ಯಕ್ಷ ಪ್ರಶ್ನೆ

- ಮೋಹನ್ ಮೂರ್ತಿ ಮಾ ಕೆಂ
ಎಷ್ಟು ಪ್ರಯತ್ನಿಸಿದರೂ
ಫೇಸ್ ಬುಕ್ ನಲ್ಲಿ ನಿನ್ನ
ಪ್ರೊಫೈಲ್ ನೋಡದಿರಲು
ಸಾಧ್ಯವಾಗುವುದೇ ಇಲ್ಲ!

ಕಣ್ಣೀರು

- ರವಿಶಂಕರ್ ಶಾಸ್ತ್ರಿ
ಜಗತ್ತನ್ನು ಸೆಳೆಯಲು
ಸುಂದರ ಕಣ್ಣಿರಬೇಕು.

ಅರಿವಿನ ಕಣ್ಣು ತೆರೆಸಿದ ಸ್ಕೇಟ್ ಬೋರ್ಡ್ - ಭಾಗ ೨

ಇಂಗ್ಲೀಷ್ ಮೂಲ – ಮೇರಿಯಂ ಗಾರಿಬನ್
ಕನ್ನಡಕ್ಕೆ – ಮೋಹನ್ ಮೂರ್ತಿ ಮಾ. ಕೆಂ.



ಬಿದ್ದ ಮೇಲೆ ಎಲ್ಲರೂ ನನ್ನನ್ನೇ ನೋಡುತ್ತಿರುತ್ತಾರೆ ಎಂಬ ಯೋಚನೆಯಿಂದ ವಿಪರೀತ ಮುಜುಗರವೆನಿಸಿತು. ಹ್ಹೆ ಹ್ಹೆ ಎಂದು ನಗುತ್ತಾ ನಿಧಾನವಾಗಿ ಮೇಲೆದ್ದೆ. ಮಳ್ಳಿಯಂತೆ ಮೆಲ್ಲನೆ ಸುತ್ತಲೂ ನೋಡುತ್ತೇನೆ.

ಕೋಶ ಓದು : ಜಾಗೋ ಭಾರತ್

ರವಿಶಂಕರ್ ಶಾಸ್ತ್ರಿ

ಲೇಖಕರು: ಚಕ್ರವರ್ತಿ ಸೂಲಿಬೆಲೆ

ಲೇಖಕರು ತಮ್ಮ ಪ್ರಖರ ಮಾತಿನಿಂದ ಪ್ರಸಿದ್ಧರು. ದೇಶದ ಬಗ್ಗೆ ಪ್ರೀತಿ, ಅಭಿಮಾನ ಮೂಡಿಸುವ ಕೆಲಸದಲ್ಲಿ ಸದಾ ತಲ್ಲೀನರು. ದೇಶ ಕಂಡ ವಿವಿಧ ಕ್ರಾಂತಿಕಾರಿ, ದೇಶಭಕ್ತರನ್ನು ನಮಗೆ ಪರಿಚಯಿಸುವ ಕಾರ್ಯದಲ್ಲಿ ಸಿದ್ಧಹಸ್ತರು. ಇತಿಹಾಸದಲ್ಲಿ ಸರಿಯಾಗಿ ದಾಖಲಾಗದ, ನಾವು ಮರೆತು ಹೋದ ಹಲವು ಜನರನ್ನು ಮತ್ತೆ ನಮಗೆ ಪರಿಚಯಿಸುವ ಅವರ ಕಾರ್ಯ ಸ್ಮರಣೀಯ.

ಅವಳ ಧ್ಯಾನ

- ರವಿಶಂಕರ್ ಶಾಸ್ತ್ರಿ

ಎಲ್ಲಿ ಹೋದರು 
ಅವಳದೇ ಧ್ಯಾನ.

ದೇಶ ಸುತ್ತು: ಉತ್ತರ ಭಾರತ ಪ್ರವಾಸ - ಭಾಗ ೫

- ಅಕ್ಷಯರಾಮ ಕಾವಿನಮೂಲೆ


ಕುಫ್ರಿಯ ತುದಿಯಲ್ಲಿ
ಕುಫ್ರಿಯ ತುದಿ ತಲುಪಿದಾಗ ಅದಾಗಲೇ ಸೂರ್ಯಾಸ್ತವಾಗಿತ್ತು. ಹಿಮಾಚಲದ ಗಿರಿಶೃಂಗಗಳು ಓಕುಳಿಯಾಡಿ ಕೆಂಪೇರಿದ್ದವು. ಅಲ್ಲೊಂದು ಪುಟ್ಟ ದೇವಸ್ಥಾನ. ಸುತ್ತಮುತ್ತಲಿನ ಅಂಗಡಿಗಳು ಅದಾಗಲೇ ಮುಚ್ಚತೊಡಗಿದ್ದವು. ವಿರಳವಾಗಿದ್ದ ಜನಸಂದಣಿಯಿಂದಾಗಿ ತುಸು ಹೊತ್ತು ಪ್ರಶಾಂತವಾಗಿ ಸೂರ್ಯಾಸ್ತದ ಚೆಲುವನ್ನು ಅಸ್ವಾದಿಸಲು ಸಾಧ್ಯವಾಯಿತು. ಮಂಜಿನ ಸಿಂಚನದ ಜೊತೆ ಜೋರಾಗಿ ಬೀಸುತ್ತಿದ್ದ ಕುಳಿರ್ಗಾಳಿ ನಮ್ಮನ್ನು ಹೆಚ್ಚು ಹೊತ್ತು ಅಲ್ಲಿರಲು ಬಿಡಲಿಲ್ಲ. ನಡುಗುತ್ತಾ ಕುದುರೆಯೇರಿ ಮುಖ್ಯ ರಸ್ತೆಯತ್ತ ಹೊರಟೆವು.

ಕೋಶ ಓದು: ಇಲ್ಲಿಯವರೆಗಿನ ನೇಮಿಚಂದ್ರರ ಕತೆಗಳು

-  ರವಿಶಂಕರ್ ಶಾಸ್ತ್ರಿ

ಲೇಖಕಿ: ನೇಮಿಚಂದ್ರ 

ನೇಮಿಚಂದ್ರ ವೃತ್ತಿಯಿಂದ ಇಂಜಿನಿಯರ್ ಆದ ಲೇಖಕಿ, ಎಚ್.ಎ.ಎಲ್ ನಲ್ಲಿ ಹಿರಿಯ ಹುದ್ದೆಯಲ್ಲಿದ್ದಾರೆ. ಈ ಪುಸ್ತಕದಲ್ಲಿ ಒಟ್ಟು 26 ಕತೆಗಳಿವೆ. ತಮ್ಮ ಕೆಲಸದ ನಿಮಿತ್ತ ದೇಶ, ವಿದೇಶಗಳ ವಿವಿಧ ಭಾಗಗಳಿಗೆ ಪ್ರಯಾಣಿಸುವ ಅವರು, ಅಲ್ಲಿಯ ಜನ ಜೀವನ, ಸಂಸ್ಕೃತಿ ಹಾಗೂ ಜೀವನ ಶೈಲಿಗಳನ್ನು ಕತೆಗಳ ಮೂಲಕ ಪರಿಚಯಿಸುತ್ತಾರೆ.