- ಮೌನ
ಕೊನೆಗೊಮ್ಮೆ ನಾನು ನನ್ನ ನಾಜೂಕಿನ
ಅಂತರಂಗದ ಸುತ್ತ ತಡೆಗೋಡೆಯೊಂದನು ಕಟ್ಟುವೆ
ಮರೆತಿಲ್ಲ ಒಡೆದು ಚೂರಾದ ಗಳಿಗೆಯನು
ಆದರೂ ರಕ್ಷಿಸುವೆ ಇನ್ನೂ ಸರಿಯಿರುವ
ಅವಶೇಷಗಳನು
ಒಂದು ಕಲ್ಲ ಮೇಲೆ ಇನ್ನೊಂದನು
ಗಾಯಗಳ ಜೊತೆ ಕಲಿತ ಪಾಠವನು
ನೆನಹುತಾ ಪೇರಿಸುವೆನು
ಗೋಡೆಯಲ್ಲಿನ ಪ್ರತಿ ಬಿರುಕುಗಳು
ಹೇಳುತ್ತ ಉಳಿಯಲಿವೆ ಕಥೆಯನು
ಮುಂದೊಂದು ದಿನ, ಅಸೀಮ ಕರವೊಂದು
ಮೃದುವಾಗಿ ತಟ್ಟಿದರೆ ಆರ್ದ್ರತೆಯಲಿ
ಗೋಡೆಯು ನಿಧಾನವಾಗಿ ಉರುಳಿ
ಮನದ ಬಾಗಿಲು ಮತ್ತೊಮ್ಮೆ
ತೆರೆಯಬಹುದು, ಘಾಸಿಯಾಗುವ
ಭಯವಿಲ್ಲದೆ
No comments:
Post a Comment