Showing posts with label ವ್ಯಕ್ತಿ ವಿಚಾರ. Show all posts
Showing posts with label ವ್ಯಕ್ತಿ ವಿಚಾರ. Show all posts

ಕಡಲತೀರದ ಭಾರ್ಗವನಿಗೆ ಹುಟ್ಟೂರ ನಮನ

- ಅಕ್ಷಯರಾಮ ಕಾವಿನಮೂಲೆ

ಮಣ್ಣುಕೊರೆಯುವ ಯಂತ್ರವೊಂದರ ಪ್ರಾತ್ಯಕ್ಷಿಕೆ ನೋಡಲೆಂದು ಅಪ್ಪನ ಜೊತೆ ಕೋಟೇಶ್ವರಕ್ಕೆ ಹೊರಟಿದ್ದೆ. ಕಡಲತೀರದ ಭಾರ್ಗವ ಡಾ. ಶಿವರಾಮ ಕಾರಂತರ ಹುಟ್ಟೂರಾದ ಕೋಟವನ್ನು ದಾಟಿ ಮುಂದುವರಿಯುವಾಗ ಕಾರಂತ ಥೀಂ ಪಾರ್ಕ್ ಎನ್ನುವ ಸಣ್ಣದೊಂದು ಬೋರ್ಡು ಕಾಣಿಸಿತು. 

ನಮ್ಮ ಚೆಲುವೇಗೌಡರು – ಭಾಗ ೨

-ಮೋಹನ್ ಮೂರ್ತಿ ಮಾ ಕೆಂ
[ಇದು ನಾನು ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾಗ ಕಾಲೇಜಿನ ಪ್ರಾಂಶುಪಾಲರಾಗಿದ್ದ ಚೆಲುವೇಗೌಡರ ಬಗ್ಗೆ ನಾನು ಎರಡು ಭಾಗಗಳಲ್ಲಿ ಬರೆಯುತ್ತಿರುವ ಲೇಖನದ ಎರಡನೇ ಮತ್ತು ಅಂತಿಮ ಭಾಗ. ಮೊದಲನೇ ಭಾಗ ಇಲ್ಲಿದೆ ನಮ್ಮ ಚೆಲುವೇಗೌಡರು - ಭಾಗ ೧. ಈ ಲೇಖನ ಮಾಲಿಕೆಯು ಸಂಪೂರ್ಣವಾಗಿ ಚೆಲುವೇಗೌಡರ ಬಗೆಗಿನ ವಿವರಗಳನ್ನು ಒಳಗೊಳ್ಳದೇ ಹೋದರೂ, ಅವರ ಜತೆಗೆ ಒಡನಾಡಿದ ಹಲವು ಘಟನೆಗಳ ಮೂಲಕ ಪ್ರಾಂಶುಪಾಲ ಚೆಲುವೇಗೌಡರನ್ನು ಸ್ವಲ್ಪ ಪ್ರಮಾಣದಲ್ಲಿ ಓದುಗರಿಗೆ ಪರಿಚಯಿಸುವುದು ನನ್ನ ಉದ್ದೇಶ.]

ನಮ್ಮ ಚೆಲುವೇಗೌಡರು – ಭಾಗ ೧

- ಮೋಹನ್ ಮೂರ್ತಿ ಮಾ ಕೆಂ

[ ಇದು ನಾನು ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾಗ ಕಾಲೇಜಿನ ಪ್ರಾಂಶುಪಾಲರಾಗಿದ್ದ ಚೆಲುವೇಗೌಡರ ಬಗ್ಗೆ ನಾನು ಎರಡು ಭಾಗಗಳಲ್ಲಿ ಬರೆಯುತ್ತಿರುವ ಲೇಖನದ ಮೊದಲನೇ ಭಾಗ. ಎರಡನೇ ಹಾಗೂ ಅಂತಿಮ ಭಾಗ ಮುಂದಿನ ತಿಂಗಳು ಪ್ರಕಟಗೊಳ್ಳುವುದು. ಈ ಲೇಖನ ಮಾಲಿಕೆಯು ಸಂಪೂರ್ಣವಾಗಿ ಚೆಲುವೇಗೌಡರ ಬಗೆಗಿನ ವಿವರಗಳನ್ನು ಒಳಗೊಳ್ಳದೇ ಹೋದರೂ, ಅವರ ಜತೆಗೆ ಒಡನಾಡಿದ ಹಲವು ಘಟನೆಗಳ ಮೂಲಕ ಪ್ರಾಂಶುಪಾಲ ಚೆಲುವೇಗೌಡರನ್ನು ಸ್ವಲ್ಪ ಪ್ರಮಾಣದಲ್ಲಿ ಓದುಗರಿಗೆ ಪರಿಚಯಿಸುವುದು ನನ್ನ ಉದ್ದೇಶ.]

ಶ್ರೀಮಂತ ಡಾ|| ಎಂ.ವೈ.ಘೋರ್ಪಡೆ - ಒಂದು ವ್ಯಕ್ತಿ ಚಿತ್ರ

- ಚಿದಂಬರ

 ಸ್ಕಂದಪುರ ವೆಂಬ ಅನ್ವರ್ಥಕ ನಾಮದಿಂದ, “ಸಂಡೂರು” ಎಂಬ ರೂಢಿನಾಮದಿಂದ ಕರೆಯಲ್ಪಡುತ್ತಿರುವ ನನ್ನ ಜನ್ಮಭೂಮಿ, ಕರ್ಮಭೂಮಿಯಾಗಿರುವ ಪಟ್ಟಣವನ್ನು ‘ಬಳ್ಳಾರಿಯ ಓಯಸಿಸ್’, ‘ಬಳ್ಳಾರಿಯ ಕಾಶ್ಮೀರ’ ಎಂತಲೇ ಕರೆಯುತ್ತಾರೆ. ಇದರ ಇತಿಹಾಸವನ್ನು ಕೆದಕುತ್ತಾ ಹೋದಲ್ಲಿ, ಈ ಸಂಸ್ಥಾನವನ್ನು ಬ್ರಿಟೀಷರ ಅಧೀನದಲ್ಲಿ ಮರಾಠ ವಂಶಸ್ಥರಾದ “ಘೋರ್ಪಡೆ” ರಾಜ ಮನೆತನಕ್ಕೆ ಸೇರಿದ ಶ್ರೀಮಂತ ಸಿದ್ಧೋಜಿ ಘೋರ್ಪಡೆ ಕ್ರಿ.ಶ.1713 ರಲ್ಲಿ ಆಳ್ವಿಕೆ ಪ್ರಾರಂಭಿಸಿದರು ಎಂಬುದು ಕಂಡು ಬರುತ್ತದೆ.

ಬೈಹುಲ್ಲು ಖಾದ್ರಿ

-ಅಕ್ಷಯರಾಮ ಕಾವಿನಮೂಲೆ

ಇತ್ತೀಚೆಗೆ ಕೊಂಡ ಶ್ರೀ ನರೇಂದ್ರ ರೈ ದೇರ್ಲ ಅವರ 'ಹಸಿರು ಕೃಷಿಯ ನಿಟ್ಟುಸಿರುಗಳು' ಪುಸ್ತಕದ ಪುಟಗಳನ್ನು ತಿರುವುತ್ತಿದ್ದಾಗ ಮಾಡಾವು ಉಸ್ಮಾನ್ ಬ್ಯಾರಿಯ ಲಾರಿ ಬಗ್ಗೆ ಒಂದು ಲೇಖನ ಕಂಡಿತು. "ಅರೇ, ನಾವು ಸಣ್ಣದಿದ್ದಾಗ ಮನೆಗೆ ಬೈಹುಲ್ಲು ತರುತ್ತಿದ್ದ ಜನ ಅಲ್ವಾ ?" ಎಂದು ಅಪ್ಪನ ಹತ್ತಿರ ಹೇಳಿದಾಗ "ಹೌದು, ಆದರೆ ಉಸ್ಮಾನಿನ ಅಪ್ಪ ಖಾದ್ರಿಯ ಬಗ್ಗೆಯೂ ಬರೆಯಬೇಕಿತ್ತು, ಒಳ್ಳೆಯ ಮನುಷ್ಯ" ಎನ್ನುವ ಉದ್ಗಾರ ಬಂತು.