- ರವಿಶಂಕರ್ ಶಾಸ್ತ್ರಿ
ನೀನು ಬಂದ ಮೇಲೆ
ನನ್ನ ಮನದಲಿದ್ದ ಖಾಲಿ ಜಾಗ ಮರೆಯಾಗಿದೆ
ನನ್ನ ಮನೆಯಲಿದ್ದ ಖಾಲಿ ಜಾಗ ತುಂಬಿದೆ!
ನೀನು ಬಂದ ಮೇಲೆ
ಹಗಲು-ರಾತ್ರಿ ಒಂದೇ ಆಗಿದೆ.
ನೀನು ಬಂದ ಮೇಲೆ
ಹಸಿವು-ನಿದ್ರೆ ತಿಳಿಯದಾಗಿದೆ.
ನೀನು ಬಂದ ಮೇಲೆ
ಕೆಲಸ-ಕಾರ್ಯ ಮರೆತು ಹೋಗಿದೆ.
ನೀನು ಬಂದ ಮೇಲೆ
ಜಗವು ವರ್ಣಮಯವಾಗಿದೆ.
ನೀನು ಬಂದ ಮೇಲೆ
ಸಮಯ ತಿಳಿಯದಾಗಿದೆ.
ಓ ಮಾಯೆಯೇ, ಮೊಬೈಲ್ ಮಾಯೆಯೇ
ನೀನು ಬಂದ ಮೇಲೆ ನನ್ನ ನಾನೇ ಮರೆತು ಹೋದೆ...
No comments:
Post a Comment