-ಅಕ್ಷಯರಾಮ ಕಾವಿನಮೂಲೆ
ಅದೊಂದು ದಿನ, ಯಾವುದೋ ಕೆಟ್ಟ ಘಳಿಗೆಯಲ್ಲಿ ಸುರೇಶನ ತಂದೆ ತಾಯಿ ರೌದ್ರಾವತಾರ ತಾಳಿದರು. "ಯಾಕಾದರೂ ನಿನ್ನನ್ನು ಹೆತ್ತೆವೋ?" ಎಂಬ ನೊಂದ ಮಾತು ಸುರೇಶನ ಎದೆಗೆ ನಾಟಿತು. ಸದ್ದಿಲ್ಲದೆ ತೋಟದ ಮೂಲೆಯ ಕೆರೆಯ ಕಡೆ ನಡೆದ. ಕೊನೆಯ ಬಾರಿಗೆ ಎಂಬಂತೆ ಸುತ್ತಲೂ ನೋಡಿದ ಸುರೇಶನಿಗೆ ಬೇಲಿಬದಿಯ ಕಾಸರಕನ ಮರದಲ್ಲಿ ಕಟ್ಟಿದ್ದ ಜೇನಿನ ಗೂಡು ಕಾಣಿಸಿತು. ಪದೇ ಪದೇ ದಿಟ್ಟಿಸಿ ನೋಡಿದ. 'ಕಹಿ ಮರದಲ್ಲಿ ಸಿಹಿ ಜೇನು' ಮಿಂಚೊಂದು ಸುರೇಶನ ಚಿತ್ತದಲ್ಲಿ ಹರಿಯಿತು.
ಇಂದು ಸುರೇಶ ಓರ್ವ ಪ್ರಗತಿಪರ ಜೇನು ಕೃಷಿಕ. ಹತ್ತಾರು ಜೇನು ಕುಟುಂಬಗಳನ್ನು ಸಾಕಿದ್ದಾನೆ. ಅವುಗಳ ಲಾಲನೆ ಪಾಲನೆಯೇ ಅವನಿಗೆ ಸರ್ವಸ್ವ. ಕೈ ತುಂಬಾ ಹಣ, ಮನಸ್ಸಿಗೆ ತೃಪ್ತಿ, ಸಮಾಧಾನ. ಸಂತೃಪ್ತನಿಗೆ ಇನ್ನೇನು ಬೇಕು?
"ಮನಸ್ಸಿದ್ದರೆ ಮಾರ್ಗ"- ಸಾರ್ವಕಾಲಿಕ ಸತ್ಯ. ಇಲ್ಲವಾದರೆ ನಾವೆಲ್ಲ ಮತ್ತೆ ಇಲ್ಲಿ ಬರೆಯುತ್ತಲಿರಲಿಲ್ಲ.
ReplyDelete