- "ಶ್ರೀ"ಖಾರ
ಲೇಖಕರು:ರಾಬಿನ್ ಶರ್ಮ
ಜೀವನದಲ್ಲಿ ಪ್ರತಿಯೊಂದು ವಿಷಯದಲ್ಲೂ ನಮಗೆ ಬುದ್ದಿ -ವಿವೇಕ ಇರಬೇಕು ಎಂದೇನೂ ಇಲ್ಲ. ಆದರೆ ವಿವೇಕವಿದ್ದರೆ, ಯಾವುದೇ ವಿಷಯದಲ್ಲಿ ನಮ್ಮ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ. ಕೆಲವೊಂದನ್ನು ಅನುಭವದಿಂದ, ಕೆಲವೊಂದನ್ನು ಪುಸ್ತಕದಲ್ಲಿ ಓದುವುದರಿಂದ ತಿಳಿದು ನಿರ್ವಹಣೆ ಮಾಡಬಹುದು.
ಆದರೆ ಕುಟುಂಬದ ವಿಷಯದಲ್ಲಿ, ಪ್ರತಿಯೊಬ್ಬರ ಕುಟುಂಬದ ಪಾತ್ರಧಾರಿಗಳು ಮತ್ತು ಅವರ ವ್ಯಕ್ತಿತ್ವ ಬೇರೆ ಬೇರೆ ಆಗಿರುವುದರಿಂದ, ಒಬ್ಬರ ಕುಟುಂಬ ಇನ್ನೊಬ್ಬರ ಕುಟುಂಬಕ್ಕಿಂತ ಸಹಜವಾಗೇ ಭಿನ್ನವಾಗಿರುತ್ತದೆ. ಒಂದು ಕುಟುಂಬದ ನಿರ್ವಹಣೆ ರೀತಿ ಇನ್ನೊಂದು ಕುಟುಂಬದಲ್ಲಿ ಉಪಯೋಗಕ್ಕೆ ಬರುವುದಿಲ್ಲ.
ಆದರೆ ಈ ಪುಸ್ತಕದಲ್ಲಿ, ಲೇಖಕರು ಎಲ್ಲರ ಕುಟುಂಬ ನಿರ್ವಹಣೆಗೂ ಅನ್ವಯವಾಗುವ ವಿಷಯಗಳನ್ನು ಕೆಲವು ಅನುಭವಗಳು ಮತ್ತು ಉದಾಹರಣೆಗಳೊಂದಿಗೆ ತಿಳಿಸಿದ್ದಾರೆ. ಕುಟುಂಬದ ನಿರ್ವಹಣೆಯಲ್ಲಿ ಮನೆಯ ನಾಯಕರು ಯಾರು ಆಗಿರಬೇಕು ಮತ್ತು ಏಕೆ? ಕುಟುಂಬ ಯಜಮಾನನ ಪಾತ್ರ ಏನು? ಯಜಮಾನಿಯ ಸ್ಥಾನ-ಮಾನ ಗಳು ಏನು? ಮಕ್ಕಳಿಗೆ ಏನನ್ನು ಕಲಿಸಬೇಕು? ದುಡಿಮೆ ಎಷ್ಟು ಇರಬೇಕು? ಕುಟುಂಬ ನಿರ್ವಹಣೆ ಯಲ್ಲಿ ಹಣ -ಗುಣಗಳ ಬಳಕೆ ಎಷ್ಟಿರಬೇಕು? ಹೀಗೇ ಓದುಗರ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ . ಹಾಗೆಯೇ ನಮ್ಮಲ್ಲಿ ಕೆಲವೊಂದು ಹೊಸ ಪ್ರಶ್ನೆಗಳನ್ನು ಹುಟ್ಟು ಹಾಕಿದ್ದಾರೆ.
ಹೀಗೆ ಹತ್ತು ವಿಷಯಗಳ ಬಗ್ಗೆ ಲೇಖಕರು ಬೆಳಕು ಚೆಲ್ಲಿದ್ದಾರೆ. ಕುಟುಂಬ ನಿರ್ವಹಣೆಯಲ್ಲಿ ತೊಡಗಿರುವ ಎಲ್ಲಾ ಹೆಣ್ಣು-ಗಂಡುಗಳಿಗೆ ಇದೊಂದು ಒಳ್ಳೆಯ ಮಾರ್ಗದರ್ಶಿಯಾಗಬಲ್ಲುದು.
No comments:
Post a Comment