- ರವಿಶಂಕರ್ ಶಾಸ್ತ್ರಿ
ಕಣ್ಣೀರು ಹನಿಹನಿಯಾಗಿ
ಕೆನ್ನೆಮೇಲೆ ಜಾರಿರಲು
ನೆಲವತಾಕುವ ಮೊದಲೇ
ಯಾವುದೋ ಗುಂಗಿನಲಿ
ದಿನವೂ ಜಾರುತಲಿರಲು
ಕಚಗುಳಿಯಿಟ್ಟು ನಗಿಸಿ
ಮನಸು ಹಗುರಾಗಿರುವಾಸೆ.
ಕಂಡೂ ಕಾಣದ ಹಾಗೆ ದುಃಖ
ಮನದೊಳಗೆ ಅವಿತಿರಲು
ನಿನ್ನಜೊತೆ ನಾನಿರುವೆನೆಂದು
ಅಭಯ ನೀಡುವಾಸೆ.
ಎಲ್ಲ ಕಷ್ಟ-ಸುಖ ಘಳಿಗೆಗಳ
ಜೊತೆಗೂಡಿ ಎದುರಿಸುವ,
ಹೆಗಲಿಗೆ ಹೆಗಲಾಗಿದ್ದು, ಕನಸು
ನನಸಾಗಿಸುವಾಸೆ.
No comments:
Post a Comment