ಗಣಿತದ 'ಮಿತಿ' ಮತ್ತು ಬದುಕಿನ 'ಗತಿ': ಒಂದು ಪುಸ್ತಕದ ಮುನ್ನುಡಿ ಕಲಿಸಿದ ಪಾಠ

- ವೆಂಕಟೇಶ್ ಶೇಷಗಿರಿ

೨೦ ವರ್ಷದಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ನಾನು ಹಲವಾರು ರೀತಿಯ ಸಹುದ್ಯೋಗಿಗಳನ್ನು ನೋಡಿದ್ದೇನೆ. ಅದರಲ್ಲಿ ಕೆಲವರು ತಮ್ಮ ವ್ಯಕ್ತಿತ್ವದಿಂದ ನನ್ನ ಮೇಲೆ ಆಳವಾದ ಪ್ರಭಾವ ಬೀರಿದ್ದಾರೆ. ನಾನು ಇನ್ಫೋಸಿಸ್ನಲ್ಲಿ ಕೆಲಸ ಮಾಡುವಾಗ ನನ್ನ ಮ್ಯಾನೇಜರ್ ಆಗಿದ್ದ "ಪ್ರಣವ ಕುಮಾರ್ ಝಾ" ಅವರು ಈ ಸಾಲಿನಲ್ಲಿ ಬಹಳ ವಿಶಿಷ್ಟವಾಗಿ ನಿಲ್ಲುತ್ತಾರೆ. 

ಮೂಲತ: ಪ್ರಣವ್ ರವರು ಬಿಹಾರ ರಾಜ್ಯದ ಭಾಗಲ್ಪುರ್ ಜಿಲ್ಲೆಯವರು. ಭಾಗಲ್ಪುರ್ ಇಂಜಿನಿಯರಿಂಗ್ ಕಾಲೇಜ್ ಅಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿ, ಬೆಂಗಳೂರಿನ IISc ಯಲ್ಲಿ ಸಂರಚನೆ (structure) ಇಂಜಿನಿಯರಿಂಗ್ ಅಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ.

ಪ್ರಣವ್ ಕುರಿಹಿಂಡಿನಂತೆ ಎಲ್ಲರೂ ನಡೆಯುವ ದಾರಿಯಲ್ಲಿ ನಡೆಯುವರಲ್ಲ. ಪ್ರತಿಯೊಂದು ಸಮಸ್ಯೆಗೂ / ಯಾವ ಕಠಿಣ ಪರಿಸ್ಥಿತಿ ಎದುರಾದರೂ ಅವುಗಳನ್ನು ಪ್ರಣವ್ ರವರು ಚಾಕಚಕ್ಯತೆಯಿಂದ ನಿಭಾಯಿಸುವ ವಿಧಾನ ಯಾರನ್ನಾದರೂ ಬೆರಗಾಗಿಸುವಂತದು.

ಇದೀಗ ಅವರು ತಮ್ಮ ಅನುಭವಗಳನ್ನೆಲ್ಲಾ ಪುಸ್ತಕಗಳ (ಒಂದು ಪುಸ್ತಕ ಸಾಕಾಗಲ್ಲ...) ರೂಪದಲ್ಲಿ ತರಲು ನಿರ್ಧರಿಸಿದ್ದು ಅದರ ಪ್ರಯುಕ್ತ "ಅಮೋಘ ಗಣಿತ - ರಾಮ ರಹಸ್ಯ ಅವಕಲನ ಸಮೀಕರಣ" ಪುಸ್ತಕವನ್ನು ಬರೆದಿದ್ದಾರೆ. 

ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳದ, ಅವ್ಯವಸ್ಥಿತ/ ಅಸಂಘಟಿತ ಮಾದರಿಯಲ್ಲಿ ಎಲ್ಲಾ ಕೆಲಸಗಳನ್ನು ಮಾಡುವ ಅವರು. ಮನಸ್ಸು ಮಾಡಿ ಪುಸ್ತಕ ಬರೆದಿರುವುದು ಒಂದು ದೂಡ್ಡ ಸಾಧನೆಯೇ ಸರಿ. ಒಂದಂತು ನಿಜ. ಅವರು ಹೇಳಲು ಬಯಸುವ ವಿಚಾರಗಳು ಅಥವಾ ಚಿಂತನೆಗಳು ನಾವು ಬೇರೆ ಎಲ್ಲೂ ಓದಲು / ಕೇಳಿರಲು ಸಾಧ್ಯವಿಲ್ಲ.

ಪುಸ್ತಕವನ್ನು ಪೂರ್ತಿ ಓದಿ ಮುಗಿಸಿಲ್ಲವಾದರೂ, ಬರಿ "ಮುನ್ನುಡಿ" ಓದಿ ಈ ಅಂಕಣ ಬರೆಯಲು ನಿರ್ಧರಿಸಿದೆ. ಚಿಕ್ಕ ಹುಡುಗನಾಗಿದ್ದಾಗ  ಮರ್ಯಾದೆಯ ಸ್ವರೂಪದ (sacred boundary) ಬಗ್ಗೆ ಪಕ್ಕದ ಬೀದಿಯ ಸಂಸ್ಕೃತ ಮಾಸ್ಟರ ವ್ಯಾಖ್ಯಾನ ಮತ್ತು ಗಣಿತದ ಮಾಸ್ಟರ್ ಆದ ತಮ್ಮ ತಂದೆಯ ವ್ಯಾಖ್ಯಾನ ಎರಡನ್ನೂ ಸಮೀಕರಿಸಿರುವುದು ಈ ಪುಸ್ತಕದ ಬುನಾದಿಯೆನ್ನಬಹುದು.

ಸಂಸ್ಕೃತ ಮೇಷ್ಟ್ರ ಪ್ರಕಾರ "ಮರ್ಯಾದೆಯೆಂದರೆ ನಾವು ಮಾಡುವ ಕೆಲಸದ ಪರಿಣಾಮಗಳು ಅನಿಶ್ಚಿತತೆಯಿಂದ ಕೂಡಿರುವಾಗ, ನಮ್ಮ ನೈತಿಕ ಮೌಲ್ಯಗಳು ಕುಗ್ಗದಂತೆ ತಡೆಯುವ ಸಾಧನ. ಸ್ಪಷ್ಟತೆ ಇಲ್ಲದಾಗ ನಮಗೆ ಮಾರ್ಗದರ್ಶನ ಮಾಡುವ ವಿಧಾನ."

ಅದೇ ಗಣಿತ ಮೇಷ್ಟ್ರ ಮರ್ಯಾದೆಯ ಸ್ವರೂಪವನ್ನು "ಮಿತಿ"ಗೆ ಹೋಲಿಸಿ, ಒಂದು ನಿರ್ದಿಷ್ಟವಾದ ಗುರಿಗೆ ಅಪರಿಮಿತವಾಗಿ ಹ ತ್ತಿರವಿದ್ದು ಅದನ್ನು ತಲುಪದೇ ಇರುವುದು. ಉದಾಹರಣೆಗೆ ೨ ನಿಮಿಷವನ್ನು ಅಪರಿಮಿತವಾಗಿ ತುಂಡರಿಸಿ ೧ ನಿಮಿಷ, ಮತ್ತೆ ೩೦ ಸೆಕೆಂಡ್, ಮತ್ತೆ ೧೫ ಸೆಕೆಂಡ್ ಈ ರೀತಿಯಾಗಿ ಪ್ರತಿಯೊಂದು ವಿಭಾಗವು ಕಡಿಮೆಯಾಗುತ್ತಾ ಹೋಗುತ್ತದೆ. ಅವೆಲ್ಲವನ್ನೂ ಕೂಡಿಸಿದಾಗ ೨ ನಿಮಿಷಕ್ಕೆ ಹತ್ತಿರ ಬಂದರೂ ಅದು ೨ ನಿಮಿಷವಾಗುವುದಿಲ್ಲ. ಹೀಗೆ ವಿಭಾಗಿಸಿದ ಸಮಯದ ಭಾಗಗಳು ಒಂದು ಸರಣಿಯಾಗಿದ್ದರೂ, ಎರಡು ನಿಮಿಷ ಎಂಬುದು ಅದರ ಮಿತಿಯಾಗಿರುತ್ತದೆ.

ಗ್ರಹಿಕೆ ಎಂಬುದು ಪೂರ್ಣ ಸತ್ಯವಲ್ಲ ಮತ್ತು ಅಂತಿಮ ಸತ್ಯವು ಅಸಂಖ್ಯಾತ ಸಣ್ಣ ತುಣುಕುಗಳ ಒಟ್ಟುಗೂಡುವಿಕೆಗಿಂತಲೂ ಮೀರಿದ್ದಾಗಿರುತ್ತದೆ ಎಂಬ ಪಾಠವನ್ನು ಇದು ನನಗೆ ಕಲಿಸಿತು

ಈ ಎಲ್ಲಾ ಅಂಶಗಳು ಸೇರಿ ಕೊನೆಗೆ ರಾಮ ರಹಸ್ಯ ಅವಕಲನ ಸಮೀಕರಣದ ಜನನ ಮತ್ತು ಹಲವು ಅಧ್ಯಾಯಗಳಲ್ಲಿ ಅದರ ಬಗ್ಗೆ ಸವಿಸ್ತಾರವಾಗಿ ಬರೆದಿದ್ದಾರೆ. ವಿಷಯದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ಆಸಕ್ತರು ಪುಸ್ತಕವನ್ನು ಕೆಳಗಿನ ಜಾಲತಾಣದಿಂದ ಖರೀದಿಸಬಹುದಾಗಿದೆ.

No comments:

Post a Comment