- ಮೋಹನ್ ಮೂರ್ತಿ ಮಾ ಕೆಂ
ಕೆಲವು
ದಿನಗಳ ಕೆಳಗೆ ದಿನಪತ್ರಿಕೆಗಳಲ್ಲಿ ಬಾಳೆಹಣ್ಣಿನ ದರ ಕುಸಿದು, ಹಣ್ಣನ್ನು ಬೆಳೆದ ರೈತರು ಬೇಸತ್ತು
ಉಚಿತವಾಗಿ ವಿತರಿಸಿದ ಸುದ್ದಿ ಬಂದಿತ್ತು. ಮೈಸೂರಿನ ಬಳಿಯ ರೈತರೊಬ್ಬರು ಹಲವು ಎಕರೆಯಷ್ಟು ಫಲ
ಬಿಟ್ಟಿದ್ದ ಬಾಳೆಗಿಡಗಳನ್ನು ಟ್ರ್ಯಾಕ್ಟರ್ ಉಪಯೋಗಿಸಿ ನಾಶ ಪಡಿಸಿದ್ದರು. ವಿಪರ್ಯಾಸವೆಂದರೆ ಅದೇ
ಸಮಯದಲ್ಲಿ ಗ್ರಾಹಕರು ಒಂದು ಕೆಜಿ ಬಾಳೆಹಣ್ಣಿಗೆ ೧೫ ರೂಪಾಯಿಯಿಂದ ೨೦ ರೂಪಾಯಿಗಳಷ್ಟು ಬೆಲೆ
ತೆತ್ತು ಕೊಳ್ಳುತ್ತಿದ್ದರು. ನಮ್ಮ ಸರ್ಕಾರದ ಜನಪ್ರತಿನಿಧಿಗಳದ್ದು ಇದರ ಬಗ್ಗೆ ದಿವ್ಯ ಮೌನ.
ಗುಪ್ತ ಚರರನ್ನು ಬಿಟ್ಟು ರೈತರು ನಿಜವಾಗಿ ಸಾಲಭಾದೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೋ
ಇಲ್ಲವೋ ಎಂದು ತಿಳಿದುಕೊಳ್ಳಲು ಯತ್ನಿಸುವ ನಮ್ಮ ’practical’ ಸರ್ಕಾರ, ಗ್ರಾಹಕರು ಅಷ್ಟೊಂದು ಬೆಲೆ ಕೊಟ್ಟರು
ಅದೇಕೆ ರೈತರಿಗೆ ಕೆಜಿ ಬಾಳೆಹಣ್ಣನ್ನು ಕೇವಲ ಒಂದು ಎರಡು ರೂಪಾಯಿಗೆ ಮಾರುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ ಎಂದು ವಿಚಾರಣೆ ನಡೆಸುವುದಿಲ್ಲ.