- ಮೌನ
ನೀನರಿಯದ ಆಳ
ನೀನೆಂದೂ ತಿಳಿಯಲಾರೆ
ನನ್ನ ಕಂಗಳ ಆಳದಲಿ
ತೋರುವ ನರಕ ಸದೃಶ
ಯಾತನೆಯನು
ಭಾವಸುರುಳಿಯಾಚೆ
ಯಾರನ್ನೂ ತನ್ನ ಭಾವಸುರುಳಿಯಲಿ
ಎಳೆಯದೇ ಏಕಾಂತವ ಬಯಸಿ
ಪಡೆವ ಜೀವ
ಯಾರ ಮರ್ಜಿಯೂ ಬೇಕಿಲ್ಲದೆ
ಏಕಾಂತದಿರೆ ನಮ್ಮಳತೆಯ ಭಾವ
ಎಳೆಯದೇ ಏಕಾಂತವ ಬಯಸಿ
ಪಡೆವ ಜೀವ
ಯಾರ ಮರ್ಜಿಯೂ ಬೇಕಿಲ್ಲದೆ
ಏಕಾಂತದಿರೆ ನಮ್ಮಳತೆಯ ಭಾವ
ಪ್ರೀತಿಯ ಚದುರಂಗ
ಪ್ರೀತಿ ಚದುರಂಗದಂತಲ್ಲ
ರಾಜನ ಉಳಿವಿಗಾಗಿ
ರಾಣಿ ತನ್ನ ಅಸ್ತಿತ್ವ
ಮರೆಯಬೇಕಿಲ್ಲ
ಈರ್ವರ ಸಾಂಗತ್ಯವೇ
ಆಟದ ಸ್ವಾರಸ್ಯ
ರಾಜನ ಉಳಿವಿಗಾಗಿ
ರಾಣಿ ತನ್ನ ಅಸ್ತಿತ್ವ
ಮರೆಯಬೇಕಿಲ್ಲ
ಈರ್ವರ ಸಾಂಗತ್ಯವೇ
ಆಟದ ಸ್ವಾರಸ್ಯ
No comments:
Post a Comment