- ಅಕ್ಷಯರಾಮ ಕಾವಿನಮೂಲೆ
ನನ್ನ ಊರಿನಲ್ಲಿ ಕೃಷಿಕರು ನಾಲ್ಕು ಜನ ಜೊತೆ ಸೇರಿದರೆ ಸಾಕು, ಹಳ್ಳಿಬದುಕಿನ ಕಷ್ಟ ಸುಖಗಳ
ಮಾತುಕತೆ ಶುರು. "ಮಂಗಂಗೊ ಇದ್ದವಾ ಭಾವಾ?" ಮೊದಲ ಪ್ರಶ್ನೆಯೇ ಮಂಗಗಳ ಬಗ್ಗೆ. "ಎಂಗಳಲ್ಲಿ ವಿಪರೀತ ಮಂಗಂಗೊ. ಬೊಂಡ, ಕೊಕ್ಕೋ, ಬಾಳೆ, ಅಡಕೆ ಒಂದೂ ಒಳುಶುತ್ತವಿಲ್ಲೆ"
ಗೋಳಿನ ಕತೆ ಎಲ್ಲರ ಬಾಯಲ್ಲಿ. ಸಭೆ ಸಮಾರಂಭಗಳಲ್ಲಿ ಬಿಸಿಬಿಸಿ ಚರ್ಚಾ ವಿಷಯ ಇದು!
ಮಂಗಗಳ ವಿಧ್ವಂಸ ಪ್ರತಾಪದ ವರ್ಣನೆ ಮಾಡುವವರು ಕೆಲವರಾದರೆ ಅವುಗಳನ್ನು
ಓಡಿಸುವ, ಕೊಲ್ಲುವ, ಹಿಡಿಯುವ ತಂತ್ರಜ್ಞಾನ ವಿವರಿಸುವವರು ಹಲವರು. ಗುಡ್ಡದಿಂದಿಳಿದು
ತೋಟಕ್ಕೆ ಲಗ್ಗೆಯಿಡುವ, ಎಳನೀರು ಕಿತ್ತು ಕುಡಿಯುವ ವಾನರಸೇನೆಯನ್ನು ವರ್ಣಿಸುವುದರಲ್ಲಿ ವಾಲ್ಮೀಕಿಯನ್ನೂ ಮೀರಿಸುವವರಿದ್ದಾರೆ. ಬೋನಿಟ್ಟು ಹಿಡಿಯುವುದು ಹೇಗೆ ಎಂದು ವಿವರಿಸುವ ತಜ್ಞ ಇಂಜಿನಿಯರುಗಳೂ ಹಲವರಿದ್ದಾರೆ.
ಮಂಗಗಳನ್ನು ಕೊಲ್ಲುವುದೇ ಸರಿಯೆನ್ನುವ 'ಉಗ್ರಗಾಮಿ'ಗಳ ಸಂಖ್ಯೆಯೂ ಕಡಿಮೆಯಿಲ್ಲ !
ಮಂಗಗಳನ್ನು ಕೊಲ್ಲುವುದೇ ಸರಿಯೆನ್ನುವ 'ಉಗ್ರಗಾಮಿ'ಗಳ ಸಂಖ್ಯೆಯೂ ಕಡಿಮೆಯಿಲ್ಲ !
ಹದವಾಗಿ ಹಣ್ಣಾದ ಬಾಳೆಗೊನೆಯನ್ನು ಆರಿಸಿ ಹಣ್ಣಿನೊಳಗೆ ಮಂಗಗಳಿಗೆ
ತಿಳಿಯದಂತೆ ರಾಟಾಲ್ ವಿಷ ಮಿಶ್ರಮಾಡುವುದು ಹೇಗೆ ಎಂಬ ವಿಷಯದ ಬಗ್ಗೆ ತರಬೇತಿ ನೀಡಲು
ನಮ್ಮೂರ ತಜ್ಞರೊಬ್ಬರು ನಿಂತರೆ, ಪಂಚತಾರಾ ಹೋಟೆಲಿನ ಬಾಣಸಿಗರೂ ನಾಚಿಕೊಳ್ಳಬೇಕು !
ಅರಿಯದೇ ವಿಷ ತಿಂದ ಮಂಗಗಳು ಬಾಯಾರಿ ನೀರಿಗಾಗಿ ಚಡಪಡಿಸಿ ಸಾಯುವ ವರ್ಣನೆಯೊಂದಿಗೆ ಅವರ
ಆಶೀರ್ವಚನ ಮುಕ್ತಾಯವಾದಾಗ ಸುತ್ತ ಬಾಯಿಬಿಟ್ಟು ಕುಳಿತ ಭಕ್ತಾಗ್ರೇಸರರು ತಲೆದೂಗುತ್ತಾರೆ
!
ಗೋ ಸಂರಕ್ಷಣೆಯ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ನಮ್ಮವರೊಬ್ಬರು ಕೋವಿಯೆತ್ತಿ
ತೋಟಕ್ಕಿಳಿದರೆ ದ್ರೌಪದಿ ಸ್ವಯಂವರದಲ್ಲಿನ ಅರ್ಜುನನಿಗೆ ಸಾಟಿ. ತಿರುಗುವ ಮತ್ಸ್ಯ
ಯಂತ್ರದ ಕಣ್ಣಿಗೆ ಅರ್ಜುನ ಗುರಿಯಿಟ್ಟರೆ ನಮ್ಮವರು ಮರದಿಂದ ಮರಕ್ಕೆ ಜಿಗಿಯುವ ಮಂಗಗಳ
ತಲೆಗೆ ಗುಂಡು ತೂರಿಸುವ ಸಾಮರ್ಥ್ಯವಂತರು. "ಕೊಂದ ಮಂಗಗಳನ್ನು ಮರದಲ್ಲಿಯೇ ನೇತುಹಾಕಿದರೆ
ಇತರ ಮಂಗಗಳಿಗೊಂದು ಪಾಠ ಕಲಿಸಿದಂತಾಗುತ್ತದೆ" ಎನ್ನುವುದು ಇವರ ಸ್ವಾನುಭವದ ಮಾತು.
ಗೋಮಾತೆಯ ರಕ್ಷಣೆ ಮಾಡಬೇಕು, ಗೋಹತ್ಯೆ ನಿಷೇಧವಾಗಬೇಕು ಎಂದೆಲ್ಲಾ ಬೊಬ್ಬಿಡುವ
ರಾಮಭಕ್ತರಿಗೆ ಮಂಗನಲ್ಲಿ ಹನುಮಂತ ಕಾಣಿಸುವುದೇ ಇಲ್ಲ !!
ಇನ್ನು ಮಂಗಗಳನ್ನು ಹಿಡಿದು ಕಾಡಿಗೆ ಬಿಡುವ ಮಹಾನುಭಾವಂದಿರ ಕತೆ ಇನ್ನೂ
ಭಯಾನಕ. ನಲುವತ್ತು, ಐವತ್ತು ಮಂಗಗಳ ಗುಂಪನ್ನೇ ಗೂಡಿಗೆ ತಳ್ಳಿ ದೂರ ಕೊಂಡೊಯ್ದು
ಇನ್ನೊಂದು ಊರಿಗೆ ಬಿಡುವವರಿದ್ದಾರೆ. "ಕಾಡಿಗೆ ಬಿಡುತ್ತೇವೆ" ಎಂದು ಬೊಗಳೆ ಬಿಟ್ಟು
ಅಷ್ಟೂ ಮಂಗಗಳನ್ನು ನಿರ್ದಯವಾಗಿ ನೀರಿನ ಡ್ರಮ್ಮಿಗೆ ಅದ್ದಿ ಮುಳುಗಿಸಿ ಕೊಂದು ಗುಂಡಿಗೆ
ಹಾಕುವವರೂ ಇದ್ದಾರೆ, ಮುಳುಗಿಸುವಷ್ಟು ಶ್ರಮ ಏಕೆಂದು ಸಜೀವ ಹೂಳುವವರೂ ಇದ್ದಾರೆ !
ಕರುಣೆಯ ಲವಲೇಶವೂ ಇಲ್ಲದ ನಮ್ಮವರ ಮಧ್ಯೆ ಇಂತಹ ಅಮಾನುಷ ಹತ್ಯೆ ತಪ್ಪೆಂದು ಹೇಳುವವರು ಯಾರು ?
ಕರುಣೆಯ ಲವಲೇಶವೂ ಇಲ್ಲದ ನಮ್ಮವರ ಮಧ್ಯೆ ಇಂತಹ ಅಮಾನುಷ ಹತ್ಯೆ ತಪ್ಪೆಂದು ಹೇಳುವವರು ಯಾರು ?
ಅಷ್ಟಕ್ಕೂ ಇಂದಿನ ಈ ಮಂಗಗಳ ಹಾವಳಿಗೆ ಕಾರಣ ಏನೆಂದು ಕುಳಿತು ಯೋಚಿಸುವ
ತಾಳ್ಮೆ ಯಾರಿಗಿದೆ? ದಶಕಗಳಿಂದ ಬೆಳೆದು ಬಂದ ನಮ್ಮ ರಬ್ಬರ್ ಕೃಷಿಯೇ
ಇಷ್ಟಕ್ಕೆಲ್ಲಾ ಕಾರಣ ಎಂದರೆ "ನಿನಗೆ ಮರ್ಲು" ಎಂದಾರು. ನಮ್ಮದಲ್ಲದ ರಬ್ಬರ್ ಬೆಳೆಯನ್ನು
ದಶಕಗಳ ಹಿಂದೆಯೇ ಅಪ್ಪಿಕೊಂಡೆವು ನಾವು. ರಬ್ಬರ್ ಮರಗಳ ಜೊತೆಗೆ ಒಂದೆರಡು ಬಳ್ಳಿಗಳ
ಹೊರತು ಇನ್ಯಾವ ಗಿಡವೂ ಬೆಳೆಯುವುದಿಲ್ಲ ಎಂಬ ಸತ್ಯ ರಬ್ಬರ್ ತೋಟದೊಳಗೆ ಒಮ್ಮೆ ಹೋಗಿ ಬಂದ
ಕುರುಡನಿಗೂ ಅರ್ಥವಾದೀತು. ರಬ್ಬರಿನ ಎಲೆ, ಕಾಯಿ ಯಾವುದೂ ತಿನ್ನಲು ಯೋಗ್ಯವಲ್ಲ.
ರಬ್ಬರ್ ತೋಟಗಳನ್ನು ಮಾಡುವ ರೀತಿಯೇ ವಿಚಿತ್ರ. ದಕ್ಷಿಣ ಕನ್ನಡದ ಸ್ವಾಭಾವಿಕ ಕುರುಚಲು ಕಾಡುಗಳನ್ನು ಸಮೂಹ ನಾಶ ಮಾಡಿ ಅಲ್ಲಿ ರಬ್ಬರ್ ಸಸಿಗಳನ್ನು ನೆಟ್ಟೆವು. ಸಾವಿರಾರು ಎಕರೆಗಳಷ್ಟು ವಿಶಾಲವಾದ ಕುರುಚಲು ಕಾಡು ನಾಶವಾಗಿ ರಬ್ಬರ್ ಎಂಬ ರಾಕ್ಷಸನ ಪ್ರತಿಷ್ಠಾಪನೆಯಾಯ್ತು. ಸವಿಸ್ತಾರವಾದ ಸರಕಾರಿ ರಬ್ಬರ್ ಕೂಪುಗಳು ಎದ್ದವು.
ಕುಂಟುನೇರಳೆ, ಚೇರೆ, ಸರಳಿ, ಕಾರೆ, ಚೂರಿ ಹಣ್ಣು, ಕೇಪುಳೆ, ಗೇರು, ಕಾಡು ಮಾವು, ಅಬ್ಬುಳುಕ, ಅಂಬಟೆ, ಹಲಸು, ಹೆಬ್ಬಲಸು, ಬೈನೆ ಇತ್ಯಾದಿ ಹಣ್ಣುಗಳು ಇನ್ನೂ ಹಲವು ಎಲೆ, ಸೊಪ್ಪುಗಳನ್ನು ತಿಂದು ಬದುಕುತ್ತಿದ್ದ ಮಂಗ ಇತ್ಯಾದಿ ವನ್ಯಜೀವಿಗಳಿಗೆ ಸಿಗುತ್ತಿದ್ದ ಆಹಾರ ಸರಪಳಿ ನಾಶವಾಯಿತು. ಹೊಟ್ಟೆಪಾಡಿಗಾಗಿ, ಅನಿವಾರ್ಯವಾಗಿ ಅವು ತೋಟಗಳಿಗೆ ಲಗ್ಗೆಯಿಡುವಂತಾಯಿತು. ಏಕಪ್ರಕಾರದ ಕೃಷಿಯಿಂದಾಗಿ(Mono culture)ನಾಶವಾದ ಜೀವವೈವಿಧ್ಯಕ್ಕೆ ನಾವು ತೆರಬೇಕಾದ ಬೆಲೆಯೇ ಇಂದಿನ ಮಂಗಗಳ ಹಾವಳಿ.

ಅವುಗಳ ಆಹಾರವನ್ನು ನಾಶಮಾಡಿ ನಮ್ಮ ಬೆಳೆ ಹಾಳಾಯಿತು ಎಂದು ಬೊಬ್ಬಿಡುವ,
ಕಂಡಲ್ಲಿ ಮಂಗಗಳನ್ನು ಕೊಲ್ಲುವ ಸುಸಂಸ್ಕೃತರಿಗೆ ಇವ್ಯಾವುದೂ ಅರ್ಥವಾದಂತೆ
ಕಾಣುತ್ತಿಲ್ಲ. ನಮ್ಮ ಗುರಿ ಒಂದೇ, ಎಷ್ಟು ಸಾಧ್ಯವೋ ಅಷ್ಟು ದುಡ್ಡು ಮಾಡುವುದು. ಈ
ಪ್ರಕ್ರಿಯೆಯಲ್ಲಿ ಇತರ ಜೀವಿಗಳ ಬದುಕು ನಮಗೆ ಮುಖ್ಯವಲ್ಲ !
ನಮ್ಮಂತೆ ಇತರ ಜೀವಿಗಳಿಗೂ ಈ ಭೂಮಿಯ ಮೇಲೆ ಬದುಕುವ ಹಕ್ಕಿದೆ. ಭಗವಂತನ
ಸೃಷ್ಟಿಯಲ್ಲಿ ಸರ್ವರಿಗೂ ಸಮಬಾಳು ಎಂಬ ಸತ್ಯ ಅರ್ಥವಾಗುವ ದಿನವೆಂದು ಬರುವುದೋ?
ಕಾದು ನೋಡಬೇಕು.
yes .ನಮ್ಮಂತೆ ಇತರ ಜೀವಿಗಳಿಗೂ ಈ ಭೂಮಿಯ ಮೇಲೆ ಬದುಕುವ ಹಕ್ಕಿದೆ...tumba chennagi moodi bandide...
ReplyDelete