Showing posts with label ರವಿಶಂಕರ್ ಶಾಸ್ತ್ರಿ. Show all posts
Showing posts with label ರವಿಶಂಕರ್ ಶಾಸ್ತ್ರಿ. Show all posts

ಕೋಶ ಓದು : ೫ ಪೈಸೆ ವರದಕ್ಷಿಣೆ

- ರವಿಶಂಕರ್ ಶಾಸ್ತ್ರಿ

ವಸುಧೇಂದ್ರರವರ ೨೪ ಪ್ರಬಂಧಗಳ ಸಂಕಲನ ಇದಾಗಿದೆ. ದಿನನಿತ್ಯದ ಸರಳ ವಿಷಯಗಳನ್ನು ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಿಸಿದ್ದಾರೆ ಲೇಖಕರು. ಎಂದಿನಂತೆ ವಸುಧೇಂದ್ರರ ಪುಸ್ತಕಗಳು ಒಮ್ಮೆ ರುಚಿ ಸಿಕ್ಕಿದರೆ ಮತ್ತೆ ಕೊನೆಯ ಪುಟದವರೆಗೆ ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ, ಮಧ್ಯೆ ನಿಲ್ಲಿಸುವುದು ಬಲು ಕಷ್ಟ! ಅನೇಕ ವರ್ಷಗಳ ಕಾಲ ಮಾಹಿತಿ ತಂತ್ರಜ್ಞಾನ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿದರೂ ಅವರು ಬರೆಯುವ ವಿಷಯಗಳು ವೈವಿಧ್ಯಮಯವಾಗಿರುತ್ತದೆ. 

ಕೋಶ ಓದು : ಚಿನ್ನದ ಮೀನು

 - ರವಿಶಂಕರ್ ಶಾಸ್ತ್ರಿ

ಲೇಖಕರು: ರೋಹಿತ್ ಚಕ್ರತೀರ್ಥ

ವಿಜ್ಞಾನಕ್ಕೆ ಸಂಬಂಧಿಸಿದ ಕಠಿಣ ವಿಷಯಗಳನ್ನು ಸಾಮಾನ್ಯ ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಬರೆಯಬಲ್ಲವರು ರೋಹಿತ್ ಚಕ್ರತೀರ್ಥ. ನಾಡಿನ ಹಲವಾರು ದಿನಪತ್ರಿಕೆ-ವಾರಪತ್ರಿಕೆ ಇತ್ಯಾದಿಗಳಲ್ಲಿ ಹಲವಾರು ಲೇಖನಗಳನ್ನು ಬರೆದು ಪ್ರಸಿದ್ಧರಾಗಿದ್ದಾರೆ.

ನೋವು

- ರವಿಶಂಕರ್ ಶಾಸ್ತ್ರಿ
ಒದ್ದೆಯಾದ ಕಣ್ಣಿಂದ
ಅವಳ ಇಣುಕಿ ನೋಡಿದೆ
ಹೊಂಚು ಹಾಕಿ ಕುಳಿತ ಮನವು
ಮುದ್ದೆಯಾಗಿ ಹೋಗಿದೆ.

ಸ್ವದೇಶಿ ಮಂತ್ರ


- ರವಿಶಂಕರ ಶಾಸ್ತ್ರಿ 

ಪತಂಜಲಿ ಉತ್ಪನ್ನಗಳು ವಿದೇಶಿ ಕಂಪೆನಿಗಳ ನಿದ್ದೆ ಕೆಡಿಸಿರುವುದನ್ನು ಇತ್ತೀಚೆಗೆ ಮಾಧ್ಯಮಗಳಲ್ಲಿ ಎಲ್ಲರೂ ಓದಿರುತ್ತೇವೆ. ಬೇರೆ ಬೇರೆ ಖಾಸಗಿ ವಾಹಿನಿಗಳಲ್ಲೂ ನಾವು ಗಮನಿಸಿದರೆ, ಈಗ ಯಾವ ವಿದೇಶಿ ಕಂಪೆನಿಗೂ ಕಮ್ಮಿ ಇಲ್ಲದಂತೆ ಜಾಹೀರಾತುಗಳು ಪ್ರಸಾರವಾಗುತ್ತವೆ. ಅಂದ ಮೇಲೆ ಭರ್ಜರಿಯಾಗಿಯೇ ಪತಂಜಲಿ ವಸ್ತುಗಳು ಸದ್ದು ಮಾಡುತ್ತಿವೆ ಎಂದಾಯಿತು.

ನಮ್ಮ ಕನ್ನಡ

- ರವಿಶಂಕರ್ ಶಾಸ್ತ್ರಿ

ಮತ್ತೆ ನವೆಂಬರ್ ಬಂದಿದೆ. ಕನ್ನಡ ನಮ್ಮ ಭಾಷೆ ಅಂತ ನೆನಪಿಸಿಕೊಳ್ಳುವ ಸಮಯ. ಎಷ್ಟೋ ಜನರಿಗೆ ತಮ್ಮ-ತಮ್ಮ ಸಂಘ-ಸಂಸ್ಥೆಗಳ ವತಿಯಿಂದ ಅದ್ದೂರಿಯಾಗಿ ರಾಜ್ಯೋತ್ಸವ ಆಚರಿಸುವ ಸಮಯ. ವರ್ಷ ಪೂರ್ತಿ ಮರೆತು ಹೋಗಿದ್ದ ಕನ್ನಡ ಪ್ರೇಮವನ್ನು ಬಡಿದೆಬ್ಬಿಸುವ ಸಮಯ ಬಂದಿದೆ. ಎಲ್ಲ ಕಡೆ ಆಂಗ್ಲ ಭಾಷೆಯ ಉಪಯೋಗ ಹೆಚ್ಚಾಗಿದೆ ಅಂತ ನಾವೆಲ್ಲ ಒಂದಲ್ಲ ಒಂದು ಸಲ ಹೇಳಿರುತ್ತೇವೆ/ಕೇಳಿರುತ್ತೇವೆ. ಎಲ್ಲ ಸರಿ, ನಾವು ನಮ್ಮ ಕಡೆಯಿಂದ ಆಗುವ ಪ್ರಯತ್ನ ಮಾಡಿದ್ದೇವಾ?

ಮೊಬೈಲ್ ಮಾಯೆ

- ರವಿಶಂಕರ್ ಶಾಸ್ತ್ರಿ

ನೀನು ಬಂದ ಮೇಲೆ
ನನ್ನ ಮನದಲಿದ್ದ ಖಾಲಿ ಜಾಗ ಮರೆಯಾಗಿದೆ
ನೀನು ಬಂದ ಮೇಲೆ

ನೆಮ್ಮದಿ

-  ರವಿಶಂಕರ್ ಶಾಸ್ತ್ರಿ

ಬೆಂಗಳೂರಿನಂತಹ ಮಹಾನಗರಗಳಲ್ಲಿ ಕೆಲಸ ಮಾಡುವ ಬಹಳಷ್ಟು ಜನರಿಗೆ, ಅದರಲ್ಲೂ ಸಾಫ್ಟ್‌ವೇರ್ ಕೆಲಸದವರಿಗೆ ಎಲ್ಲಾ  ಇದ್ದರೂ ಏನೋ ಇಲ್ಲದ ಭಾವ ಯಾವಾಗಲೂ. ಬೇಕಾದರೆ ಕೇಳಿ ನೋಡಿ, ಎಷ್ಟು ಜನ ಮನಃಪೂರ್ವಕವಾಗಿ ಖುಷಿಯಾಗಿದ್ದೇವೆ ಅಂತ ಹೇಳುತ್ತಾರೆ?

ಕೋಶ ಓದು : ಮಕ್ಕಳ ಮನಸ್ಸು

- ರವಿಶಂಕರ್ ಶಾಸ್ತ್ರಿ
ಲೇಖಕರು: ಡಾ.ಅ.ಶ್ರೀಧರ್  

ಮಕ್ಕಳ ಮನಸ್ಸು ಹೂವಿನ ಹಾಗೆ. ಹಸಿ ಮಣ್ಣಿನಂತಿರುವ ಮಕ್ಕಳ ಮನಸ್ಸು ಬಹು ಬೇಗ ಆತಂಕಕ್ಕೆ ಒಳಗಾಗುವುದು ಸಹಜ. ತನ್ನ ಸುತ್ತಲಿನ ಆಗು-ಹೋಗುಗಳನ್ನು ಮಗು ಸೂಕ್ಷ್ಮವಾಗಿ ಗಮನಿಸುತ್ತದೆ. ಹಾಗಾಗಿ ನಾವು ಮಕ್ಕಳನ್ನು ಬೆಳೆಸುವಾಗ ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು.

ಗೋಧಿ ಬಣ್ಣ ಸಾಧಾರಣ ಮೈಕಟ್ಟು

- ರವಿಶಂಕರ್ ಶಾಸ್ತ್ರಿ
ಗೋಧಿ ಬಣ್ಣ ಸಾಧಾರಣ ಮೈಕಟ್ಟು
ನೋಡಿದೆ ನಾನು ಇಷ್ಟಪಟ್ಟು.
ಅನಂತನಾಗ್ ನಟನೆ ಅದ್ಭುತ 
ನೋಡಲೇ ಬೇಕು ಖಂಡಿತ.

ಬರ

- ರವಿಶಂಕರ್ ಶಾಸ್ತ್ರಿ

ಭೀಕರ ಬರಗಾಲ ಊರಿಗೆಲ್ಲ
ಜನರಿಗೆ ಕುಡಿಯಲೂ ನೀರಿಲ್ಲ
ವರುಣ ದೇವನಿಗ್ಯಾಕೋ ಕರುಣೆಯಿಲ್ಲ

ಮಳೆಯೇ ಬಾ

- ರವಿಶಂಕರ್ ಶಾಸ್ತ್ರಿ
ಎಲ್ಲಿ ಹೋದಿರಿ ಕಪ್ಪು ಮೋಡಗಳೇ,
ನಮ್ಮ ಕಡೆಗೂ ತೇಲಿ ಬನ್ನಿ.
ಬೆಂಕಿಯ ಹಾಗೆ ಭೂಮಿ ಸುಡುತಲಿದೆ,
ನಮ್ಮ ಊರಿಗೂ ಮಳೆಯ ತನ್ನಿ.

ಕಣ್ಣೀರು

- ರವಿಶಂಕರ್ ಶಾಸ್ತ್ರಿ
ಜಗತ್ತನ್ನು ಸೆಳೆಯಲು
ಸುಂದರ ಕಣ್ಣಿರಬೇಕು.

ಕೋಶ ಓದು : ಜಾಗೋ ಭಾರತ್

ರವಿಶಂಕರ್ ಶಾಸ್ತ್ರಿ

ಲೇಖಕರು: ಚಕ್ರವರ್ತಿ ಸೂಲಿಬೆಲೆ

ಲೇಖಕರು ತಮ್ಮ ಪ್ರಖರ ಮಾತಿನಿಂದ ಪ್ರಸಿದ್ಧರು. ದೇಶದ ಬಗ್ಗೆ ಪ್ರೀತಿ, ಅಭಿಮಾನ ಮೂಡಿಸುವ ಕೆಲಸದಲ್ಲಿ ಸದಾ ತಲ್ಲೀನರು. ದೇಶ ಕಂಡ ವಿವಿಧ ಕ್ರಾಂತಿಕಾರಿ, ದೇಶಭಕ್ತರನ್ನು ನಮಗೆ ಪರಿಚಯಿಸುವ ಕಾರ್ಯದಲ್ಲಿ ಸಿದ್ಧಹಸ್ತರು. ಇತಿಹಾಸದಲ್ಲಿ ಸರಿಯಾಗಿ ದಾಖಲಾಗದ, ನಾವು ಮರೆತು ಹೋದ ಹಲವು ಜನರನ್ನು ಮತ್ತೆ ನಮಗೆ ಪರಿಚಯಿಸುವ ಅವರ ಕಾರ್ಯ ಸ್ಮರಣೀಯ.

ಅವಳ ಧ್ಯಾನ

- ರವಿಶಂಕರ್ ಶಾಸ್ತ್ರಿ

ಎಲ್ಲಿ ಹೋದರು 
ಅವಳದೇ ಧ್ಯಾನ.

ಕೋಶ ಓದು: ಇಲ್ಲಿಯವರೆಗಿನ ನೇಮಿಚಂದ್ರರ ಕತೆಗಳು

-  ರವಿಶಂಕರ್ ಶಾಸ್ತ್ರಿ

ಲೇಖಕಿ: ನೇಮಿಚಂದ್ರ 

ನೇಮಿಚಂದ್ರ ವೃತ್ತಿಯಿಂದ ಇಂಜಿನಿಯರ್ ಆದ ಲೇಖಕಿ, ಎಚ್.ಎ.ಎಲ್ ನಲ್ಲಿ ಹಿರಿಯ ಹುದ್ದೆಯಲ್ಲಿದ್ದಾರೆ. ಈ ಪುಸ್ತಕದಲ್ಲಿ ಒಟ್ಟು 26 ಕತೆಗಳಿವೆ. ತಮ್ಮ ಕೆಲಸದ ನಿಮಿತ್ತ ದೇಶ, ವಿದೇಶಗಳ ವಿವಿಧ ಭಾಗಗಳಿಗೆ ಪ್ರಯಾಣಿಸುವ ಅವರು, ಅಲ್ಲಿಯ ಜನ ಜೀವನ, ಸಂಸ್ಕೃತಿ ಹಾಗೂ ಜೀವನ ಶೈಲಿಗಳನ್ನು ಕತೆಗಳ ಮೂಲಕ ಪರಿಚಯಿಸುತ್ತಾರೆ.

ಸಾಲ

- ರವಿಶಂಕರ್ ಶಾಸ್ತ್ರಿ
ಸಾಲವೆಷ್ಟಿದ್ದರೂ 
ಚಿಂತೆಯದು ಬೇಡ    

ಕೋಶ ಓದು: ಪಾಕ ಕ್ರಾಂತಿ ಮತ್ತು ಇತರ ಕಥೆಗಳು

- ರವಿಶಂಕರ್ ಶಾಸ್ತ್ರಿ
ಲೇಖಕರು: ಪೂರ್ಣಚಂದ್ರ ತೇಜಸ್ವಿ

ಮಹಿಳೆಯರು ಮಾತ್ರ ಯಾಕೆ ಅಡಿಗೆ ಕೆಲಸ ಮಾಡಬೇಕು, ಅದರಲ್ಲೇನಿದೆ ಅಂತಹ ವಿಶೇಷ. ಯಾರು ಬೇಕಾದರೂ ಸುಲಭವಾಗಿ ಅಡಿಗೆ ಮಾಡಿ ಬಿಡಬಹುದು ಎಂದು ಲೇಖಕರು ಅಂದುಕೊಂಡಿದ್ದರು. ಆದರೆ ಅದು ಅಷ್ಟು ಸುಲಭವಲ್ಲ ಎಂದು ತಿಳಿಯಲು ಅವರಿಗೆ ಹೆಚ್ಚು ಸಮಯ ಬೇಕಾಗಲಿಲ್ಲ!

ಕೋಶ ಓದು: ಶಬ್ದ ತೀರ

- ರವಿಶಂಕರ್ ಶಾಸ್ತ್ರಿ
ಲೇಖಕರು: ಜಯಂತ ಕಾಯ್ಕಿಣಿ 
ಬೆಲೆ: ರೂ.೧೨೦

ಸುಮಾರು ೨೩ ವರ್ಷಗಳ ಕಾಲ ಮುಂಬಯಿಯಲ್ಲಿ ಕೆಲಸ ಮಾಡಿದ ಜಯಂತ್, ಅಲ್ಲಿನ ಜನ ಜೀವನದ ಕಡೆಗೆ ಬೆಳಕು ಚೆಲ್ಲಿದ್ದಾರೆ. ವಿವಿಧ ಜೀವನ ಶೈಲಿಯ ಚಿತ್ರಣ ನಮಗೆ ಸಿಗುತ್ತದೆ. ಹೆಚ್ಚಿನ ಲೇಖನಗಳು ಬಿಡಿ ಬರಹಗಳಾಗಿದ್ದರೂ, ನಮ್ಮನ್ನು ಚಿಂತನೆಗೆ ಹಚ್ಚುವಂತೆ ಇವೆ.

ದ್ವಂದ್ವ

- ರವಿಶಂಕರ್ ಶಾಸ್ತ್ರಿ
ಪ್ರತಿಭಟನೆ, ಹೋರಾಟ
ಎಲ್ಲೆಡೆಯೂ ಕಾವು
ದೇಶಪ್ರೇಮವ ಮರೆತ
ಪ್ರಜೆಗಳಾದೆವೆ ನಾವು?

ಆಸೆ

- ರವಿಶಂಕರ್ ಶಾಸ್ತ್ರಿ
ಕಣ್ಣೀರು ಹನಿಹನಿಯಾಗಿ 
ಕೆನ್ನೆಮೇಲೆ ಜಾರಿರಲು 
ನೆಲವತಾಕುವ ಮೊದಲೇ 
ತಡೆಯುವಾಸೆ.