ಆಗಷ್ಟೇಅವನು
ಕಛೇರಿಯಿಂದಮನೆಗೆ
ಬಂದಿದ್ದ. ಬಾಗಿಲು
ತೆಗೆಯುತ್ತಲೇಎದುರುಗಡೆ೩
ವರ್ಷದಮಗ
ನಿಂತಿದ್ದ. ಅವನ
ಕೈಯಲ್ಲಿಮೊನ್ನೆ
ತಾನೇಹೊಸದಾಗಿ
ಕೊಡಿಸಿದ್ದರಿಮೋಟ್
ಕಾರ್ಇತ್ತು. ಅದರ
ಚಕ್ರಗಳುಮುರಿದುಹೋಗಿದ್ದವು.
"ಛೇ, ಯಾವಾಗಲೂ ಇದೇ ಗೋಳು, ಎಲ್ಲರಲ್ಲೂ 'ದಂಡಪಿಂಡ' ಎಂದು ಬೈಸಿಕೊಂಡಾಯ್ತು. ನನ್ನ ಹಣೆಬರಹವೇ ಇಷ್ಟು!" ಗೊಣಗಿಕೊಂಡು ಹೆಜ್ಜೆ ಹಾಕಿದ ಸುರೇಶ. ಪಿ.ಯು.ಸಿ. ಪಾಸಾಗದಿದ್ದರೂ ಸುರೇಶ ದಡ್ಡನೇನೂ ಅಲ್ಲ. ಅವನಿಗೆ ಅತನದೇ ಹತ್ತು ಹಲವು ಕಲ್ಪನೆ, ಭಾವನೆಗಳಿದ್ದವು. ವಿದ್ಯೆ ನೈವೇದ್ಯವಾದರೂ ಪ್ರಕೃತಿ ಪ್ರಿಯ. ಚಾರಣ, ಈಜು, ಅಲೆದಾಟಗಳೇ ಅಚ್ಚುಮೆಚ್ಚು ! ನೆರೆಹೊರೆಯವರ, ನೆಂಟರಿಷ್ಟರ ಬಾಯಿಗೆ ಸುರೇಶ ಅನವರತ ಆಹಾರವಾಗಿದ್ದ. ಆತನ ಬಗ್ಗೆ ನಾಲ್ಕು ಚುಚ್ಚುಮಾತು ಆಡದೇ ಇದ್ದರೆ ಅವರ ಕಣ್ಣಿಗೆ ನಿದ್ರೆ ಹತ್ತದು.