ಮಳೆಯೇ ಬಾ

- ರವಿಶಂಕರ್ ಶಾಸ್ತ್ರಿ
ಎಲ್ಲಿ ಹೋದಿರಿ ಕಪ್ಪು ಮೋಡಗಳೇ,
ನಮ್ಮ ಕಡೆಗೂ ತೇಲಿ ಬನ್ನಿ.
ಬೆಂಕಿಯ ಹಾಗೆ ಭೂಮಿ ಸುಡುತಲಿದೆ,
ನಮ್ಮ ಊರಿಗೂ ಮಳೆಯ ತನ್ನಿ.

ಮೈಯನು ಸುಡುವ ಕಡು ಬಿಸಿಲಿಲ್ಲಿದೆ
ಎಲ್ಲಿಯೂ ಕುಡಿಯಲು ನೀರಿಲ್ಲ.
ಜೀವಸೆಲೆಯ ಹುಡುಕುತ ಮೈಲಿ
ಅಲೆಯುವ ಪಾಡು ತಪ್ಪಿಲ್ಲ.

ಪಶು-ಪಕ್ಷಿಗಳು ಬಳಲಿ ಬೆಂಡಾಗಿವೆಯಲ್ಲ
ಗಿಡಮರ ಬಾಡಿ ಸೊರಗಿವೆಯೆಲ್ಲ.
ಜೀವವ ಹಿಡಿದು ಕುಳಿತಿವೆಯೆಲ್ಲ
ಹನಿಮಳೆಗಾಗಿ ಕಾದಿಹರೆಲ್ಲ.

ಭೀಕರ ಬರವಿದು ನಾಡಿಗೆ ಕಾಡಿದೆ,
ವರುಣ ದೇವನೇ ಮಳೆ ಸುರಿಸು.
ಮಾನವ ತಪ್ಪು ಮಾಡುತಲಿರುವ,
ಆದರೂ ಕ್ಷಮಿಸಿ, ಕೃಪೆ ತೋರಿಸು.

2 comments: