Showing posts with label ರವಿಕುಮಾರ್ ಎಂ.ಎಸ್.. Show all posts
Showing posts with label ರವಿಕುಮಾರ್ ಎಂ.ಎಸ್.. Show all posts

ವಿಮರ್ಶಾತ್ಮಕ ಚಿಂತನೆ ಹಾಗೂ ಸಾಮೂಹಿಕ ಮೂರ್ಖತನ

- ರವಿಕುಮಾರ್ ಎಂ. ಎಸ್. 

ಇಂದಿನ ಡಿಜಿಟಲ್ ಯುಗದಲ್ಲಿ ಎಲ್ಲಾ ಮಾಹಿತಿ ಕೈಬೆರಳ ತುದಿಯಲ್ಲಿ ಲಭ್ಯವಿದ್ದರೂ, ವಿಮರ್ಶಾತ್ಮಕ ಚಿಂತನೆ ಕುಂಠಿತವಾಗುತ್ತಿರುವುದು ಒಂದು ಆತಂಕದ ಹಾಗೂ ಗಂಭೀರದ ವಿದ್ಯಮಾನ. ನಾವು  ನಮಗರಿವಿಲ್ಲದಂತೆಯೇ "ಸಾಮೂಹಿಕ ಮೂರ್ಖತನ"ಕ್ಕೆ  ಬಲಿಯಾಗಲು ಹಲವಾರು ಮನೋವೈಜ್ಞಾನಿಕ ಮತ್ತು ಸಾಮಾಜಿಕ ಕಾರಣಗಳಿವೆ. 

ಡೋಪಮೈನ್ ಡಿಟಾಕ್ಸ್: ಮಾನಸಿಕ ಏಕಾಗ್ರತೆಯತ್ತ ನನ್ನ ಹೆಜ್ಜೆಗಳು

 - ರವಿಕುಮಾರ್ ಎಂ.ಎಸ್.

ಇತ್ತೀಚೆಗೆ ನನ್ನ ಆತ್ಮೀಯ ಸ್ನೇಹಿತರೊಬ್ಬರು ನಾನು ಭಾಗವಹಿಸಿದ್ದ Toastmaster ಸಭೆಯಲ್ಲಿ  "ಡೋಪಮೈನ್ " ಎಂಬ ನಿರೂಪಣಾ  ವಿಷಯವನ್ನಿಟ್ಟುಕೊಂಡು, ಡೋಪಮೈನ್ ಎಂದರೇನು ಎಂಬ ಸಣ್ಣ ವಿವರದಿಂದ ಶುರು ಮಾಡಿ, ಸಾಮಾಜಿಕ ಜಾಲತಾಣಗಳ ಹಿಂದಿರುವ ದೊಡ್ಡ ಕಂಪೆನಿಗಳು ಹೇಗೆ ಮನುಷ್ಯನಲ್ಲಿ ಡೋಪಮೈನ್ ಬಿಡುಗಡೆಯಾಗುವ ಕ್ರಿಯೆಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು, ನಮ್ಮಲ್ಲಿ ಸಾಮಾಜಿಕ ಜಾಲತಾಣಗಳ ವ್ಯಸನಕ್ಕೆ ಕಾರಣವಾಗಿವೆ ಹಾಗೂ ಇದರ ಅಡ್ಡ ಪರಿಣಾಮಗಳೇನು ಎಂಬುದನ್ನು ವೈಜ್ಞಾನಿಕ ಆಧಾರಗಳೊಂದಿಗೆ ಮನ ಮುಟ್ಟುವಂತೆ ವಿವರಿಸಿದರು. ನಿಮಗೆ ಅದರ ವಿವರಗಳು ಬೇಕೆಂದಲ್ಲಿ, ಇಲ್ಲಿ ಕ್ಲಿಕ್ ಮಾಡಿ -ಡೊಪಮೈನ್ ಎಂಬ ಸೂತ್ರಧಾರ. ಸಭೆಯ ಕೊನೆಯಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಅವರು ಓದಿದ್ದ ಪುಸ್ತಕಗಳನ್ನು ಪ್ರಸ್ತಾಪಿಸಿದ್ದರು. ಡೋಪಮೈನ್ ಬಗ್ಗೆ ಇನ್ನಷ್ಟು ವಿವರಗಳನ್ನು ತಿಳಿಯಲು ಕೆಲವು ಪುಸ್ತಕಗಳನ್ನು ಓದಲು ಸೂಚಿಸಿದರು. ಅದರಲ್ಲಿ  “Dopamine Detox" ಎಂಬ ಪುಸ್ತಕ ಕೂಡ ಒಂದು. 

ರಕ್ತದಾನ: ಸಮಾಜದ ಋಣ ತೀರಿಸುವ ಹಾದಿ

- ರವಿಕುಮಾರ್ ಎಂ.ಎಸ್.

ಕೆಲವು ವಾರಗಳ ಕೆಳಗೆ ನಾನು ರಕ್ತದಾನ ಮಾಡಲು ಎಂದಿನಂತೆ ನಾನು ಹೋಗುವ ರಕ್ತನಿಧಿ ಕೇಂದ್ರಕ್ಕೆ ಹೋದೆ. ಅಲ್ಲಿ ರಕ್ತನಿಧಿ ಕೇಂದ್ರವನ್ನು ನಿರ್ವಹಿಸುವ ಓರ್ವ ವ್ಯಕ್ತಿಯನ್ನು ಹಾಗೇ ಮಾತಿಗೆಳೆದಾಗ, ರಕ್ತದಾನದ ಬಗ್ಗೆ ಬಹಳಷ್ಟು ಉಪಯುಕ್ತ ಮಾಹಿತಿ ನೀಡಿದರು. ಅದಾಗಿ ಕೆಲವು ದಿನಗಳು ಕಳೆಯಿತು. ಒಂದು ದಿವಸ ನಾನು ನನ್ನ ಆಪ್ತ ಮಿತ್ರನ ಜೊತೆ ಮಾತನಾಡುವಾಗ ರಕ್ತನಿಧಿ ಕೇಂದ್ರದ ವ್ಯಕ್ತಿ ನೀಡಿದ ಮಾಹಿತಿಗಳನ್ನು ಪ್ರಸ್ತಾಪಿಸಿದೆ. ನನ್ನ ಮಿತ್ರ ನೀನ್ಯಾಕೆ ಈ ಉಪಯುಕ್ತ ವಿಷಯವನ್ನು ವಿಸ್ತೃತ ಲೇಖನದ ಮೂಲಕ ಇತರರಿಗೆ ಹಂಚಿಕೊಳ್ಳಬಾರದು. ಇದರಿಂದ ರಕ್ತದಾನದ ಬಗ್ಗೆ ಜನರಿಗೆ ಇರುವ ತಪ್ಪು ತಿಳುವಳಿಕೆ ನೀಗಲು ಸಹಾಯವಾಗಬಹುದು ಇದರ ಜೊತೆಗೆ ರಕ್ತದಾನ ಮಾಡಲು ಹಲವರಿಗೆ ಪ್ರೇರೇಪಣೆ ನೀಡಬಹುದು ಎಂದು ಸಲಹೆಯಿತ್ತರು. ಅವರ ಹೇಳಿದ ಮಾತುಗಳು ನನಗೆ ಸರಿ ಅನಿಸಿತು. ಅದರ ಫಲಿತಾಂಶವೇ ಈ ಲೇಖನ. 

ಆತ್ಮ ಸಖಿ

- ರವಿಕುಮಾರ್ ಎಂ. ಎಸ್. 

ನೀ ಎಲ್ಲಿರುವೆ? ನಿನ್ನ ಬರುವಿಕೆಯ ಕನವರಿಕೆಯಲ್ಲಿ
ನೀ ಬರುವ ದಾರಿಯಲ್ಲಿ, ಕಾದಿರುವೆ ನಿರೀಕ್ಷೆಯಲ್ಲಿ

ಕೋಶ ಓದು : ದಾಟು

- ರವಿಕುಮಾರ್ ಎಂ.ಎಸ್.

ದಾಟು ಕಾದಂಬರಿ ಪ್ರಕಟವಾಗಿದ್ದು 1973 ರಲ್ಲಿ. ಅಂದಿನ ಕಾಲಘಟ್ಟದಲ್ಲಿ ಅಸಮಾನತೆಯ ಗ್ರಾಮೀಣ ಮತ್ತು ನಗರ ಜೀವನ ಹೇಗೆ ಪರಿವರ್ತನೆಯ ಹಾದಿಯಲ್ಲಿ ಸಾಗಿತ್ತು ಎಂಬ ಚಿತ್ರಣವನ್ನು ಈ ಕೃತಿ ದಾಖಲಿಸುತ್ತಾ ಹೋಗುತ್ತದೆ. ಈ ಕಾದಂಬರಿಯು ತಿಮಲಾಪುರ ಎಂಬ ಗ್ರಾಮೀಣ ಪ್ರದೇಶದಲ್ಲಿ ವಿವಿಧ ವರ್ಗಗಳ ನಡುವೆ ನಡೆಯುವ ಜೀವನದ ಅನಾವರಣವಾಗಿ ತೆರೆದುಕೊಳ್ಳುತ್ತದೆ.