Showing posts with label ಚಿದಂಬರ. Show all posts
Showing posts with label ಚಿದಂಬರ. Show all posts

ಕ್ಯಾಮರಾ ಕಲಿಸಿದ ಪಾಠ

- ಚಿದಂಬರ

ಕಲಿಯಲೇಬೇಕೆನಿಸಿದರೆ, ಯಾವುದೇ ವಿದ್ಯೆ ‘ಬ್ರಹ್ಮ ವಿದ್ಯೆ’ಲ್ಲವೆಂದು ನನಗೆ 90ರ ದಶಕದಲ್ಲಿಯೇ ಅನ್ನಿಸುತ್ತಿತ್ತು. ಹಾಗೆ ನೋಡಿದರೆ ಯಾವುದೇ ವಿದ್ಯೆ ಕಲಿಯಬೇಕಾದರೆ, ಅತ್ಯಂತ ಅವಶ್ಯಕವಾಗಿ ಬೇಕಾಗಿರುವುದು ‘ಸಾಧನ’ವಲ್ಲ, ಸಾಧಿಸಬೇಕೆಂಬ ‘ತೀವ್ರವಾದ ಇಚ್ಛಾಶಕ್ತಿ’ ಹಾಗೂ ಪ್ರಖರ ಪ್ರಯತ್ನ ಎಂಬುದು ನನ್ನ ಬಲವಾದ ಅನಿಸಿಕೆ.

ಎಲ್ರೂ ಇಲ್ಲಿ ಸೈಕಲ್ ತುಳೀಲೇಬೇಕ್

- ಚಿದಂಬರ

ಮಾಸ್ತರ್ ಕೈಯ್ಯಾಗ್ ಚಾಕ್‍ಪೀಸ್ ಆಡ್ತಿರ್‍ಬೇಕ್
ಪೋಲೀಸ್ ಕೈಯ್ಯಾಗ್ ಲಾಠಿ ಆಡ್ತಿರ್‍ಬೇಕ್
ಜವಾನನ್ ಕೈಯ್ಯಾಗ್ ಫೈಲ್ ಆಡ್ತಿರ್‍ಬೇಕ್
ಇದು ಜೀವನಾ ಐತಿ ತಮ್ಮಾ.... ಎಲ್ರೂ ಇಲ್ಲಿ ಸೈಕಲ್ ತುಳೀಲೇಬೇಕ್.

ಸರ್ಕಾರದ ಕೆಲಸ, ದೇವರ ಕೆಲಸ


- ಚಿದಂಬರ

ಮನಸ್ಸು ಮತ್ತೊಮ್ಮೆ ಕಸಿವಿಸಿಗೊಳ್ಳುತ್ತಿದೆ! ದಿಟ್ಟವಾಗಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಕಾಲವೇ ಇಲ್ಲವೇನೋ ಎಂದೆನಿಸುತ್ತಿದೆ!! ದುಷ್ಟ ರಾಜಕೀಯ ವ್ಯವಸ್ಥೆ ಹದಗೆಡುತ್ತಲೇ ಹೋಗುತ್ತಿದೆಯೇನೋ....!
ಪ್ರಜಾಪ್ರಭುತ್ವದಲ್ಲಿ ಜನರಿಂದಲೇ ಚುನಾಯಿತರಾದ, ಚುನಾವಣೆ ಸಮಯದಲ್ಲಿ ಎಲ್ಲರ ಕೈ ಕಾಲು ಹಿಡಿದು ಗದ್ದುಗೆ ಏರುವ ರಾಜಕಾರಣಿಗಳು, ವಿಧಾನ ಸೌಧದ ಮೆಟ್ಟಿಲೇರಿ, ಕೆಂಪುಗೂಟದ ಕಾರಿನಲ್ಲಿ ಕುಳಿತ ಕೂಡಲೇ ಅಧಿಕಾರದ ಅಮಲು ಏರಿ ಸರ್ವಾಧಿಕಾರೀ ಮನೋಭಾವ ತಳೆಯುವುದು ಇತ್ತೀಚೆಗೆ ಅತ್ಯಂತ ಸಾಮಾನ್ಯವಾಗಿಬಿಟ್ಟಿದೆ !

ಸುಖ, ಸಂತೋಷ, ಖುಷಿ ಇತ್ಯಾದಿ

- ಚಿದಂಬರ

ಮೇಲ್ನೋಟಕ್ಕೆ ಸುಖ, ಸಂತೋಷ, ಖುಷಿ, ಆನಂದ, ಅತ್ಯಾನಂದ, ನಿತ್ಯಾನಂದ, ಪರಮಾನಂದ, ಪರಮಸುಖ ಎಲ್ಲವೂ ಒಂದೇ ಅರ್ಥ ಬರುವಂತೆ ಗೋಚರಿಸಿದರೂ ಅವುಗಳ ಮೂಲಾರ್ಥ ವಿಭಿನ್ನ. ಕೆಲವು ಇಂದ್ರಿಯಗಳಿಗೆ ಸೀಮಿತವಾದರೆ ಇನ್ನು ಕೆಲವು ಇಂದ್ರಿಯಾತೀತ ! ಕೆಲವು ಜಟೆ, ಕಾವಿ, ಭಂಗಿ, ಸುರೆ ಇತ್ಯಾದಿಗಳಿಂದ ಆಮದಾಗಿರುವ ಅಮಲುಗಳಾದರೆ. ಇನ್ನೂ ಕೆಲವು ಭಾವನೆ, ಎಮೋಷನ್ಸ್ ಗಳಿಗೆ ಸೀಮಿತ ! ಕೆಲವು ಧ್ಯಾನಿಗಳಿಗೆ, ಮೌನಿಗಳಿಗೆ, ಸಾಧು ಸಂತರ ವ್ಯಾಪ್ತಿ ಪ್ರದೇಶದಲ್ಲಿದ್ದರೆ ಇನ್ನೂ ಕೆಲವು ಪ್ರೀತಿ, ಪ್ರೇಮ, ಪ್ರಣಯ, ಕಾಮಗಳ ಚಕ್ರದಲ್ಲಡಗಿರುವಂಥವು. ಸನ್ಯಾಸಿ ಮೂಲ, ಸ್ತ್ರೀಮೂಲ, ನದಿಮೂಲ ಬಹಳ ಕೆದಕುವುದು ಹೇಗೆ ಒಳ್ಳೆಯದಲ್ಲವೋ, ಹಾಗೆಯೇ ಸುಖದ ವಿವಿಧ ವ್ಯಾಖ್ಯಾನಗಳ ಗೊಡವೆಗೆ ಹೋಗದೇ ಇರುವುದೇ ಒಂದು ರೀತಿ ‘ಸುಖ’ ಎಂದೆನಿಸುತ್ತದೆ.

ಚಿರತೆ

- ಚಿದಂಬರ

ಇತ್ತೀಚೆಗೆ ಸುತ್ತ ಎಂಟು ದಿಕ್ಕುಗಳಿಗೂ ಬೆಟ್ಟ-ಗುಡ್ಡಗಳೇ ಚಾಚಿಕೊಂಡಿರುವ ನನ್ನ ಸಂಡೂರು ಪಟ್ಟಣದಲ್ಲಿ ಚಿರತೆಗಳ ಹಾವಳಿ ಸ್ವಲ್ಪ ಹೆಚ್ಚೇ ಆಗಿದೆ.  ದಶಕಗಳ ಹಿಂದೆ ಸಹ್ಯಾದ್ರಿ ಪರ್ವತಗಳನ್ನೇ ನಾಚಿಸುವಂತಹ ಬೆಟ್ಟ-ಗುಡ್ಡಗಳಲ್ಲಿನ ವನರಾಶಿಗಳಲ್ಲಿ ಗಣಿಗಾರಿಕೆಯೆಂಬ ಪೆಡಂಭೂತದ ಕಬಂದ ಬಾಹುಗಳಲ್ಲಿ ವನ್ಯ ಜೀವಿಗಳು ಅಕ್ಷರಶಃ ನಲುಗಿ ಹೋಗಿದ್ದವು.

ಮುಂದ್ಹೇಗೆ??

- ಚಿದಂಬರ
ಸಿಂಹದ ಮರಿ ಸಿಂಹ, ಹುಲಿಯ ಮರಿ ಹುಲಿ
ಕಾಗೆಗಳ ಮರಿ ಕಾಗೆ, ಜಿಂಕೆಗಳ ಮರಿ ಜಿಂಕೆ,
ಲೆಕ್ಕಾಚಾರದಲಿ ಒಂದಿನಿತೂ ತಪ್ಪಿಲ್ಲ ನಿಸರ್ಗದಲಿ,

ಕಾಂಕ್ರೀಟು ಕಾಡಿನಲಿ ನೆಮ್ಮದಿಯ ಚಿಟ್ಟೆಯ ಬೆನ್ನತ್ತಿ..

- ಚಿದಂಬರ
ತಿಳಿದೂ ತಿಳಿಯದಂತೆ ಓಡುತಿದೆ ಮನವು ಹಣದ ಹಿಂದೆ,
ಹಣದ ಗಳಿಕೆಯೊಂದೇ ಜೀವನದ ಪರಮೋಚ್ಛ ಗುರಿ !
ಅದ್ಸರಿ, ಹಣದಿಂದ ಕೊಳ್ಳುವುದಾದರೂ ಏನನ್ನು?
ಹಾಸಿಗೆಯನ್ನಷ್ಟೇ ನಿದ್ರೆಯನ್ನಲ್ಲವಲ್ಲ !

ಶ್ರೀಮಂತ ಡಾ|| ಎಂ.ವೈ.ಘೋರ್ಪಡೆ - ಒಂದು ವ್ಯಕ್ತಿ ಚಿತ್ರ

- ಚಿದಂಬರ

 ಸ್ಕಂದಪುರ ವೆಂಬ ಅನ್ವರ್ಥಕ ನಾಮದಿಂದ, “ಸಂಡೂರು” ಎಂಬ ರೂಢಿನಾಮದಿಂದ ಕರೆಯಲ್ಪಡುತ್ತಿರುವ ನನ್ನ ಜನ್ಮಭೂಮಿ, ಕರ್ಮಭೂಮಿಯಾಗಿರುವ ಪಟ್ಟಣವನ್ನು ‘ಬಳ್ಳಾರಿಯ ಓಯಸಿಸ್’, ‘ಬಳ್ಳಾರಿಯ ಕಾಶ್ಮೀರ’ ಎಂತಲೇ ಕರೆಯುತ್ತಾರೆ. ಇದರ ಇತಿಹಾಸವನ್ನು ಕೆದಕುತ್ತಾ ಹೋದಲ್ಲಿ, ಈ ಸಂಸ್ಥಾನವನ್ನು ಬ್ರಿಟೀಷರ ಅಧೀನದಲ್ಲಿ ಮರಾಠ ವಂಶಸ್ಥರಾದ “ಘೋರ್ಪಡೆ” ರಾಜ ಮನೆತನಕ್ಕೆ ಸೇರಿದ ಶ್ರೀಮಂತ ಸಿದ್ಧೋಜಿ ಘೋರ್ಪಡೆ ಕ್ರಿ.ಶ.1713 ರಲ್ಲಿ ಆಳ್ವಿಕೆ ಪ್ರಾರಂಭಿಸಿದರು ಎಂಬುದು ಕಂಡು ಬರುತ್ತದೆ.