ಶಟಲ್ ಆಟ, ಆ ಸುಂದರ ಹುಡುಗಿ ಮತ್ತು ಮಾಸ್ತರ ಬೆತ್ತದ ಸೇವೆ!

 - ಮಂಜುನಾಥ್ ಪಿ


ನಾನು ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೂ ಯಸಳೂರು ಎಂಬ ಗ್ರಾಮದಲ್ಲಿನ ಸರ್ಕಾರಿ ಶಾಲೆಯಲ್ಲಿ  ಓದಿದ್ದ ನೆನಪುಗಳು ನನ್ನನ್ನು ಯಾವಾಗಲೂ ಕಾಡುತ್ತಿರುತ್ತವೆ. ನೀವೆಲ್ಲರೂ ಭಾವಿಸಿರಬಹುದು ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಪಾಠಗಳು ಸರಿಯಾಗಿ ನಡೆಯುವುದಿಲ್ಲ. ಕೆಲವು ವಿಷಯಗಳನ್ನು ಪಾಠ ಮಾಡಲು ಗುರುಗಳು ಇರುವುದಿಲ್ಲವೆಂದು. ಆದರೆ ನಮ್ಮ ಯಸಳೂರು ಶಾಲೆ ಇದಕ್ಕೆ ಅಪವಾದವಾಗಿತ್ತು. 

ಬೆಳ್ಳಿ ಹಬ್ಬದ ನೆನಪಲ್ಲಿ: ಚಾಪ್ಟರ್ 1 – ಬೆನ್ನಿಗೆ ಬಿದ್ದ ಚೂರಿ

- ಜ್ಞಾನೇಶ್ ಸಿ.ಎಂ. 


[1999 ರಲ್ಲಿ ಪ್ರಾರಂಭವಾದ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಜಲಿ ಇಂಜಿನಿಯರಿಂಗ್ ಕಾಲೇಜಿನ ಮೊದಲ ಬ್ಯಾಚಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು 2024 ಅಕ್ಟೋಬರ್ ನಲ್ಲಿ  ಬೆಳ್ಳಿ ಹಬ್ಬದ ಸಮಾರಂಭ ಅಯೋಜಿಸಿದ್ದರು. ಆ ಸಮಾರಂಭದ ವಿವಿಧ ವಿಭಾಗಗಳ ಮೇಲುಸ್ತುವಾರಿ ವಹಿಸಿ ಸಮಾರಂಭ ಯಶಸ್ವಿಯಾಗಿ ನಡೆಯಲು ನನ್ನ ಮಿತ್ರ ಜ್ಞಾನೇಶ್ ರವರ ಕೊಡುಗೆ ದೊಡ್ಡದು. ಈ ಲೇಖನದಲ್ಲಿ ಅವರು ಬೆಳ್ಳಿ ಹಬ್ಬ ಸಮಾರಂಭವನ್ನು ಆಯೋಜಿಸುವಾಗಿನ ಅವರ ಅನುಭವಗಳನ್ನು ದಾಖಲಿಸಿದ್ದಾರೆ. ಈ ಲೇಖನ ಮಾಲೆ ಹಲವು ಭಾಗಗಳಲ್ಲಿ ಪ್ರಕಟಗೊಳ್ಳುತ್ತದೆ. 
- ಮೋಹನ್ ಮೂರ್ತಿ ಮಾ.ಕೆಂ.] 

ರಕ್ತದಾನ: ಸಮಾಜದ ಋಣ ತೀರಿಸುವ ಹಾದಿ

- ರವಿಕುಮಾರ್ ಎಂ.ಎಸ್.

ಕೆಲವು ವಾರಗಳ ಕೆಳಗೆ ನಾನು ರಕ್ತದಾನ ಮಾಡಲು ಎಂದಿನಂತೆ ನಾನು ಹೋಗುವ ರಕ್ತನಿಧಿ ಕೇಂದ್ರಕ್ಕೆ ಹೋದೆ. ಅಲ್ಲಿ ರಕ್ತನಿಧಿ ಕೇಂದ್ರವನ್ನು ನಿರ್ವಹಿಸುವ ಓರ್ವ ವ್ಯಕ್ತಿಯನ್ನು ಹಾಗೇ ಮಾತಿಗೆಳೆದಾಗ, ರಕ್ತದಾನದ ಬಗ್ಗೆ ಬಹಳಷ್ಟು ಉಪಯುಕ್ತ ಮಾಹಿತಿ ನೀಡಿದರು. ಅದಾಗಿ ಕೆಲವು ದಿನಗಳು ಕಳೆಯಿತು. ಒಂದು ದಿವಸ ನಾನು ನನ್ನ ಆಪ್ತ ಮಿತ್ರನ ಜೊತೆ ಮಾತನಾಡುವಾಗ ರಕ್ತನಿಧಿ ಕೇಂದ್ರದ ವ್ಯಕ್ತಿ ನೀಡಿದ ಮಾಹಿತಿಗಳನ್ನು ಪ್ರಸ್ತಾಪಿಸಿದೆ. ನನ್ನ ಮಿತ್ರ ನೀನ್ಯಾಕೆ ಈ ಉಪಯುಕ್ತ ವಿಷಯವನ್ನು ವಿಸ್ತೃತ ಲೇಖನದ ಮೂಲಕ ಇತರರಿಗೆ ಹಂಚಿಕೊಳ್ಳಬಾರದು. ಇದರಿಂದ ರಕ್ತದಾನದ ಬಗ್ಗೆ ಜನರಿಗೆ ಇರುವ ತಪ್ಪು ತಿಳುವಳಿಕೆ ನೀಗಲು ಸಹಾಯವಾಗಬಹುದು ಇದರ ಜೊತೆಗೆ ರಕ್ತದಾನ ಮಾಡಲು ಹಲವರಿಗೆ ಪ್ರೇರೇಪಣೆ ನೀಡಬಹುದು ಎಂದು ಸಲಹೆಯಿತ್ತರು. ಅವರ ಹೇಳಿದ ಮಾತುಗಳು ನನಗೆ ಸರಿ ಅನಿಸಿತು. ಅದರ ಫಲಿತಾಂಶವೇ ಈ ಲೇಖನ. 

ಹುಚ್ಚೇಗೌಡರ ಕತೆ - ಭಾಗ ೨

- ಮೋಹನ್ ಮೂರ್ತಿ ಮಾ.ಕೆಂ.

1998-99 ರಲ್ಲಿ ನಾನು ದ್ವಿತೀಯ ಪಿಯುಸಿ ಓದುತ್ತಿದ್ದ ಸಮಯದಲ್ಲಿ ನಡೆದ ಘಟನೆಯನ್ನು ಆದರಿಸಿದ ಬರಹ ಇದು. ಮೂರು ಭಾಗಗಳಲ್ಲಿ ಇದನ್ನು ಬರೆಯುತ್ತಿದ್ದೇನೆ. ಇದು ಎರಡನೆಯ ಭಾಗ. ಮೊದಲನೇ ಭಾಗ ಓದಲು ಇಲ್ಲಿ ಕ್ಲಿಕ್ ಮಾಡಿ ಹುಚ್ಚೇಗೌಡರ ಕತೆ - ಭಾಗ ೧ಅಂತಿಮ ಭಾಗ ಮುಂದಿನ ತಿಂಗಳು ಪ್ರಕಟವಾಗುತ್ತದೆ. 

ಅಭಿಪ್ರಾಯಗಳ ಬಗ್ಗೆ ನನ್ನ ಅಭಿಪ್ರಾಯ

 - ವಂದನಾ ಎನ್


ಹೀಗೊಂದು ದಿನ ನನ್ನ ಗೆಳೆಯನ ಜೊತೆ ಮಾತುಕತೆ ನಡೆಯುತ್ತಿತ್ತು. ಸರಳ ವಿಷಯದಿಂದ ಶುರುವಾದ ಮಾತು ನಿಧಾನವಾಗಿ ಗಂಭೀರ ಚರ್ಚೆಯಾಗಿಬಿಟ್ಟಿತು. ನಾನು ಅವನ ಮಾತುಗಳನ್ನು ವೈಯಕ್ತಿಕವಾಗಿ ತೆಗೆದುಕೊಂಡು ಪ್ರತಿಕ್ರಿಯೆ ನೀಡಲು ಮುಂದಾದಾಗ, ಅವನು ತುಂಬಾ ಶಾಂತವಾಗಿ, “ಡಿಫೆನ್ಸಿವ್ ಆಗ್ಬೇಡ, ನಾನು ನನ್ನ ಅಭಿಪ್ರಾಯ ಹೇಳ್ತಿದ್ದೀನಿ ಅಷ್ಟೇ” ಎಂದ. ಆ ಕ್ಷಣದಲ್ಲಿ, ನಡೆಯುತ್ತಿದ್ದ ಚರ್ಚೆಗಿಂತ ಆ ಒಂದು ಸಾಲು ನನ್ನ ಮನಸ್ಸನ್ನು ಆವರಿಸಿಕೊಂಡಿತು. 

ಕವನ ಗುಚ್ಛ

- ಮೌನ

ಅವಶೇಷಗಳು


ಮನದ ತುಂಬಾ ಒಲವು ತುಂಬಿದ್ದರೂ 

ಕೆಲವೊಮ್ಮೆ ವಿಧಿನಿಯಮ

ನಮ್ಮ ಬಾಹುಗಳಲಿ ಬಂಧಿಸಲಾಗುವುದಿಲ್ಲವೆನ್ನುವುದೇ

ನೋವಿನ ಸಂಗತಿ

ಗಣಿತದ 'ಮಿತಿ' ಮತ್ತು ಬದುಕಿನ 'ಗತಿ': ಒಂದು ಪುಸ್ತಕದ ಮುನ್ನುಡಿ ಕಲಿಸಿದ ಪಾಠ

- ವೆಂಕಟೇಶ್ ಶೇಷಗಿರಿ

೨೦ ವರ್ಷದಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ನಾನು ಹಲವಾರು ರೀತಿಯ ಸಹುದ್ಯೋಗಿಗಳನ್ನು ನೋಡಿದ್ದೇನೆ. ಅದರಲ್ಲಿ ಕೆಲವರು ತಮ್ಮ ವ್ಯಕ್ತಿತ್ವದಿಂದ ನನ್ನ ಮೇಲೆ ಆಳವಾದ ಪ್ರಭಾವ ಬೀರಿದ್ದಾರೆ. ನಾನು ಇನ್ಫೋಸಿಸ್ನಲ್ಲಿ ಕೆಲಸ ಮಾಡುವಾಗ ನನ್ನ ಮ್ಯಾನೇಜರ್ ಆಗಿದ್ದ "ಪ್ರಣವ ಕುಮಾರ್ ಝಾ" ಅವರು ಈ ಸಾಲಿನಲ್ಲಿ ಬಹಳ ವಿಶಿಷ್ಟವಾಗಿ ನಿಲ್ಲುತ್ತಾರೆ.