- ಉದಯ ಪೆರುವಾಜೆ, ವಿಟ್ಲ
ಹೌದು, ದೇಶಕ್ಕೆ ನೀತಿ ನಿಯಮ, ಧೋರಣೆ, ದಿಕ್ಸೂಚಿ ನೀಡುವ ಕೇ೦ದ್ರ
ದ ಪಕ್ಕದಲ್ಲೇ ಅಭಿವ್ಯಕ್ತಿ ಸ್ವಾತ೦ತ್ರ್ಯ ದ ಹೆಸರಿನಲ್ಲಿ ಅವಿವೇಕಿ ಗಳು ದೇಶದ್ರೋಹಿ ಘೋಷಣೆ
ಕೂಗಿದ್ದಾರೆ! ತನ್ಮೂಲಕ ಬೇಲಿ ಇಲ್ಲದ ಸ್ವಾತಂತ್ರ್ಯ ಎಷ್ಟು ಅನಾಹುತಕಾರಿ ಎಂಬುದನ್ನೂ
ನಿರೂಪಿಸಿದ್ದಾರೆ. ಈ ಘೋಷಣೆಯನ್ನು ಅಲಕ್ಷಿಸೋಣವೇ ಎಂದರೆ ಘೋಷಣೆ ಕೂಗಿದ್ದು ಬೇರಾರೂ ಅಲ್ಲ,
ಪ್ರತಿಷ್ಟಿತ ಜೆ ಎನ್ ಯು (ಜವಹರಲಾಲ್ ನೆಹರೂ ಯುನಿವರ್ಸಿಟಿ)
ವಿದ್ಯಾರ್ಥಿಗಳು. ದೆಹಲಿಯ ಅಥವಾ ಅದರ ಆಸು ಪಾಸಿನ ಯುನಿವರ್ಸಿಟಿ ಅಂದರೆ ಹಾಗೆಯೇ. ಸ್ವಲ್ಪತೂಕ
ಹೆಚ್ಚೇ. ನಮ್ಮ ರಾಜಕೀಯ ವಲಯದಲ್ಲಿ. ಜೆ ಎನ್ ಯು,
ಅಲಿಗಢ್, ಡೆಲ್ಲಿ ಯುನಿವರ್ಸಿಟಿ ಗಳು ರಾಜಕೀಯ ಕೇಂದ್ರ ದ
ಪಕ್ಕದಲ್ಲಿರುವುದರಿಂದ ಸ್ವಾಭಾವಿಕವಾಗಿ ರಾಜಕೀಯ,
ಉದ್ಯೋಗ, ಮಾಧ್ಯಮ, ಪ್ರಭಾವಿ ವಲಯಗಳ ಲಾಬಿ ಗಳು
ಚೆನ್ನಾಗಿ ಕರಗತಗೊಂಡಿರುವುದರಿಂದ ಕಾಲೇಜು ವಿದ್ಯಾರ್ಥಿ ಚುನಾವಣೆಗಳೂ ರಾಜಕೀಯ ಪಕ್ಷಗಳ
ಪ್ರಭಾವಿಗಳ ನೆರಳಿನಡಿಯಲ್ಲೇ ನಡೆಯುತ್ತವೆ. ಅದೂ ಇತರೇ ಚುನಾವಣೆಗಳಂತೆ ಒಂದಷ್ಟು ಹೊಡೆದಾಟ, ಬಡಿದಾಟಗಳ ಜೊತೆಯಲ್ಲೇ! ವಿದ್ಯಾರ್ಥಿ ನಾಯಕ ಗುಂಪಿನವನಾದರೆ
ರಾಜಕೀಯ ನಾಯಕರ ಜೊತೆ ಒಡನಾಟ, ವೇಗವಾಗಿ ರಾಜಕೀಯದ ಏಣಿ
ಏರುವ ಅವಕಾಶ. ಹಾಗಾಗಿ ಒಂದಲ್ಲ ಒಂದು ರೀತಿಯ ಸರ್ಕಸ್ ಮಾಡಿ ತನ್ನೆಡೆಗೆ ತಮ್ಮ ನಾಯಕನ ಗಮನ
ಸೆಳೆಯಲು ಬುದ್ಧಿಗೇಡಿ ಹಳಸಲು ಚಿಂತನೆಗಳ ಮಂಡನೆ,
ದೇಶದ
ನ್ಯಾಯಾಂಗ, ಕಾರ್ಯಾಂಗ ದ ಮೇಲಿನ
ಧಾಳಿಗಳೂ ಮುಕ್ತ ಅಭಿವ್ಯಕ್ತಿಯ ಮೂರ್ತ ರೂಪಗಳಲ್ಲಿ ಗೋಚರಿಸುತ್ತವೆ. ನಮ್ಮ ಮಾಧ್ಯಮದ ತುಂಬೆಲ್ಲಾ
ಇಂತಹವರೆ ದೇಶದ ಆಗು ಹೋಗುಗಳ ಮಾಧ್ಯಮ ನ್ಯಾಯಾಧೀಶರಾಗುತ್ತಾರೆ, ಮಾತ್ರವಲ್ಲ ತಮಗಿರುವ ಸಂಪರ್ಕಗಳ ಸಹಕಾರದಿಂದ ಸರಕಾರದ ಆಯಕಟ್ಟಿನ
ಸ್ಥಾನ ವನ್ನೂ ಅಲಂಕರಿಸುತ್ತಾರೆ, ಜೊತೆಗೆ ಪ್ರಶಸ್ತಿಗಳ ದಲ್ಲಾಳಿಗಳೂ ಆಗಿ ತಮ್ಮ ಜೇಬು, ಸ್ಥಾನ ಭದ್ರಪಡಿಸಿಕೊಳ್ಳುತ್ತಾರೆ.
ಇಂತಹ ಪಥ ಭ್ರಷ್ಟರೇ ಇಂದಿಗೂ ವಿದ್ಯಾರ್ಥಿ ಚುನಾವಣೆಯ ಆಸರೆಗಲ್ಲುಗಳು. ಅದಿಲ್ಲದಿದ್ದರೆ, ವಿದ್ಯಾರ್ಥಿ ನಾಯಕನಿಗೆ ಕಾಶ್ಮೀರದ ಪ್ರತ್ಯೇಕತಾವಾದಿ
ನಾಯಕನೊಡನೆ ಚರ್ಚಿಸಲು ಅದ್ಯಾವ ಘನಂದಾರಿ ಶೈಕ್ಷಣಿಕ ಮಾತುಕತೆ ವಿಷಯವಿತ್ತೋ! ಅದೂ ಆ
ಯುನಿವರ್ಸಿಟಿಯ ಕುಲಪತಿಯ ತಲೆಗೂ ಹೊಳೆಯದ್ದು!! ಇದ್ಯಾವ ಸೀಮೆಯ ನಾಯಕತ್ವ ತರಬೇತಿ? ಉಪ್ಪುಂಡ ಮನೆಗೆ ದ್ರೋಹ ಬಗೆವ ಇವರೂ ದೇಶದ ಭವಿಷ್ಯತ್ತಿನ
ಭರವಸೆಗಳೇ? ಇದಕ್ಕಾಗಿ ಕಾಲೇಜಿನಲ್ಲಿ
ಚುನಾವಣೆ ನಡೆಯೋದಾ? ಎಂತಹಾ ತಿಳಿಗೇಡಿ
ಮಾನಸಿಕತೆ, ಅಲ್ಲವೇ?
ದೇಶದ
ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ಹೋರಾಟ,
ಬಲಿದಾನಗಳು ಇಂದು ಸತ್ವಹೀನ ಸರಕುಗಳಾದದ್ದು ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯ ದೌರ್ಭಾಗ್ಯ! ಇಂದು
ಕೇಂದ್ರದಲ್ಲಿನ ಸರಕಾರದ ರಾಜಕೀಯ ನಿಲುಮೆ,
ಒಲುಮೆ
ಬೇರೆ ಎನ್ನುವುದೇ ನಮ್ಮ ರಾಜಕೀಯ ನಾಯಕರ ವಿಷಯದ ಮೇಲಣ ಅಭಿಪ್ರಾಯ ರೂಪಿಸುವಲ್ಲಿ ನಿರ್ಣಾಯಕ ಅಂತ
ಆಗುವುದಾದರೆ, ಈ ದೇಶದಲ್ಲಿ
ಸಂವಿಧಾನಕ್ಕೆ ಬೆಲೆನೆಲೆ, ಸಂವಿಧಾನ ಹೇಳಿರದ ಸಮಾಜದ
ಶಿಷ್ಟ ಪರಂಪರೆ, ಸಭ್ಯತೆಗಳಿಗೆ
ಮೌಲ್ಯವೆಲ್ಲಿ?
ಇಂದು 1857
ರ
ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ನಾಂದಿ ಹಾಡಿದ ಸಿಪಾಯಿ ದಂಗೆ ಯ ಮೂಲ ಕಾರಣವಾದ ದನ ಮತ್ತು ಹಂದಿಯ ಕೊಬ್ಬನ್ನು ಸೈನಿಕರ ತೋಪುಗಳಿಗೆ ಸವರಿದ ಬ್ರಿಟೀಷರ ಕುತಂತ್ರ ಎನ್ನುವುದು ನಮ್ಮಲ್ಲಿ ಆ ಸೈನಿಕರ
ಬಲಿದಾನದ ಕುರಿತು ಒಂದು ಹೆಮ್ಮೆಯನ್ನಾದರೂ ಮೂಡಿಸಿತಾ?
ಇತಿಹಾಸದ ಪುಟಗಳನ್ನು ಮರೆಯೋಣ. ಏಕೆಂದರೆ ವರ್ತಮಾನ ಇತಿಹಾಸದ ಮೆಲುಕುಗಳನ್ನು ಪುನರಾವರ್ತಿಸುತ್ತದೆ. ಬಾಹ್ಯ ಆಕ್ರಮಕಾರರು ನಮಗಿಂತ, ನಮ್ಮವರಿಗಿಂತ ಹೆಚ್ಚು ವಿಶ್ವಾಸಿಗಳಾಗುತ್ತಿದ್ದಾರೆ. ಜನ ಹೆಚ್ಚೆಚ್ಚು ಪ್ರಚಾರಪ್ರಿಯರಾಗುವ ಭರದಲ್ಲಿ ಬಾಲಂಗೋಚಿ ಯುವ ಪಡೆಯ ನಿರ್ಮಾಣ ಮಾಡುತ್ತಿದ್ದಾರೆ. ಯುವ ಜನಾಂಗ ಪಕ್ಷ ಸಿದ್ಧಾಂತಗಳ ದಾಸರಾದ ಕಾರಣವೋ ಏನೋ, ರಾಜಕೀಯ ನಾಯಕರಿಗೆ ವಿದ್ಯಾರ್ಥಿ ಸಂಘಟನೆ ಎನ್ನುವುದು ಕುರಿ ಮಂದೆಯಂತೆ ಭಾಸವಾಗುತ್ತದೆಯೋ ಏನೊ. ಸಂಘಟನೆ ಎನ್ನುವುದು ವಿದ್ಯಾರ್ಥಿ ಭವಿಷ್ಯತ್ತಿಗಿಂತ ರಾಜಕೀಯ ಆಟಗಳ ದಾಳ ಗಳಾಗುತ್ತದೆ. ಹಾಗಾಗಿಯೆ ಇಂದು ತಾಯಿಗೆ, ದೇಶದ ಅನ್ನ, ವಿದ್ಯೆ ,ಸಬ್ಸಿಡಿ, ಪಡೆದೂ ದೇಶಕ್ಕೆ, ಧಿಕ್ಕಾರ ಕೂಗಿದ ದಾರಿ ತಪ್ಪಿದ ಯುವಜನತೆ ರಾಜಕೀಯ ನಾಯಕರ ಬೆಂಬಲ ಗಳಿಸಲು ಶಕ್ತನಾಗುತ್ತಾನಾದರೆ ನಮ್ಮ ರಾಜಕೀಯ ನಾಯಕರು ಎಂತಹ ತಳಪಾತಳಕ್ಕೆ ತಲುಪಿದ್ದಾರೆ ಎನ್ನುವುದು ಸರ್ವ ವೇದ್ಯ. 65% ಯುವ ಸಮೂಹ ಇರುವ ದೇಶದಲ್ಲಿ ದೇಶದ್ರೋಹಿಗಳು ಮೇಲುಗೈ ಸಾಧಿಸುತ್ತಿರುವುದು ನಮ್ಮ ದೇಶದ ದುರಂತ. ಈ ದೇಶದಲ್ಲಿ ಯುವ ಜನರಿಗೆ ಶಿಕ್ಷಣ, ವಸತಿ, ಉದ್ಯೋಗ ಯಾವುದೂ ನಮ್ಮ ಚಿಂತಕ ವಲಯದ ವಿಚಾರಗಳೇ ಅಲ್ಲ. ನೈಜ ಚಿಂತಕ ವಲಯ ಪ್ರಚಾರದಲ್ಲೇ ಇಲ್ಲ. ಟಿವಿ ಜ್ಯೋತಿಷಿಗಳು ಆಸ್ತಿಕನ ಮನ ಕೆಡಿಸುವಂತೆ ಮಾಧ್ಯಮ ರಂಗದ ಹುಸಿ ಚಿಂತಕರೂ ಈ ದೇಶದ ಯುವ ಜನಾಂಗದ ತಲೆ ಕೆಡಿಸುತ್ತಿದ್ದಾರೆ.
ದೇಶದ ಒಳಗಡೆ ಇದ್ದೇ ತನ್ನ ಪ್ರತ್ಯೇಕ ಅಸ್ತಿತ್ವ ಉಳಿಸಿ, ದೇಶದ್ರೋಹಿ ಚಟುವಟಿಕೆಗಳ ಕಾರಸ್ಥಾನವಾದ ಜಮ್ಮು ಕಾಶ್ಮೀರ ದ ಕೃತಘ್ನ ನಾಯಕರೂ ಇಂದು ನಮ್ಮ ಸಮಾಜದ ಗೌರವಾನ್ವಿತ ಹೋರಾಟಗಾರರು! ದಿಕ್ಕು ತಪ್ಪಿದ ಚಿಂತಕ ವಲಯ, ಪೊಳ್ಳು ಸಿದ್ಧಾಂತವಾದಿಗಳು, ಬೇಲಿ ಇಲ್ಲದ ಸ್ವಾತಂತ್ರ್ಯ, ಅರ್ಥಹೀನ ಪ್ರಚಾರಪ್ರಿಯತೆ, ಸ್ವಂತಿಕೆ ಇಲ್ಲದ ಯೋಚನೆ, ಎಲ್ಲವನ್ನೂ ಮತ ಬ್ಯಾಂಕ್ ನಿರ್ಮಾಣಕ್ಕೆ ಬಳಸುವ ರಾಜಕೀಯ ಇಂದು ಅಫ್ಜಲ್ ಗುರುವಿನ ಹೆಸರಿನಲ್ಲಿ ಭಾರತ ನಿರ್ನಾಮ ದ ಸಂಕಲ್ಪ ಅದೂ ದೇಶದ ರಾಜಧಾನಿಯಲ್ಲೆ ಮೊಳಗುವಂತೆ ಮಾಡಿದೆ. ತಪ್ಪು ಮಾಡಿದ್ದು ಭಾಷಣ ಬಿಗಿಯುವ ಆವೇಶದಲ್ಲಿನ ಅವಿವೇಕ ಒಂದಾದರೆ, ಮಾಡಿಸಿದ್ದು......?

No comments:
Post a Comment