- ನಾಮದೇವ್ ರೇಣಕೆ
ಹೆಸರೇ, ಓ ಹೆಸರೇ..! ನಿನ್ನ ಹೆಸರಿಗೊಂದು ಹೆಸರನಿಟ್ಟವರಾರು? ಆ ಹೆಸರನ್ನೇ ಹೆಸರಾಗಿ ಹೆಸರಿಸಿದವರಾರು?
ಹೆಸರು..! ಇದೆಂತಹ ವಿಚಿತ್ರವಲ್ಲವೇ? ಹೆಸರು ಎಂದಾಕ್ಷಣ ನೆನಪಾಗುವುದು ನಮ್ಮ ನಮ್ಮ ಪ್ರೀತಿಯ, ಮುದ್ದಿನ ಹೆಸರು.
ಹೌದು, ಎಲ್ಲರಿಗೂ ತಮ್ಮ ಸ್ವಂತ ಹೆಸರು ತಮಗೇನೇ ಅತಿಯಾದ ಖುಷಿ ಕೊಡುತ್ತೆ. ಎಲ್ಲರೂ ತಮ್ಮ ಹೆಸರನ್ನ ತುಂಬಾ ಪ್ರೀತಿಸುವರು. ದ್ವೇಷಿಸಿಸುವವರು ತುಂಬಾ ವಿರಳ ಅಥವಾ ಅಸಾಧ್ಯ.
'ಹೆಸರು' ಎನ್ನುವುದು ಯಾವುದೇ ಒಂದು ವಸ್ತು, ವ್ಯಕ್ತಿ ಅಥವಾ ಸ್ಥಳವನ್ನು ವಿವರಿಸುತ್ತದೆ. ಈ ಹೆಸರುಗಳಿಂದಲೇ ಸಂಭಾಷಣೆಗಳು ಸುಗಮವಾಗುತ್ತವೆ. ತಿಳುವಳಿಕೆ ಸರಾಗವಾಗುತ್ತದೆ. ಪ್ರತಿ ದಿನ, ಪ್ರತಿ ಕ್ಷಣ ನಾವು ಅದೆಷ್ಟೋ ಹೆಸರುಗಳನ್ನು ನಮಗೆ ಗುತ್ತಾಗದಂತೆ ನಮ್ಮ ದಿನನಿತ್ಯದ ವ್ಯವಹಾರದಲ್ಲಿ ಅಳವಡಿಸಿಕೊಂಡಿರುತ್ತೇವೆ. ಆದರೆ ಒಂದು ಮಾತಂತೂ ನಿಜ. ಹೆಸರುಗಳಿಗೆ ತಮ್ಮದೇ ಆದ ವೈಶಿಷ್ಟತೆ ಇದೆ. ಅದು ವ್ಯಕ್ತಿಯ ಹೆಸರಾಗಿರಬಹುದು, ವಸ್ತುವಿನ ಹೆಸರಾಗಿರಬಹುದು ಅಥವಾ ಪ್ರದೇಶದ ಹೆಸರಾಗಿರಬಹುದು. ಈ ಹೆಸರುಗಳಿಗೆ ಭಾಷೆಯ ಮಿತಿಯಿಲ್ಲ, ವಯಸ್ಸಿನ ಮಿತಿಯಿಲ್ಲ. ತಲತಲಾಂತರಗಳಿಂದ ಬಂದ, ಯುಗಯುಗಾಂತರದವರೆಗೂ ಮುಂದೂಗುವ ಈ ಹೆಸರುಗಳಿಗೆ ಕೊನೆಯೇ ಇಲ್ಲ.
ಇನ್ನೊಂದು ಹೆಸರಿದೆ, ಸಮಾಜದಲ್ಲಿ ನಾವು ಸಂಪಾದಿಸುವ ಹೆಸರು 'ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ' ಎಂಬಂತೆ ವೈಯಕ್ತಿಕ ಹೆಸರನ್ನು ಗಳಿಸುವುದು, ಅದನ್ನು ಕಾಪಾಡಿಕೊಳ್ಳುವುದು ಜೀವನದ ಒಂದು ಸವಾಲೇ ಸರಿ. 'ಆತ ತುಂಬಾ ಹೆಸರು ಮಾಡಿದ' ಅಂತ ಮಾತೊಂದು ವಾಡಿಕೆಯಲ್ಲಿದೆ. ಆ ಹೆಸರು ಮಾಡುವುದು ಒಳ್ಳೆಯತನದಲ್ಲೂ ಆಗಿರಬಹುದು ಅಥವಾ ಕೆಟ್ಟತನದಲ್ಲೂ ಆಗಿರಬಹುದು. ಇದನ್ನು ನಿರ್ಧರಿಸುವುದು ನಾವು ಮಾಡುವ ಕೆಲಸಕಾರ್ಯ ಮತ್ತು ನಮ್ಮ ಆಲೋಚನೆ. ಸಾಮಾನ್ಯವಾಗಿ ನಮ್ಮ ಹೆಸರುಗಳು, ನಮ್ಮ ಸಂಪ್ರದಾಯದ ಪ್ರಕಾರ, ನಮ್ಮ ಭಾವನೆಗಳಿಗೆ ತಕ್ಕಂತೆಯೇ ಇರುತ್ತವೆ. ಅಡ್ಡ ಹೆಸರುಗಳು(Nick Names) ವ್ಯಕ್ತಿಗಳನ್ನು ಹತ್ತಿರವಾಗಿಸುತ್ತವೆ, ಪ್ರೀತಿ ಹಂಚುತ್ತವೆ. ವಿಶ್ವಾಸ ಬಲವಾಗಿಸುತ್ತವೆ. ಎಲ್ಲರೂ, ಎಲ್ಲರನ್ನೂ ಅಡ್ಡ ಹೆಸರಿನಿಂದ ಕರೆಯಲಾಗುವುದಿಲ್ಲ. ಇದು ತುಂಬಾ ಆತ್ಮೀಯರೂ ಆದ, ತುಂಬಾ ಹತ್ತಿರವಾದವರಿಗೆ, ಹತ್ತಿರವಾದವರಿಂದ ಮಾತ್ರ.
ಅಂದಿನ ಆ ಕಾಲದ ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ಚಲನಚಿತ್ರಗಳ ಹೆಸರುಗಳನ್ನು ಗಮನಿಸಿದಾಗ ಆ ಚಿತ್ರಗಳಲ್ಲೇನಿವೆಯೆಂದು ಅವುಗಳ ಹೆಸರುಗಳೇ ವರ್ಣಿಸುವಂತಿದ್ದವು. ಆದರೆ ಕಾಲ ಕಳೆದಂತೆ, ಕಾಲಕ್ಕೆ ತಕ್ಕಂತೆ ಇಂದಿನ ಚಿತ್ರಗಳ ಹೆಸರನ್ನ ಸ್ವಲ್ಪ ಗಮನಿಸಿ. ಹೆಸರಿಸಲು ಇನ್ನಾವುದೇ ಹೆಸರೇ ಇಲ್ಲವೆಂಬಂತೆ ಇಲ್ಲಸಲ್ಲದ ಹೆಸರುಗಳನ್ನು ಇಡುವ ರೂಢಿಯು ಇವತ್ತಿನದಾಗಿದೆ. ಅಂದು ಬರೀ ಚಲನಚಿತ್ರಗಳ ಹೆಸರನ್ನಷ್ಟೇ ಕೇಳಿ ಅದೆಷ್ಟೋ ಜನ ತಮ್ಮ ಬದುಕನ್ನು ಸಾರ್ಥಕತೆಯತ್ತ ಕೊಂಡೊಯ್ದಿದ್ದಾರೆ. ಹಾಗೆಯೇ ಇಂದಿನ ಕೆಲವು ಚಲನ ಚಿತ್ರಗಳ ಹೆಸರನ್ನು ತಾವು ಕೇಳಿದಾಗ ನಿಮಗೇನೆನಿಸುತ್ತದೆ..? ಯೋಚಿಸಿ.
ಅರೇ..ಹೆಸರಲ್ಲೇನಿದೆ ಅಂತೀರಾ? ತಿಳಿದವರಿಗೆ ಎಲ್ಲವೂ ಹೆಸರಲ್ಲೇ ಇದೆ.ತಿಳಿಯಬೇಕೆನ್ನುವವರಿಗೆ ಹೆಸರೇ ಎಲ್ಲವೂ ಆಗಿದೆ. ತಿಳಿಯದೇ ಇರುವವರಿಗೆ ಹೆಸರೇ ಇಲ್ಲದಂತಾಗಿದೆ...
Basirininda Hesarindoge kone usirinavaregu jivanda mahatvavanna chutukagi heliddiya namdev...sogasagi mudide Kenyans ..olle arambha....
ReplyDelete*lekhana
DeleteBasirininda Hesarindoge kone usirinavaregu jivanda mahatvavanna chutukagi heliddiya namdev...sogasagi mudide Kenyans ..olle arambha....
ReplyDelete