- ರವಿಕುಮಾರ್ ಎಂ. ಎಸ್.
ನೀ ಎಲ್ಲಿರುವೆ? ನಿನ್ನ ಬರುವಿಕೆಯ ಕನವರಿಕೆಯಲ್ಲಿ
ನೀ ಬರುವ ದಾರಿಯಲ್ಲಿ, ಕಾದಿರುವೆ ನಿರೀಕ್ಷೆಯಲ್ಲಿ
ನೀ ಮೂಡಿಸಿದ ಭರವಸೆಯ ಭಾವದಲ್ಲಿ
ನೀ ನೀಡಿದ ಬೆಚ್ಚನೆಯ ಸುಖದಲ್ಲಿ
ನೀ ಅವರಿಸಿರುವೆ ತನು ಮನದಲ್ಲಿ
ಬೆರೆತಿರುವೆ ನನ್ನ ಉಸಿರಿನಲ್ಲಿ
ನಿನ್ನ ನೆನೆದು ನಾ ಪುಳಕಿತನಾದೆನಿಲ್ಲಿ
ಎಂತಹ ಮುದ ನೀಡುವೆ ನನ್ನ ಅಂತರಾಳದಲ್ಲಿ,
ಬಾ, ಜತೆಯಾಗಿ ವಿಹರಿಸುವ ಅನಂತ ದೂರದಲ್ಲಿ
ಮರೆವೆ ಈ ಜಗವ ನೀನಿರಲು ಸನಿಹದಲ್ಲಿ
ನಲುಗುತಿಹೆನು ವಿರಹವೇದನೆಯ ಬೆಂಕಿಯಲ್ಲಿ
ಇನ್ನೇತಕೆ ತಡ, ಬಂದು ಸೇರು ನನ್ನಲ್ಲಿ
No comments:
Post a Comment