ಕೋಶ ಓದು: ಶಬ್ದ ತೀರ

- ರವಿಶಂಕರ್ ಶಾಸ್ತ್ರಿ
ಲೇಖಕರು: ಜಯಂತ ಕಾಯ್ಕಿಣಿ 
ಬೆಲೆ: ರೂ.೧೨೦

ಸುಮಾರು ೨೩ ವರ್ಷಗಳ ಕಾಲ ಮುಂಬಯಿಯಲ್ಲಿ ಕೆಲಸ ಮಾಡಿದ ಜಯಂತ್, ಅಲ್ಲಿನ ಜನ ಜೀವನದ ಕಡೆಗೆ ಬೆಳಕು ಚೆಲ್ಲಿದ್ದಾರೆ. ವಿವಿಧ ಜೀವನ ಶೈಲಿಯ ಚಿತ್ರಣ ನಮಗೆ ಸಿಗುತ್ತದೆ. ಹೆಚ್ಚಿನ ಲೇಖನಗಳು ಬಿಡಿ ಬರಹಗಳಾಗಿದ್ದರೂ, ನಮ್ಮನ್ನು ಚಿಂತನೆಗೆ ಹಚ್ಚುವಂತೆ ಇವೆ.

ದೇಶ ಸುತ್ತು: ಉತ್ತರ ಭಾರತ ಪ್ರವಾಸ - ಭಾಗ ೩

- ಅಕ್ಷಯರಾಮ ಕಾವಿನಮೂಲೆ

ಹಿಮಾಲಯದ ಸೌಂದರ್ಯ ಸವಿಯುತ್ತಾ ಮಂಜನ್ನು ಅರಸಿ ಹೊರಟೆವು. ರೋಹ್ತಾಂಗ್ ಪಾಸ್ ಅದಾಗಲೇ ಮುಚ್ಚಲ್ಪಟ್ಟ ಕಾರಣ ಅಲ್ಲಿಗೆ ಹೋಗಲಾಗಲಿಲ್ಲ. 'ಗುಲಾಬಾ' ಮತ್ತು 'ಸೊಲಾಂಗ್' ಕಣಿವೆಗಳಿಗೆ ಭೇಟಿಮಾಡಿಸುವುದಾಗಿ ಪವನ್ ಆಶ್ವಾಸನೆಯಿತ್ತ. ಮತ್ತದೇ ಭೀಮತಿರುವುಗಳಲ್ಲಿ ಸುತ್ತಿ ಸುತ್ತಿ ಮೇಲೇರುತ್ತಾ ನಾವಿದ್ದ ಆಲ್ಟೋ ಸಾಗಿತು. (ಹಿಮಾಚಲದಲ್ಲಿ ಪುಟ್ಟ ಕಾರಾದ ಮಾರುತಿ ಆಲ್ಟೋವನ್ನು ಟ್ಯಾಕ್ಸಿಯಾಗಿ ಬಳಸುತ್ತಾರೆ. ಕಡಿದಾದ ಸಣ್ಣ ರಸ್ತೆಗಳಲ್ಲಿ ಸುಲಭವಾಗಿ ಸಾಗಲು ಈ ಪುಟ್ಟ ವಾಹನಗಳು ತುಂಬಾ ಸಹಕಾರಿ.) ಮಗಳು ಚಿತ್ಕಲಾ ಮತ್ತೆ ಮುಖಭಾವ ಬದಲಿಸಿದಂತೆ ಕಂಡಿತು.

ಕಥೆ ಒಂದೇ - ನೀತಿ ಮೂರು

- ಶ್ರೀ"ಖಾರ"

ಗೋವಿನ ಹಾಡು - ಇದು ನಾವೆಲ್ಲಾ ಚಿಕ್ಕವರಾಗಿರುವಾಗ ಕೇಳಿ ಬೆಳೆದ ಹಾಡು.
ಒಂದು ಮುಗ್ದ ಹಸು. ಅದು ಕಾಡಲ್ಲಿ ಹುಲಿಯನ್ನು ಎದುರುಗೊಳ್ಳುವುದು. ಹುಲಿ ಅದನ್ನು ಬೇಟೆಯಾಡಲು ಯತ್ನಿಸಿದಾಗ, ಮನೆಯಲ್ಲಿ ನನ್ನ ಕರು ಇದೆ. ಅದಕ್ಕೆ ಹಾಲು ಉಣಿಸಿ ಬರುವೆ ಎನ್ನಲು ಅದನ್ನು ನಂಬದ ಹುಲಿಗೆ "ಇಲ್ಲ ನಾನು ಬಂದೆ ಬರುವೆನು, ಆವಾಗ ನನ್ನನ್ನು ತಿನ್ನುವೆಯಂತೆ ಈಗ ಬಿಟ್ಟು ಬಿಡು ಕರುವಿಗೆ ಹಾಲುಣಿಸಿ ಬರುವೆ" ಎಂದು ಹೇಳಿ ಹೋಗಿ, ಕೊಟ್ಟಿಗೆಯಲ್ಲಿದ್ದ ತನ್ನ ಕರುವಿಗೆ ಹಾಲುಣಿಸಿ ಹೊರಡುವಾಗ, ತಾನು ಹೋದರೆ ಸಾಯುವುದು ಖಚಿತ ಎಂದು ಗೊತ್ತಿದ್ದರೂ, ತನ್ನ ಮಾತನ್ನ ನಂಬಿಕೆಯನ್ನು ಉಳಿಸಿಕೊಳ್ಳಲು ಹೊರಡಲು ತಯಾರಾಗುತ್ತಾ, ಅಲ್ಲಿದ್ದ ತನ್ನ ಸಹವರ್ತಿಗಳಿಗೆ ತನ್ನ ಕರುವಿನ/ಮಗುವಿನ ಯೋಗಕ್ಷೇಮ ನೋಡಿಕೊಳ್ಳುವಂತೆ ಬೇಡಿಕೊಳ್ಳುತ್ತದೆ.

ಚಿತ್ರವಿಹಾರ: 12 Angry Men (TAM)

- ಮೋಹನ್ ಮೂರ್ತಿ ಮಾ ಕೆಂ

TAM ೧೯೫೭ರಲ್ಲಿ ಬಿಡುಗಡೆಯಾದ ಹಾಲಿವುಡ್ ಸಿನಿಮಾ (ಕಪ್ಪು ಬಿಳುಪು). ಚಿತ್ರದ ಬಗ್ಗೆ ಮಾತನಾಡುವ ಮೊದಲು ಕೆಲವು ದೇಶಗಳ ನ್ಯಾಯಾಲಯದಲ್ಲಿ ಇರುವ ಜ್ಯೂರಿ ಪದ್ಧತಿಯನ್ನು ತಿಳಿದುಕೊಳ್ಳುವುದು ಅಗತ್ಯ. ನಮ್ಮ ಭಾರತ ದೇಶದಲ್ಲಿ ನ್ಯಾಯಮೂರ್ತಿಗಳು (judge), ನ್ಯಾಯವಾದಿಗಳ ವಾದವನ್ನು ಆಲಿಸಿ ಆ ಸಂದರ್ಭದಲ್ಲಿ ಸಂವಿಧಾನಬದ್ಧವಾಗಿ ಜಾರಿಯಲ್ಲಿರುವ ಕಾನೂನುಗಳನ್ನು ಪರಿಗಣಿಸಿ ತೀರ್ಪು ನೀಡುತ್ತಾರೆ. ಆದರೆ ಕೆಲವು ದೇಶಗಳಲ್ಲಿ ಜ್ಯೂರಿ ಪದ್ಧತಿ ಇದೆ.

ದ್ವಂದ್ವ

- ರವಿಶಂಕರ್ ಶಾಸ್ತ್ರಿ
ಪ್ರತಿಭಟನೆ, ಹೋರಾಟ
ಎಲ್ಲೆಡೆಯೂ ಕಾವು
ದೇಶಪ್ರೇಮವ ಮರೆತ
ಪ್ರಜೆಗಳಾದೆವೆ ನಾವು?

ಆಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ದೇಶದ್ರೋಹಿ ಹೇಳಿಕೆ

- ಉದಯ ಪೆರುವಾಜೆವಿಟ್ಲ
ಹೌದು, ದೇಶಕ್ಕೆ ನೀತಿ ನಿಯಮ, ಧೋರಣೆ, ದಿಕ್ಸೂಚಿ ನೀಡುವ ಕೇ೦ದ್ರ ದ ಪಕ್ಕದಲ್ಲೇ ಅಭಿವ್ಯಕ್ತಿ ಸ್ವಾತ೦ತ್ರ್ಯ ದ ಹೆಸರಿನಲ್ಲಿ ಅವಿವೇಕಿ ಗಳು ದೇಶದ್ರೋಹಿ ಘೋಷಣೆ ಕೂಗಿದ್ದಾರೆ! ತನ್ಮೂಲಕ ಬೇಲಿ ಇಲ್ಲದ ಸ್ವಾತಂತ್ರ್ಯ ಎಷ್ಟು ಅನಾಹುತಕಾರಿ ಎಂಬುದನ್ನೂ ನಿರೂಪಿಸಿದ್ದಾರೆ. ಈ ಘೋಷಣೆಯನ್ನು ಅಲಕ್ಷಿಸೋಣವೇ ಎಂದರೆ ಘೋಷಣೆ ಕೂಗಿದ್ದು ಬೇರಾರೂ ಅಲ್ಲ,

ಪತ್ರ ಮತ್ತು ಉತ್ರ

- ಮೋಹನ್ ಮೂರ್ತಿ ಮಾ ಕೆಂ

ಫೆಬ್ರವರಿ ಸಂಚಿಕೆಯಲ್ಲಿ ನಾನು ಬರೆದಿದ್ದ “ನೇಗಿಲ ಯೋಗಿ ಎಂಬ ರೊಮ್ಯಾಂಟಿಕ್ ಕಲ್ಪನೆಯೂ ಮತ್ತು ವಾಸ್ತವದಸವಾಲುಗಳೂ” ಲೇಖನಕ್ಕೆ ಹಲವರು ಪ್ರತಿಕ್ರಿಯಿಸಿದ್ದಾರೆ. ಫೇಸ್ ಬುಕ್ ನಲ್ಲಿ ನನ್ನ ಹಿರಿಯ ಗೆಳೆಯ ನವೀನ್ ನಾಗರಾಜ್, 
“ಮೋಹನ್ ಈ ಬರಹವನ್ನು ಇನ್ನೂ ಮುಂದುವರಿಸಿ. ನಿಮ್ಮ ಗೆಳೆಯರಲ್ಲಿ ಯಾರಾದರೂ ಕೃಷಿ ವಿಜ್ಞಾನದವರು ಇದ್ದರೆ ಇನ್ನೂ ಹಲವು ವಿಷಯ ತಿಳಿಯುತ್ತದೆ. ನನಗೆ ತಿಳಿದಂತೆ ರೈತರು ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡು, ಮಿಶ್ರ ಬೆಳೆ ಹಾಗು ಕಡಿಮೆ ನೀರಿನ ಅವಲಂಬನೆ ಇರುವ ಬೆಳೆ ಬೆಳೆಯಬೇಕು. ಇಸ್ರೇಲಿ ತಂತ್ರಜ್ಞಾನ ಅಳವಡಿಸಿಕೊಂಡರೆ ಹಾಗು ಮಾರುಕಟ್ಟೆ ಮುನ್ಸೂಚನೆ ತಿಳಿದುಕೊಂಡು ಬೆಳೆ ಬೆಳೆಯುವುದು ಅವಶ್ಯ.” ಎಂದು ಪ್ರತಿಕ್ರಿಯಿಸಿದ್ದಾರೆ. 

ವರದಕ್ಷಿಣೆ

- ತಾಜು ಕಲ್ಲಡ್ಕ

ವರದಕ್ಷಿಣೆ ಕೇಳಬಾರದೆಂದು
ನೀ ಬರೆದೆ ಅಂದು ಕವಿತೆ
ಮದುವೆ ಸಂದರ್ಭದಂದು
ನೀ ಕೇಳಿದೆ ಎರಡು ಲಕ್ಷ ಜೊತೆ

ಯಾರು ಅಸಲಿ?

- ತಾಜು ಕಲ್ಲಡ್ಕ


ಕವನವನ್ನು  ಮಾಡುವರು ನಕಲಿ
ಗೋತ್ತಾಗಲ್ಲ ಯಾರು ಅದರ ಅಸಲಿ
ನೋಡುವರು ಸಂಶಯದಲಿ
ಬರೆಯುವರು ಕಷ್ಟದಲಿ
ಸಿಕ್ಕಿದ ಸಮಯದಲಿ
ಬಗೆ ಬಗೆಯ ಚಿಂತೆಯಲಿ

ಎಲ್ರೂ ಇಲ್ಲಿ ಸೈಕಲ್ ತುಳೀಲೇಬೇಕ್

- ಚಿದಂಬರ

ಮಾಸ್ತರ್ ಕೈಯ್ಯಾಗ್ ಚಾಕ್‍ಪೀಸ್ ಆಡ್ತಿರ್‍ಬೇಕ್
ಪೋಲೀಸ್ ಕೈಯ್ಯಾಗ್ ಲಾಠಿ ಆಡ್ತಿರ್‍ಬೇಕ್
ಜವಾನನ್ ಕೈಯ್ಯಾಗ್ ಫೈಲ್ ಆಡ್ತಿರ್‍ಬೇಕ್
ಇದು ಜೀವನಾ ಐತಿ ತಮ್ಮಾ.... ಎಲ್ರೂ ಇಲ್ಲಿ ಸೈಕಲ್ ತುಳೀಲೇಬೇಕ್.

ಕೋಶ ಓದು: The Monk Who Sold His Ferrari (ಫೆರಾರಿ ಮಾರಿದ ಫಕೀರ)

ಲೇಖಕರು : ರಾಬಿನ್ ಶರ್ಮಾ
- "ಶ್ರೀ"ಖಾರ


ಯಾವತ್ತೂ ಕನ್ನಡ ಬಿಟ್ಟು ಬೇರೆ ಭಾಷೆಯ ಯಾವುದೇ ಪುಸ್ತಕ ಓದದ ನನಗೆ ಇಂಗ್ಲೀಷ್ ಭಾಷೆಯ ಮೇಲೆ ಹಿಡಿತ ಪಡೆದುಕೊಳ್ಳಲು ಗೆಳೆಯನ ಹತ್ತಿರ ಪಡೆದು ನಾನು ಓದಿದ ಮೊಟ್ಟ ಮೊದಲ ಇಂಗ್ಲೀಷ್ ಪುಸ್ತಕ ಇದು. ಒಬ್ಬ ವ್ಯಕ್ತಿ ತನ್ನ ಜೀವತಾವಧಿಯಲ್ಲಿ ಓದಲೇ ಬೇಕಾದಂತಹ ಪುಸ್ತಕ . ಈಗಿನ ಜಗತ್ತಿನಲ್ಲಿ ಜನರೆಲ್ಲಾ ದುಡ್ಡಿನ ಹಿಂದೆ ಹೋಗಿ ಜೀವನದ ಪ್ರತಿಯೊಂದು ಅಮೂಲ್ಯದ ಕ್ಷಣಗಳನ್ನ ಕಳೆದುಕೊಳ್ಳುತ್ತಿದ್ದಾರೆ.