ಜ್ಞಾನೋದಯ

- ಮೋಹನ್ ಮೂರ್ತಿ ಮಾ ಕೆಂ

ನಾನು ಕಲಿತ ವಿದ್ಯೆ ಡಿಗ್ರಿಗಳೆಲ್ಲಾ
ಹತ್ತು ತಿಂಗಳ ಮಗಳ

ಅಸಾಧ್ಯ

- ಮೋಹನ್ ಮೂರ್ತಿ ಮಾ ಕೆಂ
ಜಗತ್ತಿನಲ್ಲಿ ಏನನ್ನು ಬೇಕಾದರೂ ಎದುರಿಸಿ
ಗೆಲ್ಲಬಹುದೆಂದು  ಭಾವಿಸಿದ್ದ ನನಗೆ

ರಚನಾಳಿಗೊಂದು ಬಹಿರಂಗ ಪತ್ರ

- ಮೋಹನ್ ಮೂರ್ತಿ ಮಾ ಕೆಂ

 ಗೆ,
    ರಚನಾ
    ಇಪ್ಪತ್ತಾರು ವರ್ಷ
    ಬೆಂಗಳೂರು

ಆತ್ಮೀಯ ರಚನಾ,
ನೀನು ಈ ಪತ್ರಕ್ಕೆ ಉತ್ತರ ಬರೆಯುವುದಿಲ್ಲ ಎಂದು ನನಗೆ ಗೊತ್ತು. ಆದರೂ ನನ್ನ ಅಂತರಾಳದ ಭಾವನೆಗಳನ್ನೆಲ್ಲಾ ಹೊರ ಹಾಕಿ ನನ್ನ ಮನಸ್ಸನ್ನು ಸಮಾಧಾನಿಸಿಕೊಳ್ಳಲು ಈ ಚಿಕ್ಕ ಪತ್ರ ಬರೆಯಬೇಕಾಯಿತು.

ಕೆನ್ ಹೇಳಿದ ಮೀನಿನ ಕಥೆ ಮತ್ತು ಕನ್ನಡ ಚಿತ್ರಗಳು

- ಮೋಹನ್ ಮೂರ್ತಿ ಮಾ ಕೆಂ

ಕಾರ್ಯ ನಿಮಿತ್ತ ನಾನು ಅಮೇರಿಕಾದಲ್ಲಿದ್ದೇನೆ. ಇಲ್ಲಿ ಕಂಪೆನಿಯಲ್ಲಿ ನನ್ನ ಜೊತೆ ಕೆಲಸ ಮಾಡುವ ನನ್ನ ಕೆಲವು ಸಹೋದ್ಯೋಗಿಗಳು ವಾರದಲ್ಲಿ ಒಂದೆರಡು ದಿನ ಯಾವುದಾದರೂ ಬಾರ್ ಮತ್ತು ರೆಸ್ಟೋರೆಂಟ್ ಗೆ ಹೋಗಿ ಒಂದೆರಡು ಪೆಗ್ ಕುಡಿದು ಒಂದಷ್ಟು ತಿಂಡಿ ತಿನ್ನುತ್ತಾ ಲೋಕಭಿರಾಮವಾಗಿ ಹರಟುತ್ತಾರೆ. ಮದ್ಯಪಾನ ಮಾಡದೇ ಇರುವವರು ಕೋಕೋ ಕೋಲಾ ಅಥವಾ ಸ್ಪ್ರೈಟ್ ನಂತಹ ಯಾವುದಾದರೂ ತಂಪು ಪಾನೀಯ ಕುಡಿಯುತ್ತಾ ಹರಟೆಯಲ್ಲಿ ಪಾಲ್ಗೊಳ್ಳುತ್ತಾರೆ. ಕುಡಿದು ತಿನ್ನುವುದಕ್ಕಿಂತ ಅಲ್ಲಿ ನಡೆಯುವ ಮಾತುಕತೆಗಳು ಸ್ವಾರಸ್ಯವಾಗಿರುತ್ತವೆ.

ಕಡಲತೀರದ ಭಾರ್ಗವನಿಗೆ ಹುಟ್ಟೂರ ನಮನ

- ಅಕ್ಷಯರಾಮ ಕಾವಿನಮೂಲೆ

ಮಣ್ಣುಕೊರೆಯುವ ಯಂತ್ರವೊಂದರ ಪ್ರಾತ್ಯಕ್ಷಿಕೆ ನೋಡಲೆಂದು ಅಪ್ಪನ ಜೊತೆ ಕೋಟೇಶ್ವರಕ್ಕೆ ಹೊರಟಿದ್ದೆ. ಕಡಲತೀರದ ಭಾರ್ಗವ ಡಾ. ಶಿವರಾಮ ಕಾರಂತರ ಹುಟ್ಟೂರಾದ ಕೋಟವನ್ನು ದಾಟಿ ಮುಂದುವರಿಯುವಾಗ ಕಾರಂತ ಥೀಂ ಪಾರ್ಕ್ ಎನ್ನುವ ಸಣ್ಣದೊಂದು ಬೋರ್ಡು ಕಾಣಿಸಿತು. 

ಸ್ವದೇಶಿ ಮಂತ್ರ


- ರವಿಶಂಕರ ಶಾಸ್ತ್ರಿ 

ಪತಂಜಲಿ ಉತ್ಪನ್ನಗಳು ವಿದೇಶಿ ಕಂಪೆನಿಗಳ ನಿದ್ದೆ ಕೆಡಿಸಿರುವುದನ್ನು ಇತ್ತೀಚೆಗೆ ಮಾಧ್ಯಮಗಳಲ್ಲಿ ಎಲ್ಲರೂ ಓದಿರುತ್ತೇವೆ. ಬೇರೆ ಬೇರೆ ಖಾಸಗಿ ವಾಹಿನಿಗಳಲ್ಲೂ ನಾವು ಗಮನಿಸಿದರೆ, ಈಗ ಯಾವ ವಿದೇಶಿ ಕಂಪೆನಿಗೂ ಕಮ್ಮಿ ಇಲ್ಲದಂತೆ ಜಾಹೀರಾತುಗಳು ಪ್ರಸಾರವಾಗುತ್ತವೆ. ಅಂದ ಮೇಲೆ ಭರ್ಜರಿಯಾಗಿಯೇ ಪತಂಜಲಿ ವಸ್ತುಗಳು ಸದ್ದು ಮಾಡುತ್ತಿವೆ ಎಂದಾಯಿತು.

ದೇಶ ಸುತ್ತು: ಉತ್ತರ ಭಾರತ ಪ್ರವಾಸ - ಭಾಗ ೬

- ಅಕ್ಷಯರಾಮ ಕಾವಿನಮೂಲೆ


ತಾಜ್ ಮಹಲಿನ ಮುಂದಿರುವ ಉದ್ಯಾನದಲ್ಲಿ ಮತ್ತೊಂದಷ್ಟು ಫೋಟೋ ತೆಗೆದು ಹೊರಬಂದೆವು.
ಗೈಡ್ ಆಸೀಮುದ್ದೀನ್ ನಮ್ಮನ್ನು ಹತ್ತಿರದಲ್ಲೇ ಇದ್ದ ಕರಕುಶಲ ವಸ್ತುಗಳ ಮಾರಾಟ ಮಳಿಗೆಗೆ ಕರೆದೊಯ್ದ. ಅಲ್ಲೊಬ್ಬ ಕುಶಲಕರ್ಮಿ ಕೈಯಲ್ಲಿ ರಾಟೆಯಂತಹದ್ದೊಂದು ಉಪಕರಣವನ್ನು ಬಳಸಿ ಅಮೃತಶಿಲೆ ಹಾಗೂ ಇತರ ಬಣ್ಣದ ಕಲ್ಲುಗಳನ್ನು ವಿವಿಧ ಆಕಾರ, ಗಾತ್ರಗಳಿಗೆ ಕತ್ತರಿಸಿ, ತಾಜ್ ಮಹಲಿನ ಗೋಡೆಗಳಲ್ಲಿನ ಚಿತ್ತಾರದ ಪ್ರತಿರೂಪಗಳಂತಿರುವ ಕಲಾಕೃತಿಗಳನ್ನು ತಯಾರಿಸುತ್ತಿದ್ದ.

ನಮ್ಮ ಕನ್ನಡ

- ರವಿಶಂಕರ್ ಶಾಸ್ತ್ರಿ

ಮತ್ತೆ ನವೆಂಬರ್ ಬಂದಿದೆ. ಕನ್ನಡ ನಮ್ಮ ಭಾಷೆ ಅಂತ ನೆನಪಿಸಿಕೊಳ್ಳುವ ಸಮಯ. ಎಷ್ಟೋ ಜನರಿಗೆ ತಮ್ಮ-ತಮ್ಮ ಸಂಘ-ಸಂಸ್ಥೆಗಳ ವತಿಯಿಂದ ಅದ್ದೂರಿಯಾಗಿ ರಾಜ್ಯೋತ್ಸವ ಆಚರಿಸುವ ಸಮಯ. ವರ್ಷ ಪೂರ್ತಿ ಮರೆತು ಹೋಗಿದ್ದ ಕನ್ನಡ ಪ್ರೇಮವನ್ನು ಬಡಿದೆಬ್ಬಿಸುವ ಸಮಯ ಬಂದಿದೆ. ಎಲ್ಲ ಕಡೆ ಆಂಗ್ಲ ಭಾಷೆಯ ಉಪಯೋಗ ಹೆಚ್ಚಾಗಿದೆ ಅಂತ ನಾವೆಲ್ಲ ಒಂದಲ್ಲ ಒಂದು ಸಲ ಹೇಳಿರುತ್ತೇವೆ/ಕೇಳಿರುತ್ತೇವೆ. ಎಲ್ಲ ಸರಿ, ನಾವು ನಮ್ಮ ಕಡೆಯಿಂದ ಆಗುವ ಪ್ರಯತ್ನ ಮಾಡಿದ್ದೇವಾ?

ಮೊಬೈಲ್ ಮಾಯೆ

- ರವಿಶಂಕರ್ ಶಾಸ್ತ್ರಿ

ನೀನು ಬಂದ ಮೇಲೆ
ನನ್ನ ಮನದಲಿದ್ದ ಖಾಲಿ ಜಾಗ ಮರೆಯಾಗಿದೆ
ನೀನು ಬಂದ ಮೇಲೆ

ದೃಷ್ಟಿಕೋನ

- ಮೋಹನ್ ಮೂರ್ತಿ ಮಾ. ಕೆಂ.
ದೇವರು ತಾನು ಎಲ್ಲಾ ಕಡೆಯೂ
ಇರಲಾರನೆಂದು ಭಾವಿಸಿ

ನೆಮ್ಮದಿ

-  ರವಿಶಂಕರ್ ಶಾಸ್ತ್ರಿ

ಬೆಂಗಳೂರಿನಂತಹ ಮಹಾನಗರಗಳಲ್ಲಿ ಕೆಲಸ ಮಾಡುವ ಬಹಳಷ್ಟು ಜನರಿಗೆ, ಅದರಲ್ಲೂ ಸಾಫ್ಟ್‌ವೇರ್ ಕೆಲಸದವರಿಗೆ ಎಲ್ಲಾ  ಇದ್ದರೂ ಏನೋ ಇಲ್ಲದ ಭಾವ ಯಾವಾಗಲೂ. ಬೇಕಾದರೆ ಕೇಳಿ ನೋಡಿ, ಎಷ್ಟು ಜನ ಮನಃಪೂರ್ವಕವಾಗಿ ಖುಷಿಯಾಗಿದ್ದೇವೆ ಅಂತ ಹೇಳುತ್ತಾರೆ?

ಕೋಶ ಓದು : ಕುಟುಂಬ ವಿವೇಕ


- "ಶ್ರೀ"ಖಾರ 
ಲೇಖಕರು:ರಾಬಿನ್ ಶರ್ಮ

ಜೀವನದಲ್ಲಿ ಪ್ರತಿಯೊಂದು ವಿಷಯದಲ್ಲೂ ನಮಗೆ ಬುದ್ದಿ -ವಿವೇಕ ಇರಬೇಕು ಎಂದೇನೂ ಇಲ್ಲ. ಆದರೆ ವಿವೇಕವಿದ್ದರೆ, ಯಾವುದೇ ವಿಷಯದಲ್ಲಿ ನಮ್ಮ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ. ಕೆಲವೊಂದನ್ನು ಅನುಭವದಿಂದ, ಕೆಲವೊಂದನ್ನು ಪುಸ್ತಕದಲ್ಲಿ ಓದುವುದರಿಂದ ತಿಳಿದು ನಿರ್ವಹಣೆ ಮಾಡಬಹುದು.