[ಆರನೇ ಭಾಗಕ್ಕಾಗಿ - ದೇಶ ಸುತ್ತು : ಉತ್ತರ ಭಾರತ ಪ್ರವಾಸ - ಭಾಗ ೬]
- ಅಕ್ಷಯರಾಮ ಕಾವಿನಮೂಲೆ
ನಮ್ಮ ಟ್ಯಾಕ್ಸಿ ಡ್ರೈವರ್ ಪ್ರಾಯಸ್ಥ. ಬಹಳ
ಸಮಾಧಾನದಿಂದ ಕಾರು ಓಡಿಸುತ್ತಾ ಮೊದಲಿಗೆ ನಮ್ಮನ್ನು 'ನಹಾರ್ ಗಢ' ಕೋಟೆಗೆ ಕರೆದೊಯ್ದ.
ಜೈಪುರ ಪಟ್ಟಣದಿಂದ ಹೊರಬಂದ ಹಾಗೆಯೇ ಕುರುಚಲು ಕಾಡುಗಳಿಂದ ಆವೃತ್ತವಾದ ಗುಡ್ಡಗಳ ಸಾಲು.
ತಿರುವುಮುರುವುಗಳಿಂದ ಕೂಡಿದ ಚಿಕ್ಕ ರಸ್ತೆಯಲ್ಲಿ ಮೇಲೇರುತ್ತಾ ಸಾಗಿದೆವು. ಗುಡ್ಡವೊಂದರ
ತುದಿಯಲ್ಲಿತ್ತು ನಹಾರ್ ಗಢ. ಟಿಕೆಟ್ ಕೊಂಡು ಕೋಟೆಯ ದ್ವಾರದೊಳಗೆ ಪ್ರವೇಶಿಸಿದೆವು.
ಮಾಧವೇಂದ್ರ ಅರಮನೆಯೇ ಕೋಟೆಯೊಳಗಿನ ಪ್ರಧಾನ ಆಕರ್ಷಣೆ. ಟಿಕೆಟ್ ಪರಿಶೀಲಿಸುವ ಸಿಬ್ಬಂದಿಯೋರ್ವ ಇನ್ನೊಂದಿಷ್ಟು ಕಾಸು ಸಂಪಾದಿಸಲು ಗೈಡ್ ಪಾತ್ರವನ್ನೂ ಮಾಡಿದ.