ನೋವು

- ರವಿಶಂಕರ್ ಶಾಸ್ತ್ರಿ
ಒದ್ದೆಯಾದ ಕಣ್ಣಿಂದ
ಅವಳ ಇಣುಕಿ ನೋಡಿದೆ
ಹೊಂಚು ಹಾಕಿ ಕುಳಿತ ಮನವು
ಮುದ್ದೆಯಾಗಿ ಹೋಗಿದೆ.

ಕಣ್ಣಿನಿಂದ ನೀರು ಜಾರಿ
ಕೆನ್ನೆ ಮೇಲೆ ಹರಿದಿದೆ
ಮನದ ದುಖ ಕಟ್ಟೆಯೊಡೆದು
ಮನವು ತುಂಬಿ ಬಂದಿದೆ.

ಒಳಗೆ ಉಳಿದ ನೋವು ಈಗ
ಹೀಗೆ ಹೊರಗೆ ಬಂದಿದೆ.
ದುಗುಡವೆಲ್ಲ ನೀಗಿ ಹೋಗಿ
ಮನವು ಹಗುರವಾಗಿದೆ.

ಮರೆಯಲಾಗದ ನೋವು 
ಒಳಗೆ ನಿಂದು ನೊಂದಿದೆ.
ಹೊರಗೆ ಬರುವ ದಾರಿ ಕಂಡು
ಬಿಡುಗಡೆಯ ಹೊಂದಿದೆ.

No comments:

Post a Comment