ಕಡಲ ಬೇಟೆ

- ರಾಘವೇಂದ್ರ ಎಸ್. 

(ನ್ಯೂಜಿಲೆಂಡ್ ನ ಪ್ರಸಿದ್ಧ ಗೀತೆ- Soon May the Wellerman Comeನ ಭಾವಾನುವಾದ)

ಹಡಗೊಂದು ಕಡಲಿಗಿಳಿಯಿತು,
“ಮಡಿಕೆ” ಎಂಬ ಹೆಸರನೊತ್ತು, 
ಗಾಳಿ ಸೀಳಿ, ಮುಂಗೋಟು ಇಳಿಸಿ  
ಕುಳಿತವರನ್ನೆಲ್ಲ ಕುಲುಕಿಸಿ

ಇನ್ನೇನು ಮಾಣಿ ಬರುವನು, 
ದಿನಸಿ ಹೊತ್ತು ತರುವನು, 
ಬೇಟೆ ಮುಗಿಸಿದ ಆ ದಿನ, 
ನಮಗೆ ಮುಕ್ತಿಯ ಸುದಿನ! 

ದಡ ಬಿಟ್ಟು ಅರೆತಿಂಗಳಾಗಿಲ್ಲ, 
ದೈತ್ಯ ತಿಮಿಂಗಿಲ ತಾಕಿತಲ್ಲ! 
ಪಣತೊಟ್ಟ ಹಡಗಿನ ತಾಂಡೇಲ, 
"ಬೇಟೆಯಾಡದೆ ಬಿಡೆನಲ್ಲ!"

ಬಾಲದ ಏಟಿಗೆ ದೋಣಿಯು ಮಗುಚಿತು, 
ಈಟಿಯ ತಿವಿದು ಸೆಣಸಾಟವು ಕಾದಿತು! 
ಆಳದ ಕಡಲಿಗೆ ದೈತ್ಯವು ಮುಳುಗಿತು, 
ಹಗ್ಗವನೆಳೆಯುತ ಸಾಗರದಿ ಸಾಗಿತು!

ಕಳಚದ ಹಗ್ಗ, ನುಣುಚದ ತಿಮಿಂಗಿಲ,
ಛಲಬಿಡದ ನಾಯಕನ ದಾಹವೋ?
ನಾವಿಕ ದಮ್ಮವೋ? (ಧರ್ಮವೋ)
ಲೀನವಾಗುತ್ತಿದೆ ನಾವೆ 

ತಿಂಗಳುಗಳು ಕಳೆದರೂ,
ಹಗ್ಗ ಅಳ್ಳಕವಾದರೂ, ಹುರಿಬಿಗಿದರೂ,
ಹಡಗುಗಳೆಲ್ಲ ಕಳೆದರೂ
ಸಿಗದೇ ನಡೆದ ಚತುರ 
 
ಸಾಗಿದೆ ಸೆಣಸಾಟ 
ಹರಿಯದ ಹಗ್ಗ, ನಿಲ್ಲದ ತಿಮಿಂಗಿಲದ ನುಣುಚಾಟ,
ಏನಾದರೂ, ಮಾಣಿ ಬಂದೇ ಬರುವನು
ನಮ್ಮೆಲ್ಲರ ಹುರಿದುಂಬಿಸುವನು

No comments:

Post a Comment