ಬದಲಾವಣೆ

-ರವಿಶಂಕರ್ ಶಾಸ್ತ್ರಿ

ಆಗಷ್ಟೇ ಅವನು ಕಛೇರಿಯಿಂದ ಮನೆಗೆ ಬಂದಿದ್ದ. ಬಾಗಿಲು ತೆಗೆಯುತ್ತಲೇ ಎದುರುಗಡೆ ವರ್ಷದ ಮಗ ನಿಂತಿದ್ದ. ಅವನ ಕೈಯಲ್ಲಿ ಮೊನ್ನೆ ತಾನೇ ಹೊಸದಾಗಿ ಕೊಡಿಸಿದ್ದ ರಿಮೋಟ್ ಕಾರ್ ಇತ್ತು. ಅದರ ಚಕ್ರಗಳು ಮುರಿದು ಹೋಗಿದ್ದವು.
೭೦೦ ರೂಪಾಯಿ ಕೊಟ್ಟು ಖರೀದಿಸಿದ ಕಾರ್ ಅದು. ಎರಡೇ ದಿನದಲ್ಲಿ ಅದನ್ನು ಹಾಳು ಮಾಡುವುದೆಂದರೆ ಏನರ್ಥ. ಈಗಿನ ಮಕ್ಕಳಿಗೆ ದುಡ್ಡಿನ ಬೆಲೆಯೇ ಗೊತ್ತಿಲ್ಲ. ನಮ್ಮ ಬಾಲ್ಯದಲ್ಲಿ ಥರದ ಆಟಿಕೆಗಳು ಇರಲೇ ಇಲ್ಲ. ಇದ್ದವನ್ನು ಹೀಗೆ ಬೇಜವಾಬ್ದಾರಿಯಿಂದ ಹಾಳು ಮಾಡುತ್ತಲೂ ಇರಲಿಲ್ಲ.  ಕಾಲದಲ್ಲಿ ಕೇಳಿದಾಕ್ಷಣ ನಮಗೆ ಕೇಳಿದ್ದನ್ನೆಲ್ಲ ತೆಗೆದುಕೊಡುವವರು ಇರಲಿಲ್ಲ. ಎಲ್ಲದಕ್ಕೂ ಒಂದು ಲೆಕ್ಕಾಚಾರ ಇರುತ್ತಿತ್ತು. ಈಗ ಎಲ್ಲವೂ ಬದಲಾಗಿದೆ.
ಮುರಿದ ಕಾರನ್ನು ಕಂಡಾಗ ಇದೆಲ್ಲವೂ ಅವನ ತಲೆಯಲ್ಲಿ ಒಮ್ಮೆ ಮಿಂಚಿ ಮರೆಯಾಯಿತು. ಆದರೆ ಅವನು ಸ್ವಲ್ಪವೂ ಕೋಪಿಸಿಕೊಳ್ಳಲಿಲ್ಲ! ಬದಲಾಗಿ, ಮಗನಿಗಾಗಿ ಅವನು ತಂದಿದ್ದ ಚಾಕ್ಲೇಟ್ ಕೊಟ್ಟು ಅವನ ತಲೆ ನೇವರಿಸಿದ. ಮಗ ಖುಷಿಯಿಂದ ಕಣ್ಣರಳಿಸಿ ಚಾಕ್ಲೇಟ್ ತೆಗೆದುಕೊಂಡು ಓಡಿದ.

ಬದಲಾದ ಕಾಲಘಟ್ಟದಲ್ಲಿ ತಂದೆ-ಮಗ ಇಬ್ಬರೂ ಬದಲಾಗಿದ್ದಾರೆ! ಹೊಸದಾದ ಆಟಿಕೆ ಮುರಿದು ಹೋದರೂ, ಜೀವವಿಲ್ಲದ ವಸ್ತುವಿಗಾಗಿ ಒಬ್ಬನೇ ಮಗನನ್ನು ಗದರಿಸಿ, ಮುದ್ದು ಮನಸಿಗೆ ನೋವುಂಟು ಮಾಡಿ, ತನ್ನ ಮೂಡ್ ಕೂಡ ಹಾಳು ಮಾಡಿಕೊಳ್ಳಲು ಆಧುನಿಕ ಅಪ್ಪ ತಯಾರಿರಲಿಲ್ಲ!

2 comments:

  1. ಪರಿವರ್ತನೆ ಜಗದ ನಿಯಮ,ಲೇಖನ ಚುಟುಕಾಗಿದ್ದರೂ ಮಾರ್ಮಿಕವಾಗಿದೆ.

    ReplyDelete
  2. ಪರಿವರ್ತನೆ ಜಗದ ನಿಯಮ,ಲೇಖನ ಚುಟುಕಾಗಿದ್ದರೂ ಮಾರ್ಮಿಕವಾಗಿದೆ.

    ReplyDelete