ಯಾರು ಅಸಲಿ?

- ತಾಜು ಕಲ್ಲಡ್ಕ


ಕವನವನ್ನು  ಮಾಡುವರು ನಕಲಿ
ಗೋತ್ತಾಗಲ್ಲ ಯಾರು ಅದರ ಅಸಲಿ
ನೋಡುವರು ಸಂಶಯದಲಿ
ಬರೆಯುವರು ಕಷ್ಟದಲಿ
ಸಿಕ್ಕಿದ ಸಮಯದಲಿ
ಬಗೆ ಬಗೆಯ ಚಿಂತೆಯಲಿ



ಗುಂಪಿಗೆ ಕಳುಹಿಸುವರು ಸಂತೋಷದಲಿ
ಬೇರೊಂದು ಗುಂಪಿನಲಿ
ಇನ್ನೊಬ್ಬರ ಹೆಸರಿನಲಿ
ಬಂದಾಗ ಅವರ ಮನದಲಿ
ಆಗುವ ನೋವು ಇಲ್ಲಿ
ಹೇಳುವುದು ಯಾರಲ್ಲಿ

ನಿಲ್ಲಲಿ ಕಳ್ಳರ ಹಾವಳಿ
ಬರೆದವನಿಗೆ ನ್ಯಾಯ ಸಿಗಲಿ
ಮೋಸವನ್ನು ಜನ ತಿಳಿಯಲಿ
ಒಂದಾಗಿ ಸಾಹಿತ್ಯ ಲೋಕದಲಿ
ಹೋರಾಡಿ ಕವನದ ರೂಪದಲಿ

No comments:

Post a Comment