ನೀನರಿಯದ ಆಳ
ನೀನೆಂದೂ ತಿಳಿಯಲಾರೆ
ನನ್ನ ಕಂಗಳ ಆಳದಲಿ
ತೋರುವ ನರಕ ಸದೃಶ
ಯಾತನೆಯನು
ಜೂನ್ ಸಂಚಿಕೆಯಲ್ಲಿ
- ರವಿಕುಮಾರ್ ಎಂ. ಎಸ್.
ಇಂದಿನ ಡಿಜಿಟಲ್ ಯುಗದಲ್ಲಿ ಎಲ್ಲಾ ಮಾಹಿತಿ ಕೈಬೆರಳ ತುದಿಯಲ್ಲಿ ಲಭ್ಯವಿದ್ದರೂ, ವಿಮರ್ಶಾತ್ಮಕ ಚಿಂತನೆ ಕುಂಠಿತವಾಗುತ್ತಿರುವುದು ಒಂದು ಆತಂಕದ ಹಾಗೂ ಗಂಭೀರದ ವಿದ್ಯಮಾನ. ನಾವು ನಮಗರಿವಿಲ್ಲದಂತೆಯೇ "ಸಾಮೂಹಿಕ ಮೂರ್ಖತನ"ಕ್ಕೆ ಬಲಿಯಾಗಲು ಹಲವಾರು ಮನೋವೈಜ್ಞಾನಿಕ ಮತ್ತು ಸಾಮಾಜಿಕ ಕಾರಣಗಳಿವೆ.
- ಮಂಜುನಾಥ್ ಪಿ
ಕೆಲವು ವಾರಗಳ ಕೆಳಗೆ ನಾನು ರಕ್ತದಾನ ಮಾಡಲು ಎಂದಿನಂತೆ ನಾನು ಹೋಗುವ ರಕ್ತನಿಧಿ ಕೇಂದ್ರಕ್ಕೆ ಹೋದೆ. ಅಲ್ಲಿ ರಕ್ತನಿಧಿ ಕೇಂದ್ರವನ್ನು ನಿರ್ವಹಿಸುವ ಓರ್ವ ವ್ಯಕ್ತಿಯನ್ನು ಹಾಗೇ ಮಾತಿಗೆಳೆದಾಗ, ರಕ್ತದಾನದ ಬಗ್ಗೆ ಬಹಳಷ್ಟು ಉಪಯುಕ್ತ ಮಾಹಿತಿ ನೀಡಿದರು. ಅದಾಗಿ ಕೆಲವು ದಿನಗಳು ಕಳೆಯಿತು. ಒಂದು ದಿವಸ ನಾನು ನನ್ನ ಆಪ್ತ ಮಿತ್ರನ ಜೊತೆ ಮಾತನಾಡುವಾಗ ರಕ್ತನಿಧಿ ಕೇಂದ್ರದ ವ್ಯಕ್ತಿ ನೀಡಿದ ಮಾಹಿತಿಗಳನ್ನು ಪ್ರಸ್ತಾಪಿಸಿದೆ. ನನ್ನ ಮಿತ್ರ ನೀನ್ಯಾಕೆ ಈ ಉಪಯುಕ್ತ ವಿಷಯವನ್ನು ವಿಸ್ತೃತ ಲೇಖನದ ಮೂಲಕ ಇತರರಿಗೆ ಹಂಚಿಕೊಳ್ಳಬಾರದು. ಇದರಿಂದ ರಕ್ತದಾನದ ಬಗ್ಗೆ ಜನರಿಗೆ ಇರುವ ತಪ್ಪು ತಿಳುವಳಿಕೆ ನೀಗಲು ಸಹಾಯವಾಗಬಹುದು ಇದರ ಜೊತೆಗೆ ರಕ್ತದಾನ ಮಾಡಲು ಹಲವರಿಗೆ ಪ್ರೇರೇಪಣೆ ನೀಡಬಹುದು ಎಂದು ಸಲಹೆಯಿತ್ತರು. ಅವರ ಹೇಳಿದ ಮಾತುಗಳು ನನಗೆ ಸರಿ ಅನಿಸಿತು. ಅದರ ಫಲಿತಾಂಶವೇ ಈ ಲೇಖನ.
- ವಂದನಾ ಎನ್
ಅವಶೇಷಗಳು
ಮನದ ತುಂಬಾ ಒಲವು ತುಂಬಿದ್ದರೂ
ಕೆಲವೊಮ್ಮೆ ವಿಧಿನಿಯಮ
ನಮ್ಮ ಬಾಹುಗಳಲಿ ಬಂಧಿಸಲಾಗುವುದಿಲ್ಲವೆನ್ನುವುದೇ
ನೋವಿನ ಸಂಗತಿ
ಬೀಭತ್ಸ ಯುದ್ಧದ ಕ್ರೌರ್ಯಕೆ
ರಕ್ತ ಒಸರುವ, ಕೀವು ಜಿನುಗುವ ಎಂದೂ ಮಾಯದ
ಮನಸ್ಸಿನ ಗಾಯಗಳಿಗೆ
ಮುಲಾಮುಂಟೆ ಈ ಜಗದಲಿ