- ಮಂಜುನಾಥ್ ಪಿ.
ಏನೋ ಇದೆ ನಮ್ಮಗಳ ನಡುವೆ
ಜಗದಗಲಕೂ ನೀ ಹುಡುಕುತಲಿರುವೆ
ಮಾಡಿದ ತಪ್ಪಿಗೆ ಮಾತು ಬಿಟ್ಟಿರುವೆ
ನೋವಿನಲ್ಲಿ ಸುಮ್ಮನೆ ನರಳುವೆ
ಇವೆಲ್ಲ ಆದದ್ದು ಒಂದೇ ಕಾರಣಕಲ್ಲವೇ
ಅವರಿವರ ಮಾತು ಏಕೆ ಕೇಳುವೆ?
ಅಂಧಕಾರದೊಳಗೇಕೆ ಮುಳುಗಿದೆ
ಮನಸ್ಸಾಕ್ಷಿಯ ಮಾತು ಕೇಳದೆ?
ಸ್ನೇಹ ಪ್ರೀತಿಗಳಷ್ಟೇ ಉಳಿಯಲಿ
ಮೂರು ದಿನದ ಬಾಳಿನಲಿ
No comments:
Post a Comment