Showing posts with label ಪುಸ್ತಕ ಪ್ರೀತಿ. Show all posts
Showing posts with label ಪುಸ್ತಕ ಪ್ರೀತಿ. Show all posts

ಕೋಶ ಓದು : ೫ ಪೈಸೆ ವರದಕ್ಷಿಣೆ

- ರವಿಶಂಕರ್ ಶಾಸ್ತ್ರಿ

ವಸುಧೇಂದ್ರರವರ ೨೪ ಪ್ರಬಂಧಗಳ ಸಂಕಲನ ಇದಾಗಿದೆ. ದಿನನಿತ್ಯದ ಸರಳ ವಿಷಯಗಳನ್ನು ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಿಸಿದ್ದಾರೆ ಲೇಖಕರು. ಎಂದಿನಂತೆ ವಸುಧೇಂದ್ರರ ಪುಸ್ತಕಗಳು ಒಮ್ಮೆ ರುಚಿ ಸಿಕ್ಕಿದರೆ ಮತ್ತೆ ಕೊನೆಯ ಪುಟದವರೆಗೆ ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ, ಮಧ್ಯೆ ನಿಲ್ಲಿಸುವುದು ಬಲು ಕಷ್ಟ! ಅನೇಕ ವರ್ಷಗಳ ಕಾಲ ಮಾಹಿತಿ ತಂತ್ರಜ್ಞಾನ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿದರೂ ಅವರು ಬರೆಯುವ ವಿಷಯಗಳು ವೈವಿಧ್ಯಮಯವಾಗಿರುತ್ತದೆ. 

ಕೋಶ ಓದು : ಚಿನ್ನದ ಮೀನು

 - ರವಿಶಂಕರ್ ಶಾಸ್ತ್ರಿ

ಲೇಖಕರು: ರೋಹಿತ್ ಚಕ್ರತೀರ್ಥ

ವಿಜ್ಞಾನಕ್ಕೆ ಸಂಬಂಧಿಸಿದ ಕಠಿಣ ವಿಷಯಗಳನ್ನು ಸಾಮಾನ್ಯ ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಬರೆಯಬಲ್ಲವರು ರೋಹಿತ್ ಚಕ್ರತೀರ್ಥ. ನಾಡಿನ ಹಲವಾರು ದಿನಪತ್ರಿಕೆ-ವಾರಪತ್ರಿಕೆ ಇತ್ಯಾದಿಗಳಲ್ಲಿ ಹಲವಾರು ಲೇಖನಗಳನ್ನು ಬರೆದು ಪ್ರಸಿದ್ಧರಾಗಿದ್ದಾರೆ.

ಕೋಶ ಓದು: ನಿಮ್ಮಷ್ಟು ಸುಖಿ ಯಾರಿಲ್ಲ ನಿಮಗೇಕೆ ಅದು ಗೊತ್ತಿಲ್ಲ?

- "ಶ್ರೀ"ಖಾರ
ಲೇಖಕರು: ವಿಶ್ವೇಶ್ವರ ಭಟ್


ಬಸ್ಸಿನಲ್ಲಿ ಹೋಗುವ ಕೆಲವರು ಅದೇ ರಸ್ತೆಯಲ್ಲಿ ಕಾರಿನಲ್ಲಿ ಹೋಗುವ ಜನರನ್ನು ನೋಡಿ ನಮ್ಮ ಹತ್ತಿರ ಅ ರೀತಿ ಕಾರ್ ಇಲ್ಲವಲ್ಲ ಎಂದು ಯೋಚನೆ ಮಾಡುತ್ತಾರೆ. ಆದರೆ ಅದೇ ರಸ್ತೆಯಲ್ಲಿ ಕಾಲಿಲ್ಲದೆ ಕಷ್ಟ ಪಟ್ಟು ಕುಂಟುತ್ತಾ ಹೋಗುತ್ತಾ ಇರುವ ವ್ಯಕ್ತಿಯನ್ನ ನೋಡಿ ದೇವರೇ ನನ್ನ ಹತ್ತಿರ ಕಾರು ಇಲ್ಲದಿದ್ದರೂ ಪರವಾಗಿಲ್ಲ, ನಡೆದಾಡೋಕೆ ಕಾಲು ಕೊಟ್ಟಿದೆಯಲ್ಲ ಎಂದು ಸಮಾಧಾನ ಮಾಡಿಕೊಳ್ಳುವವರು ತುಂಬಾ ಕಡಿಮೆ.

ಕೋಶ ಓದು: ಅಪ್ಪ ಅಂದ್ರೆ ಆಕಾಶ

- ರವಿಶಂಕರ್ ಶಾಸ್ತ್ರಿ
ಲೇಖಕರು: ಎ. ಆರ್. ಮಣಿಕಾಂತ್

ಸಾದಾ ಸೀದಾ ಜನರ ಬದುಕನ್ನು, ಅವರ ಕಷ್ಟಗಳನ್ನು, ಅವುಗಳನ್ನು ಎದುರಿಸಿದ ಗೆದ್ದ ಬಗೆಯನ್ನು ಮಣಿಕಾಂತ್ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಸಾಮಾನ್ಯರಲ್ಲಿ ಸಾಮಾನ್ಯರ ಒಳಗಿರುವ ಅಗಾಧ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಜಗತ್ತೇ ಮುಗಿದು ಹೋಯಿತು ಇವರ ಬದುಕಿನಲ್ಲಿ ಎಂದುಕೊಂಡವರು ಮತ್ತೆ ಎದ್ದು ಬಂದು ಅಚ್ಚರಿಗಳನ್ನು ಸಾಧಿಸಿದ್ದನ್ನು ವಿವರಿಸಿದ್ದಾರೆ.

ಮಲೆನಾಡಿನ ಚಿತ್ರಗಳು

- ಅಕ್ಷಯರಾಮ ಕಾವಿನಮೂಲೆ
ಪುಸ್ತಕ: ಮಲೆನಾಡಿನ ಚಿತ್ರಗಳು
ಲೇಖಕರು: ಕುವೆಂಪು
ಬೆಲೆ: ರೂ. 90

ಪಟ್ಟಣದ ಜಂಜಾಟದಿಂದ ಬೇಸರವಾದಾಗ ಒಮ್ಮೊಮ್ಮೆ "ಇದನ್ನೆಲ್ಲ ಬಿಟ್ಟು ಹಳ್ಳಿಗೆ ಹೋಗಿಬಿಡುವ" ಎಂದೆನಿಸುತ್ತದೆ. ಬದುಕಿನ ಏಕತಾನತೆಯನ್ನು ಕಳೆಯುವ ಸಾಮರ್ಥ್ಯ ನಮ್ಮ ಹಳ್ಳಿಗಳಿಗಿದೆ. ಸ್ವಚ್ಛ ವಾತಾವರಣ, ಗಡಿಬಿಡಿಯಿಲ್ಲದ ನೆಮ್ಮದಿಯ ಜೀವನ ಇಲ್ಲಿದೆ. ಇಪ್ಪತ್ತೊಂದನೆಯ ಶತಮಾನದಲ್ಲಿಯೇ ಇಷ್ಟು ಆಪ್ಯಾಯಮಾನವೆನಿಸುವ ಹಳ್ಳಿಯ ಬದುಕು ಇಪ್ಪತ್ತನೆಯ ಶತಮಾನದಲ್ಲಿ ಹೇಗಿದ್ದಿರಬಹುದು? ಈ ಪ್ರಶ್ನೆಗೆ ಉತ್ತರ ಸಿಗಬೇಕಾದರೆ 1933ರಲ್ಲಿ ಮೊದಲ ಮುದ್ರಣ ಕಂಡ, ರಾಷ್ಟ್ರಕವಿ ಕುವೆಂಪುರವರ 'ಮಲೆನಾಡಿನ ಚಿತ್ರಗಳು' ಎಂಬ ಪುಟ್ಟ ಪುಸ್ತಕ ಕೈಗೆತ್ತಿಕೊಳ್ಳಬೇಕು.

ನನ್ನ ಪ್ರೀತಿಯ ಹುಡುಗನಿಗೆ

- ರವಿಶಂಕರ್ ಶಾಸ್ತ್ರಿ
ಪುಸ್ತಕ: ನನ್ನ ಪ್ರೀತಿಯ ಹುಡುಗನಿಗೆ
ಲೇಖಕರು: ನಾಗತಿಹಳ್ಳಿ ಚಂದ್ರಶೇಖರ

ನಾಗತಿಹಳ್ಳಿ ಚಂದ್ರಶೇಖರ್ ಅವರ ಈ ಕಥಾ ಸಂಕಲನವು ೮೦ರ ದಶಕದ ಕಥೆಗಳ ಸಂಗ್ರಹವಾಗಿದೆ. ಅವುಗಳಲ್ಲಿನ ಕಥೆಗಳು ತುಷಾರ, ಮಯೂರ, ಸುಧಾ, ತರಂಗ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕೆಲವು ಕಥೆಗಳು ಸಿನಿಮಾಗಳಾಗಿವೆ.

ಮೋಹನ ಸ್ವಾಮಿ


-ಅಕ್ಷಯರಾಮ ಕಾವಿನಮೂಲೆ
ಲೇ: ವಸುಧೇಂದ್ರ
ಬೆಲೆ: ರೂ.180

ವಸುಧೇಂದ್ರ ಅವರ ಕೃತಿಗಳು ಆಲೂಗೆಡ್ಡೆ ಚಿಪ್ಸ್ ಪ್ಯಾಕೆಟ್ ಇದ್ದಂತೆ ! ಒಮ್ಮೆ ತೆರೆದು ಕೈಯಲ್ಲಿ ಹಿಡಿದು ಒಂದು ಮೂಲೆಯಲ್ಲಿ ಕುಳಿತರೆ, ಮುಗಿಯುವ ವರೆಗೆ ಇನ್ಯಾವುದೇ ಐಹಿಕ ವಿಷಯಗಳ ಕಡೆ ಮನಸ್ಸು ಹರಿಯುವುದೇ ಇಲ್ಲ. ಅವರ ಅಕ್ಷರಗಳಿಗೆ ಇರುವ ಅಯಸ್ಕಾಂತೀಯ ಗುಣದ ಬಗ್ಗೆ ಹೆಚ್ಚಿನ ವಿವರಣೆ ಅನಗತ್ಯ.

ದ್ವೀಪ ಸಮೂಹದ ಕಥೆ

-ಅಕ್ಷಯರಾಮ ಕಾವಿನಮೂಲೆ

ಲೇ: ಜಿ.ಎನ್. ಅಶೋಕವರ್ಧನ 
ಬೆಲೆ: 75 ರೂಪಾಯಿಗಳು

ಅಂಡಮಾನ್ ದ್ವೀಪಗಳು ನಿಜಕ್ಕೂ ಅದ್ಭುತವಾದ ಪ್ರಾಕೃತಿಕ ಸೌಂದರ್ಯದ ಖನಿಗಳು. ವರ್ಷಕ್ಕೆ ಅದೆಷ್ಟೋ ಲಕ್ಷ ಮಂದಿ ಪ್ರವಾಸಿಗರು ಅಂಡಮಾನಿನ ಪರಿಸರದ ಸವಿಯುಂಡು ಬರುತ್ತಾರೆ ಆದರೆ ಆ ರಮ್ಯಾದ್ಭುತ ಅನುಭವವನ್ನು ಅಕ್ಷರಕ್ಕಿಳಿಸುವ ಸತ್ಕಾರ್ಯ ಮಾಡಿದವರು ಬಹಳ ವಿರಳ ! ತೇಜಸ್ವಿಯವರ 'ಅಲೆಮಾರಿಯ ಅಂಡಮಾನ್' ಓದಿ, ಈ ದ್ವೀಪರಾಶಿಯ ಬಗ್ಗೆ ಆಸಕ್ತರಾಗದವರಿಲ್ಲ.