ಮಲೆನಾಡಿನ ಚಿತ್ರಗಳು

- ಅಕ್ಷಯರಾಮ ಕಾವಿನಮೂಲೆ
ಪುಸ್ತಕ: ಮಲೆನಾಡಿನ ಚಿತ್ರಗಳು
ಲೇಖಕರು: ಕುವೆಂಪು
ಬೆಲೆ: ರೂ. 90

ಪಟ್ಟಣದ ಜಂಜಾಟದಿಂದ ಬೇಸರವಾದಾಗ ಒಮ್ಮೊಮ್ಮೆ "ಇದನ್ನೆಲ್ಲ ಬಿಟ್ಟು ಹಳ್ಳಿಗೆ ಹೋಗಿಬಿಡುವ" ಎಂದೆನಿಸುತ್ತದೆ. ಬದುಕಿನ ಏಕತಾನತೆಯನ್ನು ಕಳೆಯುವ ಸಾಮರ್ಥ್ಯ ನಮ್ಮ ಹಳ್ಳಿಗಳಿಗಿದೆ. ಸ್ವಚ್ಛ ವಾತಾವರಣ, ಗಡಿಬಿಡಿಯಿಲ್ಲದ ನೆಮ್ಮದಿಯ ಜೀವನ ಇಲ್ಲಿದೆ. ಇಪ್ಪತ್ತೊಂದನೆಯ ಶತಮಾನದಲ್ಲಿಯೇ ಇಷ್ಟು ಆಪ್ಯಾಯಮಾನವೆನಿಸುವ ಹಳ್ಳಿಯ ಬದುಕು ಇಪ್ಪತ್ತನೆಯ ಶತಮಾನದಲ್ಲಿ ಹೇಗಿದ್ದಿರಬಹುದು? ಈ ಪ್ರಶ್ನೆಗೆ ಉತ್ತರ ಸಿಗಬೇಕಾದರೆ 1933ರಲ್ಲಿ ಮೊದಲ ಮುದ್ರಣ ಕಂಡ, ರಾಷ್ಟ್ರಕವಿ ಕುವೆಂಪುರವರ 'ಮಲೆನಾಡಿನ ಚಿತ್ರಗಳು' ಎಂಬ ಪುಟ್ಟ ಪುಸ್ತಕ ಕೈಗೆತ್ತಿಕೊಳ್ಳಬೇಕು.

ನಮ್ಮ ಚೆಲುವೇಗೌಡರು – ಭಾಗ ೧

- ಮೋಹನ್ ಮೂರ್ತಿ ಮಾ ಕೆಂ

[ ಇದು ನಾನು ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾಗ ಕಾಲೇಜಿನ ಪ್ರಾಂಶುಪಾಲರಾಗಿದ್ದ ಚೆಲುವೇಗೌಡರ ಬಗ್ಗೆ ನಾನು ಎರಡು ಭಾಗಗಳಲ್ಲಿ ಬರೆಯುತ್ತಿರುವ ಲೇಖನದ ಮೊದಲನೇ ಭಾಗ. ಎರಡನೇ ಹಾಗೂ ಅಂತಿಮ ಭಾಗ ಮುಂದಿನ ತಿಂಗಳು ಪ್ರಕಟಗೊಳ್ಳುವುದು. ಈ ಲೇಖನ ಮಾಲಿಕೆಯು ಸಂಪೂರ್ಣವಾಗಿ ಚೆಲುವೇಗೌಡರ ಬಗೆಗಿನ ವಿವರಗಳನ್ನು ಒಳಗೊಳ್ಳದೇ ಹೋದರೂ, ಅವರ ಜತೆಗೆ ಒಡನಾಡಿದ ಹಲವು ಘಟನೆಗಳ ಮೂಲಕ ಪ್ರಾಂಶುಪಾಲ ಚೆಲುವೇಗೌಡರನ್ನು ಸ್ವಲ್ಪ ಪ್ರಮಾಣದಲ್ಲಿ ಓದುಗರಿಗೆ ಪರಿಚಯಿಸುವುದು ನನ್ನ ಉದ್ದೇಶ.]

ಚಿರತೆ

- ಚಿದಂಬರ

ಇತ್ತೀಚೆಗೆ ಸುತ್ತ ಎಂಟು ದಿಕ್ಕುಗಳಿಗೂ ಬೆಟ್ಟ-ಗುಡ್ಡಗಳೇ ಚಾಚಿಕೊಂಡಿರುವ ನನ್ನ ಸಂಡೂರು ಪಟ್ಟಣದಲ್ಲಿ ಚಿರತೆಗಳ ಹಾವಳಿ ಸ್ವಲ್ಪ ಹೆಚ್ಚೇ ಆಗಿದೆ.  ದಶಕಗಳ ಹಿಂದೆ ಸಹ್ಯಾದ್ರಿ ಪರ್ವತಗಳನ್ನೇ ನಾಚಿಸುವಂತಹ ಬೆಟ್ಟ-ಗುಡ್ಡಗಳಲ್ಲಿನ ವನರಾಶಿಗಳಲ್ಲಿ ಗಣಿಗಾರಿಕೆಯೆಂಬ ಪೆಡಂಭೂತದ ಕಬಂದ ಬಾಹುಗಳಲ್ಲಿ ವನ್ಯ ಜೀವಿಗಳು ಅಕ್ಷರಶಃ ನಲುಗಿ ಹೋಗಿದ್ದವು.

ಮುಂದ್ಹೇಗೆ??

- ಚಿದಂಬರ
ಸಿಂಹದ ಮರಿ ಸಿಂಹ, ಹುಲಿಯ ಮರಿ ಹುಲಿ
ಕಾಗೆಗಳ ಮರಿ ಕಾಗೆ, ಜಿಂಕೆಗಳ ಮರಿ ಜಿಂಕೆ,
ಲೆಕ್ಕಾಚಾರದಲಿ ಒಂದಿನಿತೂ ತಪ್ಪಿಲ್ಲ ನಿಸರ್ಗದಲಿ,

ರಂಗೋಲಿ ಭಾಷೆ

- ಧನುಷ್‍ಗೌಡ (ಆದರ್ಶ ಮಹದೇವ)

ಎಷ್ಟೋ ಲೇಖನಗಳು ನಮ್ಮ ಅನುಭವದಿಂದಲೇ ರೂಪಾಂತರಗೊಳ್ಳುವುದು. ಈ ಲೇಖನವು ಅದಕ್ಕೆ ಹೊರತಲ್ಲ, ಈ ಘಟನೆ ನಡೆದದ್ದು ಕೆಲವು ತಿಂಗಳುಗಳ ಕೆಳಗೆ. ನನಗೆ ಮುಂಬೈನ ಒಂದು ಐಟಿ ಕಂಪನಿಯಲ್ಲಿ ಕೆಲಸ ಸಿಕ್ಕಿತ್ತು. ಕರ್ನಾಟಕ ಬಿಟ್ಟು ಬೇರೆಲ್ಲೂ ಹೋಗದ ನನಗೆ ಈ ಕೆಲಸಕ್ಕೆ ಸೇರುವುದು ಒಂದು ಸಾಹಸವೇ ಆಗಿತ್ತು. ಮನೆಯವರೆಲ್ಲರ ವಿರೋಧದ ನಡುವೆಯೂ, ಜೊತೆಯಲ್ಲಿ ಓದಿದ್ದ ಗೆಳೆಯರಿದ್ದ ಕಾರಣ ಅಲ್ಲಿಗೆ ಹೋಗುವ ಮನಸ್ಸು ಮಾಡಿದೆ. ಮನಸ್ಸಲ್ಲಿ ಸ್ವಲ್ಪ ಅಂಜಿಕೆಯಿದ್ದರೂ ನನಗೆ ಹಿಂದಿ ತಿಳಿದಿದ್ದರಿಂದ  ಧೈರ್ಯವಿತ್ತು.

ನನ್ನ ಪ್ರೀತಿಯ ಹುಡುಗನಿಗೆ

- ರವಿಶಂಕರ್ ಶಾಸ್ತ್ರಿ
ಪುಸ್ತಕ: ನನ್ನ ಪ್ರೀತಿಯ ಹುಡುಗನಿಗೆ
ಲೇಖಕರು: ನಾಗತಿಹಳ್ಳಿ ಚಂದ್ರಶೇಖರ

ನಾಗತಿಹಳ್ಳಿ ಚಂದ್ರಶೇಖರ್ ಅವರ ಈ ಕಥಾ ಸಂಕಲನವು ೮೦ರ ದಶಕದ ಕಥೆಗಳ ಸಂಗ್ರಹವಾಗಿದೆ. ಅವುಗಳಲ್ಲಿನ ಕಥೆಗಳು ತುಷಾರ, ಮಯೂರ, ಸುಧಾ, ತರಂಗ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕೆಲವು ಕಥೆಗಳು ಸಿನಿಮಾಗಳಾಗಿವೆ.

ಹನಿಗಳು

-ಕೃಷ್ಣಕುಮಾರ್ ಕಮ್ಮಜೆ
ರಾಮರಾಜ್ಯ ವೃಕ್ಷ

ರಾಮರಾಜ್ಯ ಮರದ ಬೇರುಗಳು ಎಲ್ಲಿ?
ದೇಶದೆಲ್ಲೆಡೆ ನಗುವ ಪ್ರತಿಯೊಂದು ಹಳ್ಳಿ!

ಕನಸು

- ರವಿಶಂಕರ್ ಶಾಸ್ತ್ರಿ
ನಿನ್ನ ಕಣ್ಣಂಚಿನ ತುಂಟ ನಗು  
ನನ್ನ ಮನ ತಾಕಿದರೆ, 
ಸ್ತಬ್ಧವಾಗಿದ್ದ ಕೊಳದೊಳಗೆ  
ಕಲ್ಲು ಎಸೆದಂತೆ.