ನಾವು ರಾಜ್ ಕುಮಾರ್ ನೋಡಲು ಹೋಗಿದ್ದ ಕಥೆಯು...

-ಮೋಹನ್ ಮೂರ್ತಿ ಮಾ ಕೆಂ

ಹಾಗೆ ನೋಡಿದರೆ ನಾನು ಚಿಕ್ಕಂದಿನಲ್ಲಿ ಅಂಬರೀಷ್ ಚಿತ್ರಗಳ ದೊಡ್ಡ ಅಭಿಮಾನಿ. ನನ್ನ ಬಾಲ್ಯದ ಬಹುತೇಕ ರಜಾ ದಿನಗಳನ್ನು ಮಂಡ್ಯದ ಅಜ್ಜಿಯ ಮನೆಯಲ್ಲಿ ಕಳೆಯುತ್ತಿದ್ದೆ. ಅಲ್ಲಿದ್ದ ನನ್ನ ಸ್ನೇಹಿತರು ಅಂಬರೀಷ್ ಚಿತ್ರಗಳ ಬಗ್ಗೆ ಕಾಳಿದಾಸನ ರೇಂಜಿನಲ್ಲಿ ವರ್ಣನೆ ಮಾಡಿ ಮಾಡಿ ನನಗೇ ಗೊತ್ತಿಲ್ಲದ ಹಾಗೇ ಅಂಬರೀಷ್ ಚಿತ್ರಗಳ ಅಭಿಮಾನಿಯಾಗಿದ್ದೆ. ಬಹುತೇಕ ಅಂಬರೀಷ್ ಚಿತ್ರಗಳು ಸಾಹಸ ಪ್ರಧಾನವಾಗಿದ್ದದ್ದೂ ಕೂಡ ಒಂದು ಕಾರಣವಾಗಿರಬಹುದು. ಆ ತರದ ಸಾಹಸ, ಆಂಗ್ರಿ ಯಂಗ್ ಮನ್ ಶೈಲಿಯಲ್ಲಿ ರಾಜ್ ಕುಮಾರ್ ಚಿತ್ರಗಳು ಇರುತ್ತಿರಲಿಲ್ಲ ಹಾಗೂ 90 ರ ದಶಕದ ವೇಳೆಗೆ ರಾಜ್ ಕುಮಾರ್ ಚಿತ್ರಗಳು ಸಾಕಷ್ಟು ವಿರಳವಾಗಿದ್ದುದ್ದರಿಂದ ನನ್ನ ಮಂಡ್ಯದ ಸ್ನೇಹಿತರು ರಾಜ್ ಕುಮಾರ್ ಚಿತ್ರಗಳ ಬಗ್ಗೆ ಮಾತಾಡುತ್ತಲೇ ಇರಲಿಲ್ಲ.

ಹೆಸರಲ್ಲೇನಿದೆ?

- ನಾಮದೇವ್ ರೇಣಕೆ

ಹೆಸರೇ, ಓ ಹೆಸರೇ..! ನಿನ್ನ ಹೆಸರಿಗೊಂದು ಹೆಸರನಿಟ್ಟವರಾರು? ಆ ಹೆಸರನ್ನೇ ಹೆಸರಾಗಿ ಹೆಸರಿಸಿದವರಾರು?
ಹೆಸರು..! ಇದೆಂತಹ ವಿಚಿತ್ರವಲ್ಲವೇ? ಹೆಸರು ಎಂದಾಕ್ಷಣ ನೆನಪಾಗುವುದು ನಮ್ಮ ನಮ್ಮ ಪ್ರೀತಿಯ, ಮುದ್ದಿನ ಹೆಸರು.
ಹೌದು, ಎಲ್ಲರಿಗೂ ತಮ್ಮ ಸ್ವಂತ ಹೆಸರು ತಮಗೇನೇ ಅತಿಯಾದ ಖುಷಿ ಕೊಡುತ್ತೆ. ಎಲ್ಲರೂ ತಮ್ಮ ಹೆಸರನ್ನ ತುಂಬಾ ಪ್ರೀತಿಸುವರು. ದ್ವೇಷಿಸಿಸುವವರು ತುಂಬಾ ವಿರಳ ಅಥವಾ ಅಸಾಧ್ಯ.

ಕಾಂಕ್ರೀಟು ಕಾಡಿನಲಿ ನೆಮ್ಮದಿಯ ಚಿಟ್ಟೆಯ ಬೆನ್ನತ್ತಿ..

- ಚಿದಂಬರ
ತಿಳಿದೂ ತಿಳಿಯದಂತೆ ಓಡುತಿದೆ ಮನವು ಹಣದ ಹಿಂದೆ,
ಹಣದ ಗಳಿಕೆಯೊಂದೇ ಜೀವನದ ಪರಮೋಚ್ಛ ಗುರಿ !
ಅದ್ಸರಿ, ಹಣದಿಂದ ಕೊಳ್ಳುವುದಾದರೂ ಏನನ್ನು?
ಹಾಸಿಗೆಯನ್ನಷ್ಟೇ ನಿದ್ರೆಯನ್ನಲ್ಲವಲ್ಲ !

ಶ್ರೀಮಂತ ಡಾ|| ಎಂ.ವೈ.ಘೋರ್ಪಡೆ - ಒಂದು ವ್ಯಕ್ತಿ ಚಿತ್ರ

- ಚಿದಂಬರ

 ಸ್ಕಂದಪುರ ವೆಂಬ ಅನ್ವರ್ಥಕ ನಾಮದಿಂದ, “ಸಂಡೂರು” ಎಂಬ ರೂಢಿನಾಮದಿಂದ ಕರೆಯಲ್ಪಡುತ್ತಿರುವ ನನ್ನ ಜನ್ಮಭೂಮಿ, ಕರ್ಮಭೂಮಿಯಾಗಿರುವ ಪಟ್ಟಣವನ್ನು ‘ಬಳ್ಳಾರಿಯ ಓಯಸಿಸ್’, ‘ಬಳ್ಳಾರಿಯ ಕಾಶ್ಮೀರ’ ಎಂತಲೇ ಕರೆಯುತ್ತಾರೆ. ಇದರ ಇತಿಹಾಸವನ್ನು ಕೆದಕುತ್ತಾ ಹೋದಲ್ಲಿ, ಈ ಸಂಸ್ಥಾನವನ್ನು ಬ್ರಿಟೀಷರ ಅಧೀನದಲ್ಲಿ ಮರಾಠ ವಂಶಸ್ಥರಾದ “ಘೋರ್ಪಡೆ” ರಾಜ ಮನೆತನಕ್ಕೆ ಸೇರಿದ ಶ್ರೀಮಂತ ಸಿದ್ಧೋಜಿ ಘೋರ್ಪಡೆ ಕ್ರಿ.ಶ.1713 ರಲ್ಲಿ ಆಳ್ವಿಕೆ ಪ್ರಾರಂಭಿಸಿದರು ಎಂಬುದು ಕಂಡು ಬರುತ್ತದೆ.

ಮಂಗನ ಬೇಟೆ

- ಅಕ್ಷಯರಾಮ ಕಾವಿನಮೂಲೆ

ನನ್ನ ಊರಿನಲ್ಲಿ ಕೃಷಿಕರು ನಾಲ್ಕು ಜನ ಜೊತೆ ಸೇರಿದರೆ ಸಾಕು, ಹಳ್ಳಿಬದುಕಿನ ಕಷ್ಟ ಸುಖಗಳ ಮಾತುಕತೆ ಶುರು. "ಮಂಗಂಗೊ ಇದ್ದವಾ ಭಾವಾ?" ಮೊದಲ ಪ್ರಶ್ನೆಯೇ ಮಂಗಗಳ ಬಗ್ಗೆ. "ಎಂಗಳಲ್ಲಿ ವಿಪರೀತ ಮಂಗಂಗೊ. ಬೊಂಡ, ಕೊಕ್ಕೋ, ಬಾಳೆ, ಅಡಕೆ ಒಂದೂ ಒಳುಶುತ್ತವಿಲ್ಲೆ" ಗೋಳಿನ ಕತೆ ಎಲ್ಲರ ಬಾಯಲ್ಲಿ. ಸಭೆ ಸಮಾರಂಭಗಳಲ್ಲಿ ಬಿಸಿಬಿಸಿ ಚರ್ಚಾ ವಿಷಯ ಇದು!

ಮೋಹನ ಸ್ವಾಮಿ


-ಅಕ್ಷಯರಾಮ ಕಾವಿನಮೂಲೆ
ಲೇ: ವಸುಧೇಂದ್ರ
ಬೆಲೆ: ರೂ.180

ವಸುಧೇಂದ್ರ ಅವರ ಕೃತಿಗಳು ಆಲೂಗೆಡ್ಡೆ ಚಿಪ್ಸ್ ಪ್ಯಾಕೆಟ್ ಇದ್ದಂತೆ ! ಒಮ್ಮೆ ತೆರೆದು ಕೈಯಲ್ಲಿ ಹಿಡಿದು ಒಂದು ಮೂಲೆಯಲ್ಲಿ ಕುಳಿತರೆ, ಮುಗಿಯುವ ವರೆಗೆ ಇನ್ಯಾವುದೇ ಐಹಿಕ ವಿಷಯಗಳ ಕಡೆ ಮನಸ್ಸು ಹರಿಯುವುದೇ ಇಲ್ಲ. ಅವರ ಅಕ್ಷರಗಳಿಗೆ ಇರುವ ಅಯಸ್ಕಾಂತೀಯ ಗುಣದ ಬಗ್ಗೆ ಹೆಚ್ಚಿನ ವಿವರಣೆ ಅನಗತ್ಯ.

ಬದಲಾವಣೆ

-ರವಿಶಂಕರ್ ಶಾಸ್ತ್ರಿ

ಆಗಷ್ಟೇ ಅವನು ಕಛೇರಿಯಿಂದ ಮನೆಗೆ ಬಂದಿದ್ದ. ಬಾಗಿಲು ತೆಗೆಯುತ್ತಲೇ ಎದುರುಗಡೆ ವರ್ಷದ ಮಗ ನಿಂತಿದ್ದ. ಅವನ ಕೈಯಲ್ಲಿ ಮೊನ್ನೆ ತಾನೇ ಹೊಸದಾಗಿ ಕೊಡಿಸಿದ್ದ ರಿಮೋಟ್ ಕಾರ್ ಇತ್ತು. ಅದರ ಚಕ್ರಗಳು ಮುರಿದು ಹೋಗಿದ್ದವು.

ನಾನು ಬರೆಯಲು ಪ್ರಾರಂಭಿಸಿದ್ದು...

-ರವಿಶಂಕರ್ ಶಾಸ್ತ್ರಿ

ನಾನು ಚಿಕ್ಕವನಾಗಿದ್ದಾಗಲೇ ನಮ್ಮ ಮನೆಗೆ ಉದಯವಾಣಿ ದಿನಪತ್ರಿಕೆ ತರುತ್ತಿದ್ದರು. ಜೊತೆಗೆ, ತುಷಾರ, ಮಯೂರ, ತರಂಗ, ಸುಧಾ, ಚಂದಮಾಮ, ಬಾಲಮಂಗಳ ಪತ್ರಿಕೆಗಳೂ ಬರುತ್ತಿದ್ದವು. ಮನೆಯಲ್ಲಿ ಅಪ್ಪ, ಅಣ್ಣಂದಿರು ಎಲ್ಲರೂ ಓದುವ ಆಸಕ್ತಿ ಇದ್ದವರೇ ಆದ್ದರಿಂದ, ಸಹಜವಾಗಿಯೇ ನನಗೂ ಓದುವ ಅಭ್ಯಾಸ ಬಂತು.

ಹನಿಗಳು


-ರವಿಶಂಕರ್ ಶಾಸ್ತ್ರಿ

ಕಣ್ಣಂಚಿನಲಿ ಕಂಡು 

ಮನದೊಳಗೆ ಬಂದಿ

ರೈತ ಮತ್ತು ಆತ್ಮಹತ್ಯೆ

  -"ಶ್ರೀ"ಖಾರ

ಒಂದು ದ್ವೀಪ . ಅಲ್ಲಿ ಸಾವಿರಾರು ಜನರ ವಾಸ. ಶ್ರೀಮಂತರು-ಕಡುಬಡವರು ಇರುವ ಆ ದ್ವೀಪದಲ್ಲಿ ೧೦೦ ಎಕರೆ ಭೂಮಿಯ ಒಡೆಯನಿಗೆ ಒಬ್ಬ ೧ ಎಕರೆ ಭೂಮಿ ಹೊಂದಿರುವ ಗೆಳೆಯ . ನೆಮ್ಮದಿಯ ಜೀವನ ಸಾಗುತ್ತಿರಲು, ಒಂದು ದಿನ ದ್ವೀಪದಲ್ಲಿ ಸುನಾಮಿಯ ಅಟ್ಟಹಾಸ. ಎಲ್ಲಾ ದ್ವೀಪವಾಸಿಗಳ ಭೂಮಿ /ಬೆಳೆ ಕೊಚ್ಚಿಹೋಯಿತು. ೧೦೦ ಎಕರೆ ಭೂಮಿ ಹೊಂದಿರುವವ ೧೦೦ ಎಕರೆಯಲ್ಲಿದ್ದ ಬೆಳೆ ಕಳೆದುಕೊಂಡ . ಆತನ ಗೆಳೆಯ ೧ ಎಕರೆ ಬೆಳೆಯನ್ನು ಕಳೆದುಕೊಂಡು ಕಂಗಾಲಾದ.

ಶುಭಂ... ಪ್ರತೀ ಚಲನಚಿತ್ರದ ಕೊನೆಮಾತು

- ಧನುಷ್‍ಗೌಡ (ಆದರ್ಶ ಮಹದೇವ)

ಈ ಪದ ಯಾರಿಗೆ ನೆನಪಿದೆ? 20ನೇ ಶತಮಾನದವರೆಗೂ ಹಿರಿತೆರೆಯನ್ನಾಳಿದ್ದು, ಪ್ರತಿ ಚಲನಚಿತ್ರವೂ ಒಂದು ತಾತ್ವಿಕ ಶುಭ ಸಂದೇಶದ ಅಂತ್ಯದೊಂದಿಗೆ ಕೊನೆಯಾಗುತ್ತಿತ್ತು. ಎಲ್ಲ ಚಲನಚಿತ್ರಗಳೂ ಅವುಗಳದೇ ಆದ ಆರಂಭ, ನಗು, ಅಳು, ಕರುಣೆ, ಪ್ರೀತಿ, ಭಾಂದವ್ಯ, ಧ್ವೇಷ, ಸೇಡು, ಹೊಡೆದಾಟ, ಹಾಡುಗಳನ್ನೊಳಗೊಂಡಂತೆ ಹಲವು ಭದ್ರ ಬುನಾದಿಯ ಮೇಲೆ ತಯಾರಾಗುತ್ತಿದ್ದವು. ಮುಖ್ಯವಾಗಿ ಒಂದು ಅಚ್ಚುಕಟ್ಟಾದ ಕಥೆಯಿರುತ್ತಿತ್ತು. ಕಾದಂಬರಿ ಆದರಿಸಿದ ಚಿತ್ರಗಳ ಸಂಖ್ಯೆಯೂ ಸಾಕಷ್ಟಿತ್ತು. ಚಲನಚಿತ್ರಗಳ ಗೀತೆಗಳಲ್ಲೂ ದೇಶಭಕ್ತಿಯನ್ನು ಸಾರುವ, ಉತ್ತಮ ಸಾಹಿತ್ಯವಿರುವ ಮಧುರ  ಗೀತೆಗಳಿರುತ್ತಿದ್ದವು.