ಬಹುರೂಪಿ

- ಮೋಹನ್ ಮೂರ್ತಿ ಮಾ ಕೆಂ

ನನ್ನೊಂದು ವರ್ಷದ ಮಗಳು
ಪಕ್ಕಾ ಸಮಾಜವಾದಿ.
ಸರ್ವರಿಗೂ ಸಮಪಾಲು, ಸಮಬಾಳೆಂಬ

ತತ್ವದಲ್ಲವಳಿಗೆ ಅಪಾರ ನಂಬಿಕೆ
ಅಪ್ಪ ಅಮ್ಮ, ಅತ್ತೆ ಮಾವ, ತಾತ ಅಜ್ಜಿ
ಭೇದ ಭಾವದ ಪ್ರಶ್ನೆಯೇ ಇಲ್ಲ
ಯಾರೇ ಎತ್ತಿಕೊಳ್ಳಲಿ
ನಿಮಿಷ ಮಾತ್ರದಲ್ಲಿ
ಅವರ ಬಟ್ಟೆ ಒದ್ದೆ !

ಅವಳು ಪ್ರಳಯಾಗ್ನಿ
ಗಮನಿಸದಿದ್ದಲ್ಲಿ
ಕಡ್ಡಿ ಕಾಳು, ಬಟ್ಟೆ ಕಾಗದ
ಸರ್ವವೂ ಕ್ಷಣಾರ್ಧದಲ್ಲಿ
ಸ್ವಾಹಾ!

ಅವಳು ಕಠೋರ ಸನ್ಯಾಸಿನಿ
ಇಹಲೋಕದ ಹತ್ತು, ನೂರು, ಐನೂರು
ಎಲ್ಲದರ ಮೇಲೂ ವೈರಾಗ್ಯ
ಕಡೆಗೆ ಎರಡು ಸಾವಿರದ
ಪಿಂಕಿ ಸಿಕ್ಕರೂ ಅರೆ ಕ್ಷಣದಲ್ಲಿ ಚಿಂದಿ !

3 comments: