ದ್ವಂದ್ವ
- ರವಿಶಂಕರ್ ಶಾಸ್ತ್ರಿ
ಪ್ರತಿಭಟನೆ, ಹೋರಾಟ
ಎಲ್ಲೆಡೆಯೂ ಕಾವು
ದೇಶಪ್ರೇಮವ ಮರೆತ
ಪ್ರಜೆಗಳಾದೆವೆ ನಾವು?
ಎಲ್ಲ ಹೋರಾಟದಲು
ಎರಡೆರಡು ಬಣವು
ವಿರೋಧಕ್ಕಾಗಿ ವಿರೋಧ
ಇದೇನಾ ನಮ್ಮ ನಿಲುವು
ಶಾಲೆ-ಕಾಲೇಜುಗಳಲ್ಲಿ
ರಾಜಕೀಯದ ಛಾಯೆ
ಸರಿ-ತಪ್ಪು ಅರಿಯದೆ
ಆವರಿಸಿತೇ ಮಾಯೆ?
ಒಬ್ಬಿಬ್ಬರ ಸ್ವಾರ್ಥಕೆ
ಬಲಿಯಾಯಿತೆ ಜನಸಮೂಹ
ಎಲ್ಲರಿಗೂ ಬಂದಿದೆಯೇ
ಪ್ರಚಾರದ ಮೋಹ?
No comments:
Post a Comment