ತ್ರೀಮೂಲ, ನದಿಮೂಲ ಬಹಳ ಕೆದಕುವುದು ಹೇಗೆ ಒಳ್ಳೆಯದಲ್ಲವೋ, ಹಾಗೆಯೇ ಸುಖದ ವಿವಿಧ ವ್ಯಾಖ್ಯಾನಗಳ ಗೊಡವೆಗೆ ಹೋಗದೇ ಇರುವುದೇ ಒಂದು ರೀತಿ ‘ಸುಖ’ ಎಂದೆನಿಸುತ್ತದೆ.

ಫಸ್ಟ್ ಶೋ... - ಭಾಗ ೧

- ಧನುಷ್‍ಗೌಡ (ಆದರ್ಶ ಮಹದೇವ)

‘ಮುಂಬೈ ಮೇರಿ ಜಾನ್’, ಇದು ಅಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರೂ ಹೇಳುವ ಮಾತು. ಇದಕ್ಕೆ ನಾನೇನು ಹೊರತಲ್ಲ. ಹಳ್ಳಿ ಬಿಟ್ಟು ಬೆಂಗಳೂರಿಗೇ ಬರಲೊಪ್ಪದವನು, ಮುಂಬೈಯನ್ನು ಮೆಚ್ಚಿ ಎಂಟು ತಿಂಗಳು ವಾಸಿಸಿದ್ದೇನೆಂದರೆ ಹಾಗೂ ನನ್ನ ಮಿತ್ರ ಅಲ್ಲಿಯೇ ಉಳಿದಿಕೊಳ್ಳಲು ನಿರ್ಧರಿಸಿದ್ದು  ಆಶ್ಚರ್ಯದ ಸಂಗತಿಯೇನಲ್ಲ. ಇತ್ತೀಚಿಗೆ ನಡೆದ ಒಂದು ಘಟನೆ ನನ್ನನ್ನು ಎಂಟು ವರುಷ ಹಿಂದಕ್ಕೆ ಕರೆದುಕೊಂಡು ಹೋಗಿ ನನ್ನ ನೆನಪುಗಳನ್ನು ದಾಖಲಿಸುವಂತೆ ಮಾಡಿತು.

ಇದೇನಾ ಸಭ್ಯತೆ, ಇದೇನಾ ಸಂಸೃತಿ?

- ರವಿಶಂಕರ್ ಶಾಸ್ತ್ರಿ

ಇದು ಹೇಳಿ ಕೇಳಿ ಯಾಂತ್ರಿಕ ಯುಗ. ಇಲ್ಲಿ ಯಾರಿಗೂ ಸಮಯವಿಲ್ಲ. ಪ್ರತಿಯೊಬ್ಬರಿಗೂ ತಮ್ಮ ತಮ್ಮ ಗುರಿ ತಲುಪುವ ತವಕ. ತಮ್ಮ ಗುರಿ ತಲುಪು ಧಾವಂತದಲ್ಲಿ, ತಾವು ಯಾವ ಸಣ್ಣಪುಟ್ಟ ತಪ್ಪು ಮಾಡಿದರೂ ಅದಕ್ಕೆ ಸರಿಯಾದ(?!) ಸಮರ್ಥನೆ ಇದೆ. ತರದ ಯೋಚನೆ ನನಗೇಕೆ ಬಂತು ಎಂದರೆ, ಮೊನ್ನೆ ಕಚೇರಿಯಿಂದ ಮನೆಗೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾಗ, ಟ್ರಾಫಿಕ್ ನಲ್ಲಿ ಪಾದಚಾರಿ ಮಾರ್ಗದಲ್ಲಿ ಜನರು ನುಗ್ಗುತ್ತಿದ್ದುದನ್ನು ಕಂಡೆ. ಯಾಕೆ ಎಲ್ಲರಿಗೂ ಇಷ್ಟೊಂದು ಗಡಿಬಿಡಿ? ನಿಜವಾಗಿಯೂ ಜನರಿಗೆ ಅಷ್ಟು ಸಮಯದ ಅಭಾವವಿದೆಯೇ? ಅಷ್ಟೊಂದು ಕೆಲಸ ಮಾಡುತ್ತಿದ್ದೇವಾ?! ಬೆಳಗ್ಗೆ ಕಚೇರಿಗೆ ಹೋಗವಾಗಲೂ, ಸಂಜೆ ಮನೆಗೆ ಹಿಂದಿರುಗುವಾಗಲೂ ಗಡಿಬಿಡಿ! 

ಕೋಶ ಓದು: ಅಪ್ಪ ಅಂದ್ರೆ ಆಕಾಶ

- ರವಿಶಂಕರ್ ಶಾಸ್ತ್ರಿ
ಲೇಖಕರು: ಎ. ಆರ್. ಮಣಿಕಾಂತ್

ಸಾದಾ ಸೀದಾ ಜನರ ಬದುಕನ್ನು, ಅವರ ಕಷ್ಟಗಳನ್ನು, ಅವುಗಳನ್ನು ಎದುರಿಸಿದ ಗೆದ್ದ ಬಗೆಯನ್ನು ಮಣಿಕಾಂತ್ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಸಾಮಾನ್ಯರಲ್ಲಿ ಸಾಮಾನ್ಯರ ಒಳಗಿರುವ ಅಗಾಧ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಜಗತ್ತೇ ಮುಗಿದು ಹೋಯಿತು ಇವರ ಬದುಕಿನಲ್ಲಿ ಎಂದುಕೊಂಡವರು ಮತ್ತೆ ಎದ್ದು ಬಂದು ಅಚ್ಚರಿಗಳನ್ನು ಸಾಧಿಸಿದ್ದನ್ನು ವಿವರಿಸಿದ್ದಾರೆ.