- ಮೋಹನ್ ಮೂರ್ತಿ ಮಾ ಕೆಂ
ರಚನಾ
ಇಪ್ಪತ್ತಾರು ವರ್ಷ
ಬೆಂಗಳೂರು
ಆತ್ಮೀಯ ರಚನಾ,
ನೀನು ಈ ಪತ್ರಕ್ಕೆ ಉತ್ತರ ಬರೆಯುವುದಿಲ್ಲ ಎಂದು ನನಗೆ ಗೊತ್ತು. ಆದರೂ ನನ್ನ
ಅಂತರಾಳದ ಭಾವನೆಗಳನ್ನೆಲ್ಲಾ ಹೊರ ಹಾಕಿ ನನ್ನ ಮನಸ್ಸನ್ನು ಸಮಾಧಾನಿಸಿಕೊಳ್ಳಲು ಈ ಚಿಕ್ಕ ಪತ್ರ
ಬರೆಯಬೇಕಾಯಿತು.
ಕಳೆದ ವಾರವಷ್ಟೆ ನನ್ನ ಜನನವಾಯಿತು. ನನ್ನ ಜನ್ಮ ದಿನಾಚರಣೆ ಬಹಳ ಸಂಭ್ರಮದಿಂದಲೇ
ನಡೆಯಿತು, ಕೆಲವರು ದೂರವಾಣಿ ಕರೆಯ ಮುಖಾಂತರ ಶುಭಾಶಯಗಳನ್ನು ತಿಳಿಸಿದರು. ಒಂದಷ್ಟು ಜನ ಮೆಸೇಜ್
ಗಳ ಮೊರೆ ಹೋದರು. ವಾಟ್ಸಾಪು ಫೇಸ್ ಬುಕ್ಕು ಎಲ್ಲೆಲ್ಲೂ ಶುಭಾಶಯಗಳೇ!
ಸಂಭ್ರಮಾಚಾರಣೆಯ
ಜ್ವರವೆಲ್ಲಾ ಇಳಿದ ಮೇಲೆ, ಈ ವರ್ಷದಲ್ಲಿ ಮಾಡಬೇಕಿರುವ ಕೆಲಸಗಳ ಪಟ್ಟಿ ನೋಡಿ ಅಸಾಧ್ಯ ಗಾಬರಿಯಾಯಿತು. ತಲೆನೋವು ಶುರುವಾಯಿತು. ಅಲ್ಲಾ ಮಾರಾಯ್ತಿ, ಹನ್ನೆರಡು ಪುಸ್ತಕಗಳನ್ನು ಓದಬೇಕಿದ್ದ ನೀನು ಮೂರನ್ನಷ್ಟೇ ಓದಲು ಸಾಧ್ಯಾವಾಯಿತಾ? ಆರು ಸ್ಥಳಗಳ
ಪ್ರವಾಸ ಹಾಳು ಬಿದ್ದು ಹೋಗಲಿ atleast ಬೆಂಗಳೂರು ಬಿಟ್ಟು ಒಂದಾದರೂ ಹೊರ ಜಿಲ್ಲೆಗಳಿಗೆ ನೀನು ಭೇಟಿ ನೀಡಬಾರದಿತ್ತೆ.
ಅಲ್ಲಾ ಬಸವನಗುಡಿ ಚಾಟ್ ಸ್ಟ್ರೀಟ್ ಗೆ ಹೋಗಿದ್ದು, ಮಲ್ಲೇಶ್ವರಂನ ಮಂತ್ರಿ ಮಾಲ್ ಗೆ ಹೋಗಿದ್ದು
ಇವನ್ನೆಲ್ಲಾ ಪ್ರವಾಸಿ ಸ್ಥಳಗಳೆಂದು ಭಾವಿಸಿಬಿಟ್ಟೆಯಾ ಹೇಗೆ? ಪಿಯಾನೋ ಮತ್ತು ಫ್ರೆಂಚ್
ಕಲಿಯುತ್ತೇನೆಂದು ನಂತರ ಫ್ರೆಂಚೂ ಇಲ್ಲ ಪೀಯಾನೋನೂ ಇಲ್ಲ. ಪೆಡಿಕ್ಯೂರ್, ಮೆನಿಕ್ಯೂರ್,
ಐ ಬ್ರೋಗಳನ್ನು ಕಾಲಕಾಲಕ್ಕೆ ಮಾಡಿಸುವ ಆಸಕ್ತಿಯ ಅರ್ಧದಷ್ಟಾದರೂ ನಿನಗೆ ಫ್ರೆಂಚ್ ಮತ್ತೆ ಪೀಯಾನೋ
ಮೇಲೆ ಇದ್ದಿದ್ದರೆ ಅದರ ಕಥೆಯೇ ಬೇರೆಯಾಗುತ್ತಿತ್ತು. ಹೋಗಲಿ ಬಿಡು ಇದನ್ನಾದರೂ regular
ಆಗಿ
ಮಾಡಿಸಿದಿಯಲ್ಲಾ.
ಅದೆಲ್ಲಾ ಹೋಗಲಿ ಬಿಡು ವಿಷಯ
ಗೊತ್ತಾ, ಮಹಿಮಾಳನ್ನು ನೋಡಲು ಬಂದ ಇಪ್ಪತ್ತೆರಡನೆಯ ವರನನ್ನು ಮಹಿಮಾಳ ಮನೆಯವರೇ ತಿರಸ್ಕರಿಸಿದ್ದರಂತೆ.
ಪಾಪ ಮಹಿಮಾಳಿಗೆ ಇಷ್ಟವಾಗಿದ್ದನಂತೆ ಹುಡುಗ, ಮನೆಗೆ ಮಹಿಮಾಳನ್ನು ನೋಡಲು ಬಂದಾಗ ಎಲ್ಲರಿಗೂ
ಒಪ್ಪಿಗೆಯಾಗಿದ್ದನಂತೆ, ಒಳ್ಳೆ ಕೆಲಸ, ಕೈತುಂಬಾ ಸಂಬಳ, ಸಿಗರೇಟು ಕುಡಿತ ಯಾವ ಚಟವೂ ಇಲ್ಲ, ನೋಡಲೂ
ಚೆನ್ನಾಗಿದ್ದನಂತೆ. ನಂಗೊತ್ತು ನೀನು ಏನು ಯೋಚಿಸುತ್ತಿದ್ದಿಯಾ ಅಂತ. ಹಾಗೇನೂ ಇಲ್ಲ, ಎಲ್ಲಾ
ಗಣಗಳು ಕೂಡಿಬಂದು ಜೋಯಿಷರು ಗ್ರೀನ್ ಸಿಗ್ನಲ್ ಕೊಟ್ಟಿದ್ದರಂತೆ. ಕಡೆಗೆ ಹುಡುಗನಿಗೆ
ಬೆಂಗಳೂರಿನಲ್ಲಿ ಮನೆ ಇಲ್ಲ ಅನ್ನೋ ಕಾರಣಕ್ಕೆ ತಿರಸ್ಕರಿಸಿದರಂತೆ. ಅಲ್ಲಾ, ಹುಡುಗ ಮತ್ತೆ ಅವನ
ಗುಣಗಳು ಮುಖ್ಯವೋ ಅಥವಾ ಅವನಿಗೆ ಬೆಂಗಳೂರಿನಲ್ಲಿ ಮನೆ ಇರೋದು ಮುಖ್ಯವೋ ನೀನೇ ಹೇಳು? ಈ ಜನಗಳನ್ನ ಅರ್ಥ
ಮಾಡಿಕೊಳ್ಳುವುದೇ ದೊಡ್ಡ ಸಮಸ್ಯೆ. ಮನೆಯಲ್ಲಿ ಊಟ ಮಾಡಬೇಕಾದರೆ ಇದನ್ನೇ ಹೇಳಿದೆ. ನೀನೊಂದು
ಪುಸ್ತಕದ ಬದನೆಕಾಯಿ ಎಂದು ಬೈದರು. ನಂಗೆ ಸರೀ ಸಿಟ್ಟು ಬಂದಿತ್ತು. ಕಡೆಗೆ ನಾನು ಓದಿದ ಪುಸ್ತಕಗಳೇ ’ಅವರಿಗೇನೋ
ಗೊತ್ತಿಲ್ಲದೇ ಹಾಗೆ ಮಾತನಾಡುತ್ತಾರೆ, ನೀನು ಇಷ್ಟು ಓದಿಕೊಂಡು ಮಾತನಾಡಿದರೆ ಹೇಗೆ?’ ಎಂದು
ನನ್ನನ್ನು ತಡೆದವು.
ನೋಡು ವಿಷಯ ಎಲ್ಲಿಂದ ಎಲ್ಲಿಗೆ ಬಂತು. ನಿನ್ನ ಸಾಹಸಗಳ ಬಗ್ಗೆ ಮಾತನಾಡುತ್ತಿದ್ದೆ
ಅಲ್ಲವಾ. ಅವೇ ವೀಕೆಂಡ್ ಪಾರ್ಟಿಗಳು, ಶಾರೂಕ್ ಖಾನನ ಸಿನಿಮಾಗಳು, ಮೆಗಾ ಸೀರಿಯಲ್ ಗಳು,
ಸ್ನೇಹಿತೆಯರ ಜೊತೆ ಕಾಡು ಹರಟೆ, ದೈನಂದಿನ ಕೆಲಸ ಕಾರ್ಯಗಳಲ್ಲಿ ನೀನು ಕಳೆದು
ಹೋಗಿದ್ದೆಯೆನ್ನುವುದನ್ನು ನೆನೆದು ಮನಸ್ಸು ಖಿನ್ನವಾಗುತ್ತಿದೆ. ತೂಕ ನೋಡಿದೆ.
ಐವತ್ತೆಂಟಿರಬೇಕಾದದ್ದು ಅರವತ್ತಮೂರೇ ಇದೆ. ಅಲ್ಲಾ ಮಾರಾಯ್ತಿ atleast ಇದನ್ನಾದರೂ
ಕಡಿಮೆ ಮಾಡಬಹುದಿತ್ತಲ್ಲ. ಹೋಗಲಿ ಬಿಡು, ಈಗ ಮಾತನಾಡಿ ಏನು ಪ್ರಯೋಜನ. ಎಲ್ಲ ಕೆಲಸವನ್ನೂ
ಮಾಡಲೇಬೇಕು. ಇಲ್ಲದೇ ಹೋದರೆ ಇಪ್ಪತ್ತೆಂಟರ ರಚನಾಳಿಂದ ನನಗೆ ಬಹಿರಂಗ ಪತ್ರ ಗ್ಯಾರಂಟಿ. ನಿನ್ನ
ಅನುಭವ ನಾನು ಸಾಗುವ ದಾರಿಯಲ್ಲಿ ಎಡವದಂತೆ ತಡೆಯುತ್ತದೆ ಅನ್ನುವುದಷ್ಟೇ ಈ ಕ್ಷಣದ ಸಮಾಧಾನ. ಇನ್ನೇನು
ಹೆಚ್ಚಿನ ವಿಷಯವಿಲ್ಲ.
ಪ್ರೀತಿಯಿಂದ.
nice.. ಕಳೆದ ವಾರವಷ್ಟೆ ನನ್ನ ಜನನವಾಯಿತು is bit confusing.. initially i thought 1 week baby is writing this.. later i understood that it was intended for birth date
ReplyDelete