ಯಕ್ಷ ಪ್ರಶ್ನೆ

- ಮೋಹನ್ ಮೂರ್ತಿ ಮಾ ಕೆಂ
ಎಷ್ಟು ಪ್ರಯತ್ನಿಸಿದರೂ
ಫೇಸ್ ಬುಕ್ ನಲ್ಲಿ ನಿನ್ನ
ಪ್ರೊಫೈಲ್ ನೋಡದಿರಲು
ಸಾಧ್ಯವಾಗುವುದೇ ಇಲ್ಲ!


ಸಮಸ್ಯೆಯೆಂದರೆ,
ಪ್ರತೀ ಬಾರಿ ಫೇಸ್ ಬುಕ್ ನಲ್ಲಿ
ನಿನ್ನ ಫೋಟೋ ನೋಡುವಾಗ
ಹಳೆಯದೆಲ್ಲಾ ನೆನಪಾಗಿ
ಬದುಕಿನ ದೊಡ್ಡ  ಸೋಲೊಂದನ್ನು
ಪುನ: ಅನುಭವಿಸಿದಂತಾಗಿ
ಮನಸ್ಸೆಲ್ಲಾ ಖಿನ್ನವಾಗಿ....
ಥತ್,
ಇದೇನು ಎಂದೂ ಮುಗಿಯದ ಕಥೆಯೇ?
ಪರಿಹಾರವಿಲ್ಲದ ಸಮಸ್ಯೆಯೇ?

No comments:

Post a Comment