-ಶ್ರೀ"ಖಾರ"
ಘಟನೆ ೧ - ನಾವು ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುತ್ತೇವೆ. ದಾರಿಯಲ್ಲಿ ಒಂದು ನಾಲ್ಕು ಚಕ್ರದ ವಾಹನ ಜೊತೆ ನಮಗೆ ಅಪಘಾತ ಆಗುತ್ತದೆ, ತಪ್ಪು ಯಾರದೆಂದು ವಿಮರ್ಶೆ ಮಾಡುವ ಮೊದಲು ನಾವು "ನಿರ್ಧಾರ" ಕ್ಕೆ ಬಂದಿರುತ್ತೇವೆ. "ಏನು ದೊಡ್ಡ ಗಾಡಿ ಯಲ್ಲಿ ಬಂದರೆ ಧಿಮಾಕ? ಚಿಕ್ಕ ಗಾಡಿಯವರು ಕಾಣಲ್ವ" ಅಂತ ಅರ್ಭಟಿಸಿರುತ್ತೇವೆ .
ಘಟನೆ ೨ - ಈ ಬಾರಿ ನಾವು ನಾಲ್ಕು ಚಕ್ರದ ವಾಹನದಲ್ಲಿ ಪ್ರಯಾಣಿಸುತ್ತಿರುತ್ತೇವೆ ಒಂದು ದ್ವಿಚಕ್ರ ವಾಹನ ಜೊತೆ ತಿಕ್ಕಾಟ ವಾಗುತ್ತದೆ. ಈಗ "ಏಯ್ ನೋಡ್ಕೊಂಡು ಹೋಗೊಲೋ ನಮ್ಮದು ದೊಡ್ಡ ಗಾಡಿ. ಸ್ವಲ್ಪ damage ಆದ್ರು ದುಬಾರಿ ಖರ್ಚು ಗೊತ್ತಾಗೊಲ್ವ" ಅನ್ನೋ ಮಾತನ್ನಾಡಿರುತ್ತೇವೆ. ಅಂದರೆ ಯಾವುದೇ ಪರಿಸ್ಥಿತಿಯಲ್ಲೂ ನಾವು ನಮ್ಮ ತಪ್ಪುಗಳನ್ನ ಒಪ್ಪಿಕೊಳ್ಳಲು ತಯಾರಿಲ್ಲ . ಯಾಕೆ ಹೀಗೆ? ಯೋಚನೆ ಮಾಡಿದರೆ ಜೀವನದಲ್ಲಿ ನಡೆಯುವ ಅನೇಕ ಘಟನೆಗಳಲ್ಲಿ ನಾವು ಹೀಗೆ ನಡೆದುಕೊಳ್ಳುತ್ತೇವೆ. ಯಾವಾಗಲೂ ನಮ್ಮ ಮೂಗಿನ ನೇರಕ್ಕೆ ಯೋಚನೆ ಮಾಡಿ, ಬೇರೆಯವರ ತಪ್ಪು ಹುಡುಕಿ ಅವರನ್ನ ತಪ್ಪಿತಸ್ತರು ಅಂತ "ನಿರ್ಧಾರ"ಕ್ಕೆ ಬಂದಿರುತ್ತೇವೆ.
ಅತ್ತೆ-ಸೊಸೆ ಜಗಳ, employer-employee ಕಿತ್ತಾಟ, ಗಂಡ-ಹೆಂಡತಿ ಜಗಳ, ಗುರು-ಶಿಷ್ಯರ ಜಗಳ, ದಾಯಾದಿ ಕಲಹ, ಜಾತಿ ಜಗಳ, ಕೋಮುದ್ವೇಷ -- ಈ ಎಲ್ಲ ಘರ್ಷಣೆಗಳಿಗೆ ನಾವು ಮಾತ್ರ ಸರಿ ಅನ್ನೋ ಮನೋಭಾವವೇ ಕಾರಣ.
ನಾವು ಆಚರಿಸುತ್ತೇವೆಂದ ಮಾತ್ರಕ್ಕೆ ಒಂದು ಆಚರಣೆ ಸರಿಯಾಗಿರಬೇಕು ಎಂದಲ್ಲ. ನಾವು ಮೊದಲು ನಮ್ಮಲಿರುವ ತಪ್ಪುಗಳನ್ನ ಸರಿಪಡಿಸಿಕೊಳ್ಳಬೇಕು. ಒಬ್ಬರ ದೃಷ್ಟಿಯಲ್ಲಿ ಸರಿ ಇರುವುದು ಇನ್ನೊಬ್ಬರ ದೃಷ್ಟಿಯಲ್ಲಿ ತಪ್ಪಾಗಿರಬಹುದು. ಆದರೆ ದೇವರ ದೃಷ್ಟಿಯಲ್ಲಿ ಸರಿ ಸರಿಯಾಗಿಯೇ ಇರುತ್ತದೆ. ತಪ್ಪು ತಪ್ಪಾಗಿರುತ್ತದೆ. ನಾವು ಮೊದಲು ನಮ್ಮ ಮೂಗಿನ ನೇರಕ್ಕೆ ಮಾತ್ರ ಯೋಚನೆ ಮಾಡುವುದನ್ನ ಬಿಟ್ಟು ಬೇರೆಯವರ ದೃಷ್ಟಿಯಲ್ಲೂ ಯೋಚನೆ ಮಾಡುವುದನ್ನು ಕಲಿಯಬೇಕು.
ಉದಾಹರಣೆಗೆ ಒಬ್ಬರ ದೃಷ್ಟಿಯಲ್ಲಿ ಹಂದಿ ಮಾಂಸ ತಿನ್ನುವುದು ತಪ್ಪಾದರೆ, ಇನ್ನೊಬ್ಬರ ದೃಷ್ಟಿಯಲ್ಲಿ ಗೋಮಾಂಸ ತಿನ್ನುವುದು ತಪ್ಪು, ಮತ್ತೊಬ್ಬರ ದೃಷ್ಟಿಯಲ್ಲಿ ಮಾಂಸ ತಿನ್ನುವುದೇ ತಪ್ಪು. " ಆದರ್ಶ" ಅನ್ನೋದು ನಮ್ಮ "ಅನುಕೂಲ"ಕ್ಕೆ ತಕ್ಕ ಹಾಗೆ ಬದಲಾಯಿಸಿಕೊಳ್ಳುವುದಲ್ಲ. ಅದು "ಮನುಕುಲ"ಕ್ಕೆ ಸಹಾಯವಾಗೋ ಹಾಗೇ ನಾವು ಬಳಸಿಕೊಳ್ಳಬೇಕು .
ತಪ್ಪುಗಳನ್ನ ಒಪ್ಪಿಕೊಂಡು ನಮ್ಮ ವಿಚಾರಗಳನ್ನ "ಮನುಕುಲ" ಕ್ಕೆ ಉಪಯೋಗ ಆಗುವ ಹಾಗೇ ಬಳಸಿದರೆ ಈ ದೇಶದಲ್ಲಿ ನಡೆಯುವ ಅನೇಕ ಅತ್ಮಹತ್ಯೆಗಳು, ಕೋಮು ಗಲಬೆಗಳು, ವಿಚ್ಚೇದನಗಳು, ಕೊಲೆ-ಸುಲಿಗೆ ಗಳು ನಡೆಯುವುದು ನಿಲ್ಲುತ್ತವೆ.
Irrespective of caste, Gender, religion ಎಲ್ಲರೂ ದೇವರಿಗೆ ಹೆದರುತ್ತಾರೆ. ನಾಸ್ತಿಕರಾದಲ್ಲಿ at-least ಆತ್ಮಸಾಕ್ಷಿಗೆ ಎದುರುತ್ತಾರೆ. ಹಾಗಿದ್ದಾಗ ನಾವು ಮಾಡಿದ್ದೆಲ್ಲಾ ಸರಿ ಅನ್ನುವ ಬದಲು ದೇವರ ದೃಷ್ಟಿಯಲ್ಲಿ ಸರಿಯಾಗಿ ನಮ್ಮ ಆತ್ಮಸಾಕ್ಷಿಗೆ ಒಪ್ಪುವಂತಹ ಕೆಲಸಗಳನ್ನ ಮಾಡೋಣವೇ?
ಕಟು ಸತ್ಯವನ್ನು ಖಾರವಾದ ಮಾತುಗಳಲ್ಲಿ ತಿಳಿಸಿದ್ದೀರಿ, ಚೆನ್ನಾಗಿದೆ.
ReplyDeleteಧನ್ಯವಾದಗಳು ಶಾಸ್ತ್ರಿಗಳೇ
Delete