ಹನಿಗಳು

-ಕೃಷ್ಣಕುಮಾರ್ ಕಮ್ಮಜೆ
ರಾಮರಾಜ್ಯ ವೃಕ್ಷ

ರಾಮರಾಜ್ಯ ಮರದ ಬೇರುಗಳು ಎಲ್ಲಿ?
ದೇಶದೆಲ್ಲೆಡೆ ನಗುವ ಪ್ರತಿಯೊಂದು ಹಳ್ಳಿ!

ಗ್ರಾಮಗಳ ಆಡಳಿತ ನಡೆಯುತಿರೆ ಚೆನ್ನು
ಭಾರತಾಂಬೆಗೆ ನಿತ್ಯ ಹೂ, ಕಾಯಿ, ಹಣ್ಣು!

ಶಿವನ ವರ

ಹೋಗಿ ಕೈಲಾಸಕ್ಕೆ ಬೇಡಿದೆನು ಶಿವನ-
ವರನೀಡು ಬರುವಂತೆ ಭ್ರಷ್ಟತೆಗೆ ಮರಣ
ಹರನೆಂದ,"ಬಲುಸುಲಭ, ವರವೇಕೆ ಇದಕೆ?

ಹಾಕಿಬಿಡಿ ನೀವುಗಳೆ ಮನದಿಂದ ಹೊರಕೆ!"

No comments:

Post a Comment