- ರವಿಶಂಕರ್ ಶಾಸ್ತ್ರಿ
ನಿನ್ನ ಕಣ್ಣಂಚಿನ ತುಂಟ ನಗು
ನನ್ನ ಮನ ತಾಕಿದರೆ,
ಸ್ತಬ್ಧವಾಗಿದ್ದ ಕೊಳದೊಳಗೆ
ಯಾವುದೋ ಧ್ಯಾನದಲಿ
ನನ್ನ ಮನ ಮುಳುಗಿರಲು,
ನಿನ್ನ ನಗುವಿನ ಅಲೆಯು
ಮನವ ಕಲಕಿತ್ತು.
ಊರ ಯೋಚನೆ ಬಿಟ್ಟು
ಮಧುರ ಯೋಚನೆ ಮೂಡಿ,
ನಿನ್ನ ಬಳಿ ಬರಲೆಂದು
ಮನವು ಬಯಸಿತ್ತು.
ನಿನ್ನ ನಗು ಕಂಡದ್ದು
ನನ್ನ ಕನಸಲಿ ಮಾತ್ರ,
ಅಸಲಿಗೆ ನೀನಿನ್ನೂ
ತವರು ಮನೆಯಲಿದ್ದೆ!
No comments:
Post a Comment