- ಚಿದಂಬರ
ಸಿಂಹದ ಮರಿ ಸಿಂಹ, ಹುಲಿಯ ಮರಿ ಹುಲಿಕಾಗೆಗಳ ಮರಿ ಕಾಗೆ, ಜಿಂಕೆಗಳ ಮರಿ ಜಿಂಕೆ,
ಲೆಕ್ಕಾಚಾರದಲಿ ಒಂದಿನಿತೂ ತಪ್ಪಿಲ್ಲ ನಿಸರ್ಗದಲಿ,
ತಪ್ಪಿರುವುದು ಅತಿಬುದ್ಧಿವಂತ, ಮಾತನಾಡಲು ಬಲ್ಲ ಪ್ರಾಣಿಯೊಂದರಲ್ಲಿ
ಇಂಜಿನಿಯರ್ರುಗಳು ಬಯಸುವದೇ ಮಕ್ಕಳೂ ಅವರಂತಾಗಲಿ ಎಂದು
ಡಾಕ್ಟರ್ರುಗಳ ವಿಚಾರವೂ ಹೀಗೇಯೇ!
ಉದ್ಯಮಿಗಳ, ಸಿನಿಮಾದವರ ಯೋಚನೆಯಲ್ಲಿ ಕೊಂಚವೂ ಬದಲಿಲ್ಲ
ರೈತರ ವಿಚಾರದಲಿ ಮಾತ್ರ ಭಿನ್ನ
ಒಕ್ಕಲಿಗ ಉತ್ತದಿರೆ ಬಿಕ್ಕುವುದು ಜಗವೆಲ್ಲ
ತಿನ್ನಲಾದೀತೆ ಎಲ್ಲರೂ ಹಣವನ್ನು ಮಾತ್ರ!!?
ಹೊಟ್ಟೆ ತುಂಬಿಸುವುದು ತುತ್ತನ್ನವೇ ಹೊರತು ಧನ-ಕನಕಗಳಲ್ಲ!
ರೈತರ ಮಕ್ಕಳೆಲ್ಲರೂ ಈಗ ಡಾಕ್ಟರ್ರು, ಇಂಜಿನಿಯರ್ರು
ಸಂತೋಷದ ವಿಚಾರವಾದರೂ ಆತಂಕವಿಲ್ಲವೆಂದೇನಿಲ್ಲ!
ಮೇಷ್ಟ್ರುಗಳ ವಿಚಾರದಲ್ಲೂ ಕವಡೆಯಷ್ಟು ವ್ಯತ್ಯಾಸವಿಲ್ಲ
ಎಲ್ಲರ ಮಕ್ಕಳೂ ಈಗ ಮಹಾನಗರಗಳ ಶ್ವೇತ ಕೊರಳಪಟ್ಟಿಯ, ಬಹುರಾಷ್ಟ್ರೀಯ ಕಂಪನಿಗಳ ನೌಕರರು! ಇದು ಹೆಮ್ಮೆಯ ವಿಚಾರವಾದರೂ ರಾಷ್ಟ್ರ ನಿರ್ಮಾಣದ ಭಯವಿಲ್ಲವೆಂದೇನಿಲ್ಲ
ಅಪರಾಧಿಗಳಿಗಿಂತ ಲಾಯರ್ ಸಂಖ್ಯೆಯೇ ಜೋರು !
ಹಳ್ಳಿಗಳೆಲ್ಲ ಬಿಕೋ ಎನ್ನುತ್ತಿದ್ದರೂ, ನಗರಗಳೆಲ್ಲಾ ಹೌಸ್ಫುಲ್ಲು
ಅವೈಜ್ಞಾನಿಕ ಬೆಳವಣಿಗೆಗೆ ಕಡಿವಾಣ ಹಾಕುವರ್ಯಾರು?
No comments:
Post a Comment