-ರವಿಶಂಕರ್ ಶಾಸ್ತ್ರಿ
ಕಣ್ಣಂಚಿನಲಿ ಕಂಡು
ಉಸಿರಿನೊಳಗೆ ಬೆರೆತು ನೀ
ನನ್ನೊಳಗೆ ಬಂಧಿ.
-----------------------
ಬರೆಯ ಹೊರಟೆ ನಿನ್ನ ಬಗ್ಗೆ
ನನ್ನ ಪ್ರೇಮ ಕವಿತೆ
ಭಾವಿ ಮಾವನನ್ನು ನೆನೆದು
ಮನಸಿನಲ್ಲಿ ಬೆವೆತೆ.
-----------------------
ನೋವಿರಲಿ ನಲಿವಿರಲಿ
ನಾವಿರಲು ಜೊತೆಜೊತೆಗೆ
ನವಿರಾಗುವುದು ಜೀವನ.
-----------------------
ನೆರಳು ನೀಡುವ ಮರದ
ಕೊರಳು ಕತ್ತರಿಸಿದವ
ದುರುಳ ಮನಸಿನ ಮಾನವ.
----------------------
No comments:
Post a Comment