ಕ್ಯಾಮರಾ ಕಲಿಸಿದ ಪಾಠ

- ಚಿದಂಬರ

ಕಲಿಯಲೇಬೇಕೆನಿಸಿದರೆ, ಯಾವುದೇ ವಿದ್ಯೆ ‘ಬ್ರಹ್ಮ ವಿದ್ಯೆ’ಲ್ಲವೆಂದು ನನಗೆ 90ರ ದಶಕದಲ್ಲಿಯೇ ಅನ್ನಿಸುತ್ತಿತ್ತು. ಹಾಗೆ ನೋಡಿದರೆ ಯಾವುದೇ ವಿದ್ಯೆ ಕಲಿಯಬೇಕಾದರೆ, ಅತ್ಯಂತ ಅವಶ್ಯಕವಾಗಿ ಬೇಕಾಗಿರುವುದು ‘ಸಾಧನ’ವಲ್ಲ, ಸಾಧಿಸಬೇಕೆಂಬ ‘ತೀವ್ರವಾದ ಇಚ್ಛಾಶಕ್ತಿ’ ಹಾಗೂ ಪ್ರಖರ ಪ್ರಯತ್ನ ಎಂಬುದು ನನ್ನ ಬಲವಾದ ಅನಿಸಿಕೆ.

ಸಾಲ

- ರವಿಶಂಕರ್ ಶಾಸ್ತ್ರಿ
ಸಾಲವೆಷ್ಟಿದ್ದರೂ 
ಚಿಂತೆಯದು ಬೇಡ    

ಫಸ್ಟ್ ಶೋ.... - ಭಾಗ ೨

- ಧನುಷ್‍ಗೌಡ (ಆದರ್ಶ ಮಹದೇವ)

[ಮೊದಲನೇ ಭಾಗಕ್ಕಾಗಿ - ಫಸ್ಟ್ ಶೋ... - ಭಾಗ ೧]

ಅಲ್ಲಿ ಸಮಯ ಕಳೆದಂತೆ ನಾನು ಆ ವಾತಾವರಣಕ್ಕೆ ಹೊಂದಿಕೊಂದಿದ್ದೆ. ಕೆಲಸದ ನಿಮಿತ್ತ ರಾತ್ರಿ 11-1ರವರೆಗೆ ಆರಾಮಾಗಿ ಅಂಜಿಕೆಯಿಲ್ಲದೆ ಆಟೋದಲ್ಲಿ ಪ್ರಯಾಣಿಸಲು ಆರಂಬಿಸಿದ್ದೆ. ಬೆಳಿಗ್ಗೆ ಜನರಿಂದ ಗಿಜಿಗುಡುತ್ತಿದ್ದ  ರಸ್ತೆಗಳಲ್ಲಿ ರಾತ್ರಿಯ ಸಮಯ ನಿಶಬ್ಧತೆಯಿರುತ್ತಿತ್ತು. ಜನರ ಓಡಾಟವೂ ವಿರಳವಾಗಿರುತ್ತಿತ್ತು . ಒಂದು ದಿನ ಕಂಪನಿಯಲ್ಲಿ ಸಹಾಯವಾಣಿಯೊಂದು ಮೊಳಗಿತು. ಒಂದು ಸಲ ಮೈ ನಡುಗಿತು,

ದೇಶ ಸುತ್ತು: ಉತ್ತರ ಭಾರತ ಪ್ರವಾಸ - ಭಾಗ ೪

ಅಕ್ಷಯರಾಮ ಕಾವಿನಮೂಲೆ
ಮರುದಿನ ಬೆಳಗ್ಗೆ ತಿಂಡಿ ಮುಗಿಸಿ ರಿಷಿಯ ಇನ್ನೋವಾ ಏರಿದೆವು. ಮತ್ತದೇ ಹಿಮಾಚಲದ ಜನಪದ ಶೈಲಿಯ ಹಾಡುಗಳನ್ನು ಕೇಳುತ್ತಾ ಹೊರಟಿತು ನಮ್ಮ ಪಯಣ. ಮನಾಲಿಯಿಂದ ಶಿಮ್ಲಾಕ್ಕೆ ಬರೋಬ್ಬರಿ ಏಳೆಂಟು ಗಂಟೆಗಳ ದಾರಿ. ಅಷ್ಟರಲ್ಲಾಗಲೇ ಆ ತಿರುವುಗಳಿಗೆ ನಮ್ಮ ದೇಹ ಹೊಂದಿಕೊಂಡಾಗಿತ್ತು. ಸುತ್ತಲಿನ ಪ್ರಕೃತಿಯ ರಮಣೀಯ ಸೌಂದರ್ಯ ಸವಿಯುತ್ತಾ ಕುಳಿತೆವು.

ಕೋಶ ಓದು: ಪಾಕ ಕ್ರಾಂತಿ ಮತ್ತು ಇತರ ಕಥೆಗಳು

- ರವಿಶಂಕರ್ ಶಾಸ್ತ್ರಿ
ಲೇಖಕರು: ಪೂರ್ಣಚಂದ್ರ ತೇಜಸ್ವಿ

ಮಹಿಳೆಯರು ಮಾತ್ರ ಯಾಕೆ ಅಡಿಗೆ ಕೆಲಸ ಮಾಡಬೇಕು, ಅದರಲ್ಲೇನಿದೆ ಅಂತಹ ವಿಶೇಷ. ಯಾರು ಬೇಕಾದರೂ ಸುಲಭವಾಗಿ ಅಡಿಗೆ ಮಾಡಿ ಬಿಡಬಹುದು ಎಂದು ಲೇಖಕರು ಅಂದುಕೊಂಡಿದ್ದರು. ಆದರೆ ಅದು ಅಷ್ಟು ಸುಲಭವಲ್ಲ ಎಂದು ತಿಳಿಯಲು ಅವರಿಗೆ ಹೆಚ್ಚು ಸಮಯ ಬೇಕಾಗಲಿಲ್ಲ!

ಹೆತ್ತವರ ಕಣ್ಣೀರು

- ತಾಜು ಕಲ್ಲಡ್ಕ

ಹೆತ್ತವರ ಮನಸ್ಸನ್ನು
ನೋಯಿಸುವೆಯಾ ನೀನು
ಗಳಿಸಿದ್ದಾದರೂ ಏನು?