ಮನವೆಂಬ ತೂಗುಯ್ಯಾಲೆ

- ಮೌನ
ದೀರ್ಘ ಪಯಣದ ಛಲಕ್ ಒಂದು 
ಮನದ ಪರದೆಯಲ್ಲಿ ಸುಳಿದಾಗ 
 ಅಂತ್ಯ ಬಿಂದುವೋ, ಅಲ್ಪ ವಿರಾಮವೋ 
ಮನಸ್ಸಿಗೆ ಕಸಿವಿಸಿ, ಮಿಶ್ರಭಾವ 
ನೆನ್ನೆಯ ಬಿಗಿಬಂಧವೊಂದು
ಹೊರಗೊಳಗಿನ ಸೆಳೆತಕ್ಕೆ ಸಿಕ್ಕು ಅಳ್ಳಕವಾಗಿರಲು 
ಪ್ರಸ್ತುತ ಬಂಧ ಇದ್ದ ಹಾಗೇ ಸ್ವೀಕರಿಸುವ 
ನಲವತ್ತರ ಆಸುಪಾಸಿನ ಪ್ರಬುದ್ಧತೆ??
ಎಳೆಮೊಗದ ತರಳೆಯ ಹಾಗೆ 
ಅನುಬಂಧ ಬಯಸುವ ಮುಗ್ಧತೆ!!??

ಇವೆಲ್ಲ ಲೋಕದ ರೀತಿಯ ಮೀರುವ 
ಏಕಾಂತದ ಗೂಡಲ್ಲಿ 
ತನ್ನನ್ನೇ ನೆಚ್ಚಿಕೊಂಡು 
ಸ್ವಗತವನ್ನು ಮೆಚ್ಚಿಕೊಂಡು 
ಕಳೆದು ಹೋಗುವ ತನ್ಮಯತೆ??
ಸರಿ ತಪ್ಪುಗಳ ತಮ್ಮ ಮನಬಂದಂತೆ 
ಏಕಮುಖವಾಗಿ ತೂಗುವ ಸಂಬಂಧದ 
ತೂಗುಯ್ಯಾಲೆಯಲ್ಲಿ ಆಡುವ 
ದೊಂಬರಾಟದ ಚಿಂತೆ
ಇನ್ನೂ ಬೇಕೇ?

No comments:

Post a Comment