ಯುದ್ಧ ದಾಹ

- ಮೌನ

ಬೀಭತ್ಸ ಯುದ್ಧದ ಕ್ರೌರ್ಯಕೆ 

ರಕ್ತ ಒಸರುವ, ಕೀವು ಜಿನುಗುವ ಎಂದೂ ಮಾಯದ 

ಮನಸ್ಸಿನ ಗಾಯಗಳಿಗೆ

ಮುಲಾಮುಂಟೆ ಈ ಜಗದಲಿ 


ರೆಡಿಮೇಡ್, ಇನ್ಸ್ಟಂಟ್ ಗಳ ಈ ಯುಗದಲಿ 

ನಿತ್ಯ ಸ್ಥಾಯಿ ಪರಿಹಾರ ಉಂಟೇ?

ಬೂದಿಮುಚ್ಚಿದ ಕೆಂಡದಂತೆ 

ಧರೆಯೊಡಲ ಲಾವಾರಸದಂತೆ

ಅವಿತವಿತು ಆಗಾಗ್ಗೆ ಸ್ಫೋಟಗೊಳ್ಳುವ 

ಅಧಿಕಾರದ ತಹತಹ, ಗೆಲ್ಲುವಿಕೆಯ ಹಠ 

ಸಹಸ್ರ ಜೀವಗಳ ಒಲವ ಚಿತ್ತಾರವ

ಹಾಳುಗೆಡವೀತು ಎಚ್ಚರ.

ತಣಿಸಲಾಗದ ಯುದ್ಧದಾಹಕೆ

ತೀರಲಾಗದ ನೋವೇ ಉತ್ತರ 

ಸ್ವಾತಂತ್ರ್ಯ, ಸ್ವಾಭಿಮಾನ, ಶಕ್ತಿಯ, ಸೊಕ್ಕಿನ

ಹಠದ ಒಟ್ಟಂದದಲಿ ಕಳೆದು ಹೋಗದಿರಲಿ

ಬದುಕಿನ ಜೀವದೊಲುಮೆ

ಜನ್ಮಜನ್ಮಾಂತರಗಳ ದ್ವೇಷ

ಸ್ಪರ್ಧೆಯ ಯುಗಾಂತ್ಯವಾಗಲಿ

No comments:

Post a Comment