ಕವನ ಗುಚ್ಛ

- ಮೌನ

ಅವಶೇಷಗಳು


ಮನದ ತುಂಬಾ ಒಲವು ತುಂಬಿದ್ದರೂ 

ಕೆಲವೊಮ್ಮೆ ವಿಧಿನಿಯಮ

ನಮ್ಮ ಬಾಹುಗಳಲಿ ಬಂಧಿಸಲಾಗುವುದಿಲ್ಲವೆನ್ನುವುದೇ

ನೋವಿನ ಸಂಗತಿ


ಆಕೆ


ಅಪೂರ್ಣವಾದ ಪರಿಪೂರ್ಣ 

ಜಗತ್ತಿನಲಿ ಸಂಪೂರ್ಣವಾಗಿ 

ಅಪೂರ್ಣ ಆಕೆ


ಆಶಯ


ನಮ್ಮೀರ್ವರ ನಲುಮೆ

ಕೊನೆಯಿಲ್ಲದ ಭಾಗಶ: ಕತೆಯಾಗದೆ

ಎಣೆಯಿಲ್ಲದ ಸಂಪೂರ್ಣ

ಶಾಶ್ವತ ಇತಿಹಾಸವಾಗಲಿ


ತ್ರಿಕಾಲ ಸತ್ಯ


ನಾವೆಲ್ಲರೂ ಒಂದೇ ನಾವೆಯ

ಪಯಣಿಗರು, ಸ್ವಪ್ರತಿಷ್ಟೆ, ಗರ್ವ,

ಅಹಮ್ಮಿಕೆ, ನಮ್ಮ ನಂಬಿಕೆ

ಈರ್ಷೆಗಳು ನಮ್ಮನ್ನು

ಬೇರ್ಪಡಿಸುವ ಮುನ್ನ

ನಾವೆಲ್ಲರೂ ಮಣ್ಣಿನ ಕಣಗಳೇ

ಮರಳಿ ಮಣ್ಣಿಗೆ ಸೇರುವ ಮೊದಲು

No comments:

Post a Comment