Showing posts with label ವಂದನಾ ಎನ್. Show all posts
Showing posts with label ವಂದನಾ ಎನ್. Show all posts

ಅಭಿಪ್ರಾಯಗಳ ಬಗ್ಗೆ ನನ್ನ ಅಭಿಪ್ರಾಯ

 - ವಂದನಾ ಎನ್


ಹೀಗೊಂದು ದಿನ ನನ್ನ ಗೆಳೆಯನ ಜೊತೆ ಮಾತುಕತೆ ನಡೆಯುತ್ತಿತ್ತು. ಸರಳ ವಿಷಯದಿಂದ ಶುರುವಾದ ಮಾತು ನಿಧಾನವಾಗಿ ಗಂಭೀರ ಚರ್ಚೆಯಾಗಿಬಿಟ್ಟಿತು. ನಾನು ಅವನ ಮಾತುಗಳನ್ನು ವೈಯಕ್ತಿಕವಾಗಿ ತೆಗೆದುಕೊಂಡು ಪ್ರತಿಕ್ರಿಯೆ ನೀಡಲು ಮುಂದಾದಾಗ, ಅವನು ತುಂಬಾ ಶಾಂತವಾಗಿ, “ಡಿಫೆನ್ಸಿವ್ ಆಗ್ಬೇಡ, ನಾನು ನನ್ನ ಅಭಿಪ್ರಾಯ ಹೇಳ್ತಿದ್ದೀನಿ ಅಷ್ಟೇ” ಎಂದ. ಆ ಕ್ಷಣದಲ್ಲಿ, ನಡೆಯುತ್ತಿದ್ದ ಚರ್ಚೆಗಿಂತ ಆ ಒಂದು ಸಾಲು ನನ್ನ ಮನಸ್ಸನ್ನು ಆವರಿಸಿಕೊಂಡಿತು. 

ಹಾಲು ಜೇನು: ನೈತಿಕ ಚೌಕಟ್ಟಿನೊಳಗಿನ ನೋಟ

- ವಂದನಾ ಎನ್

ವರ ನಟ ರಾಜ್ ಕುಮಾರ್ ರವರ ಹಾಲು ಜೇನು ಚಿತ್ರವೆಂದರೆ ನಮಗೆಲ್ಲಾ ಸಾಮಾನ್ಯವಾಗಿ ನೆನಪಾಗುವುದು ಮಧುರ ಗೀತೆಗಳು, ಮೃದು ಪ್ರೇಮ ಮತ್ತು ಮನಮುಟ್ಟುವ ದೃಶ್ಯಗಳ ಮೂಲಕ ಹೇಳಲಾದ ಒಂದು ಪ್ರೇಮಕಥೆ. ಆದರೆ ಪತಿ ಪತ್ನಿಯರ ನವಿರಾದ ಪ್ರೇಮಕತೆಯೊಳಗೆ ನನಗೆ ಕಾಡಿದ್ದು ನೈತಿಕ ಗೊಂದಲ. ಅದು ಚಿತ್ರ ಮುಗಿದ ಮೇಲೂ ನನ್ನ ಮನಸ್ಸಿನಲ್ಲಿ ಉಳಿದುಕೊಂಡಿತು.